ಶನಿವಾರಸಂತೆ, ಸೆ. ೧: ಸೋಮವಾರಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ಒಕ್ಕೂಟದ ವತಿಯಿಂದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದ ಹೊರ ಆವರಣವನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಸೇವಾ ಪ್ರತಿನಿಧಿ ಮಂಜುಳಾ ಲೋಕೇಶ್ ನೇತೃತ್ವದಲ್ಲಿ ಒಕ್ಕೂಟದ ಅಧ್ಯಕ್ಷೆ ಶಾಹಿನ್ ತಾಜ್ ಹಾಗೂ ಸದಸ್ಯೆಯರಾದ ಜಮುನಾ, ಸಹನಾ, ಪರ್ವಿನ್, ಪೂರ್ಣಿಮಾ, ಜಲಜಾ, ವಾರಿಜಾ, ಭೂಮಿಕಾ, ಅಪ್ಸಾನಾ, ಜಗದೀಶ್, ವೆಂಕಟೇಶ್ ಶ್ರಮದಾನ ಮಾಡುವ ಮೂಲಕ ಬನದ ಆವರಣದಲ್ಲಿದ್ದ ಕಳೆಸಸ್ಯಗಳನ್ನು ಕಡಿದು ಸ್ವಚ್ಛಗೊಳಿಸಿದರು.