ಪೊನ್ನಂಪೇಟೆ, ಸೆ. ೧: ಪೊನ್ನಂಪೇಟೆಯ ಕೊಡವ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ೨೦೧೭ರಲ್ಲಿ ಆರಂಭಗೊAಡಿರುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜು ೧೦ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ “ಘಿ ಕಿUಇSಖಿಂ – ಖಿhe ಕಿuesಣ ಜಿoಡಿ ಏಟಿoತಿಟeಜge ಚಿಟಿಜ ಅಡಿeಚಿಣiviಣಥಿ” ಎಂಬ ವಿಶೇಷ ಸ್ಪರ್ಧಾ ಕಾರ್ಯಕ್ರಮವನ್ನು ತಾ.೧೩ ರಂದು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು, ಆತ್ಮವಿಶ್ವಾಸ ವೃದ್ಧಿಸುವುದು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ೯ ನೇ ತರಗತಿ ಹಾಗೂ ೧೦ ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದ ಹೆಸರು ಮತ್ತು ಪೋಸ್ಟರ್ ಅನಾವರಣ
ಸ್ಪರ್ಧೆಯ ಹೆಸರು ಅನಾವರಣಗೊಳಿಸಿ ಮಾತನಾಡಿದ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಕಾರ್ಯಪ್ಪ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಲು ಅಗತ್ಯವಿರುವ ಅವಕಾಶಗಳನ್ನು ಕಲ್ಪಿಸುವುದು ಸೊಸೈಟಿಯ ಪ್ರಮುಖ ಉದ್ದೇಶವಾಗಿದೆ. ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಸಾಲಿನ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭಾಷಿತ ಕೆ.ಡಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಸಿ.ಐ.ಪಿ.ಯು.ಸಿ. ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕಾಲೇಜಿನಲ್ಲಿ ಅಇಖಿ, ಓಇಇಖಿ ಮತ್ತು ಎಇಇ ಪರೀಕ್ಷೆಗಳಿಗೆ ತರಬೇತಿ, ವೃತ್ತಿ ಮಾರ್ಗದರ್ಶನ, ಆಪ್ತ ಸಮಾಲೋಚನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಪ್ರಾAಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸ್ಪರ್ಧೆಯ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದರು.
ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ.ರಾಕೇಶ್ ಪೂವಯ್ಯ ಪೊಸ್ಟರ್ ಅನಾವರಣಗೊಳಿಸಿ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲುವುದು ಸೋಲಲ್ಲ; ಭಾಗವಹಿಸದೇ ಹಿಂದೆ ಸರಿಯುವುದೇ ನಿಜವಾದ ಸೋಲು. ಆದ್ದರಿಂದ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ನೇತೃತ್ವವನ್ನು ಉಪನ್ಯಾಸಕರಾದ ಪ್ರೊ. ಅನುರಾಧ ಪಿ.ಜೆ, ಸುನಾಲ್ ಗೌರಮ್ಮ ಪಿ.ಎಸ್, ರಾಧಿಕಾ ಬಿ.ಕೆ ಮತ್ತು ಮೋನಿಕಾ ವಹಿಸಿದ್ದರು. ಸ್ಪರ್ಧೆಯ ಸಂಯೋಜಕರಾಗಿ ಶೃತಿ ಕೆ.ಎಸ್, ಡಾ.ಸುಶ್ಮಿತ ಕಾರ್ಯ ನಿರ್ವಹಿಸಿದರು. ಪ್ರಥಮ ಪಿ.ಯು ವಿದ್ಯಾರ್ಥಿನಿಯರ ತಂಡ ಫ್ಲ್ಯಾಷ್ ಮೊಬ್ ನೃತ್ಯ ಮಾಡಿತು. ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿವೃಂದದವರು ಪಾಲ್ಗೊಂಡಿದ್ದರು.
ಸ್ಪರ್ಧೆಯ ವಿವರ
ನೃತ್ಯ ಸ್ಪರ್ಧೆ: ಒಂದು ಶಾಲೆಯಿಂದ ಗರಿಷ್ಠ ಎರಡು ತಂಡಗಳು ಭಾಗವಹಿಸಬಹುದು. ಎರಡು ವಿಭಿನ್ನ ಥೀಮ್‌ಗಳಿಗೆ ಪ್ರತ್ಯೇಕ ತಂಡಗಳನ್ನು ಕಳುಹಿಸಬಹುದು ಅಥವಾ ಒಂದು ಶಾಲೆಯು ಒಂದೇ ಥೀಮ್‌ನಲ್ಲಿ ಒಂದು ತಂಡವನ್ನು ಕಳುಹಿಸಬಹುದು. ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪ್ರಮಾಣಪತ್ರಗಳನ್ನು ನೀಡಲಾಗುವುದು.
ರಸಪ್ರಶ್ನೆ ಸ್ಪರ್ಧೆ : ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಾಜ್ಯ, ಐ.ಸಿ.ಎಸ್.ಇ ಮತ್ತು ಸಿಬಿಎಸ್‌ಇ ಬೋರ್ಡ್ ಪಠ್ಯಕ್ರಮಕ್ಕೆ ಸಂಬAಧಿಸಿದ ಸೈನ್ಸ್, ಮ್ಯಾಥಮಿಟಿಕ್ಸ್ ಮತ್ತು ಆಪ್ಟಿಟ್ಯೂಡ್ ವಿಷಯಗಳನ್ನು ಆಧರಿಸಿ ಆನ್‌ಲೈನ್ ಮೂಲಕ ೫೦ ಅಂಕಗಳ ಒಅಕಿ ಪರೀಕ್ಷೆ ಆಯೋಜಿಸಲಾಗಿದೆ. ಪರೀಕ್ಷೆಯ ಅವಧಿ ೧ ಗಂಟೆ ೩೦ ನಿಮಿಷಗಳು.
ವಿಜೇತರಿಗೆ ಪ್ರಥಮ ರೂ.೧೦,೦೦೦, ದ್ವಿತೀಯ ರೂ.೯,೦೦೦ ತೃತೀಯ ರೂ.೮,೦೦೦ ನಗದು ಬಹುಮಾನ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ನೀಡಲಾಗುವುದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಚಿತ ಕಾಲೇಜು ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.
ಕೊಡಗು ಜಿಲ್ಲೆ ಹಾಗೂ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ವಿದ್ಯಾರ್ಥಿಗಳಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಗೆ ಉಚಿತ ಪ್ರವೇಶಾತಿ ಇದೇ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ : ೭೭೯೫೯೧೨೨೭೯ ಸಂಪರ್ಕಿಸಬಹುದು.