ಪೌಷ್ಟಿಕಾಂಶದ ಅರಿವು, ಆರೋಗ್ಯಕರ ಆಹಾರ ಮತ್ತು ಸಮತೋಲಿತ ಆಹಾರಕ್ರಮವನ್ನು ಉತ್ತೇಜಿಸಲು ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸುವ ದೃಷ್ಟಿಕೊನದಿಂದ ಪ್ರತಿ ವರ್ಷದಂತೆ ಈ ಬಾರಿಯ ಘೋಷವಾಕ್ಯ “ಪೋಷಣೆಯ ಶಕ್ತಿಯನ್ನು ಅನ್ವೇಷಿಸಿ” ಎಂಬ ಧ್ಯೇಯದೊಂದಿಗೆ ಸಮತೋಲಿತ ಆಹಾರದ ಮಹತ್ವವನ್ನು ತಿಳಿಸುವುದು, ರೋಗನಿರೊಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಸುಧಾರಿಸಲು ಮತ್ತು ದೀರ್ಘಕಾಲೀನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಇದಾಗಿದೆ.
ಸಮಾಜದಲ್ಲಿ ಇತ್ತೀಚೆಗೆ ಬೋಜ್ಜು ಮತ್ತು ಇತರ ಆರೋಗ್ಯ ಸವiಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಯಟ್ ಎಂಬ ಪದವು ಹೆಚ್ಚು ಪ್ರಚಾಲಿತವಾಗಿದೆ. ಮಾರುಕಟ್ಟೆಯಲ್ಲಿ ಇಂದು ಹಲವಾರು ಬಗೆಯ ಡಯಟ್ ಪ್ಲಾನ್‌ಗಳಿದ್ದು ಆರೋಗ್ಯದ ಪ್ರಯೋಜನ ಪಡೆಯುವುದೆಂದು ಜಾಹಿರಾತುಗಳ ಮೂಲಕ ಮಾಧ್ಯಮಗಳಲ್ಲಿ ಚಾನಲ್‌ಗಳಲ್ಲಿ ಜನರನ್ನು ಆಕರ್ಷಿಸಿ ಗಾಳ ಹಾಕುತ್ತಿರುವುದನ್ನು ನೆÆÃಡುತ್ತಿದ್ದೇವೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದೆ.
ನಮ್ಮ ದೇಶದಲ್ಲಿ ಅಪೌಷ್ಟಿಕತೆಯಿಂದ ದಿನಕ್ಕೆ ಸಾವಿರಾರು ಮಕ್ಕಳು, ವೃದ್ಧರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ೧೯೮೨ರಿಂದ ಭಾರತ ಸರ್ಕಾರ ಪೌಷ್ಟಿಕಾಂಶದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಭಾರತದಲ್ಲಿ ಸೆಪ್ಟಂಬರ್ ಮಾಹೆಯ ಮೊದಲ ವಾರದÀಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಆಚರಿಸುವ ಪದ್ಧತಿ ಜಾರಿಗೆ ತರಲಾಯಿತು. ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯಕರ ಸದೃಢ ದೇಹ ಮತ್ತು ಮನಸ್ಸಿಗೆ ಪೌಷ್ಟಿಕಾಂಶಯುತ ಆಹಾರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಮನುಷ್ಯನಿಗೆ ಆರೋಗ್ಯ ಒಂದು ಸಂಪತ್ತು. ತಪ್ಪಿದರೆ ಆಪತ್ತು. ಆರೋಗ್ಯ ವೃದ್ಧಿಗಾಗಿ ನಾವು ತಿನ್ನುವ ಆಹಾರ, ಕುಡಿಯುವ ನೀರು, ವಾಸಿಸುವ ಪರಿಸರವನ್ನು ಅವಲಂಬಿಸಿರುತ್ತದೆ.
ಆಧುನಿಕ ಜಗತ್ತಿನಲ್ಲಿದ್ದರೂ ಅಪೌಷ್ಟಿಕತೆಯಿಂದ ತಾಯಿ ಮರಣ, ಶಿಶು ಮರಣದ ಪ್ರಮಾಣ ಕಡಿಮೆಯಾಗದಿರುವುದು ವಿಷಾದನೀಯ ಸಂಗತಿ. ಅಪೌಷ್ಟಿಕತೆ ಎಂಬುದು ಮನುಷ್ಯ ತನಗೆ ತಾನೇ ನಿರ್ಮಿಸಿಕೊಂಡ ಕಾಯಿಲೆ. ಅಪೌಷ್ಟಿಕತೆಯಿಂದ ರಕ್ತಹಿನತೆ, ಕಡಿಮೆ ತೂಕದ ಮಕ್ಕಳ ಜನನ, ಕ್ಯಾಷಿಯೋರ್‌ಕರ್, ಮರಾಸ್ಮಸ್ ರೋಗಗಳಿಗೆ ಮಕ್ಕಳ ಬಲಿ, ಇರುಳುಗಣ್ಣು, ಹೀಗೆ ಹಲವಾರು ಸಮಸ್ಯೆಗಳ ಪಟ್ಟಿ ಬೆಳೆಯುತ್ತಿರುತ್ತದೆ. ಇಂತಹ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳು ಜಾರಿಗೆ ತಂದಿರುತ್ತದೆ.
ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಬಿಸಿಊಟ, ಮೊಟ್ಟೆ ವ್ಯವಸ್ಥೆ, ಗರ್ಭಿಣಿಯರಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಾತೃತ್ವ ಯೋಜನೆ, ತಿವ್ರ ರಕ್ತಹಿನತೆ ಮಕ್ಕಳಿಗೆ ಎನ್.ಆರ್.ಸಿಯಲ್ಲಿ ದಾಖಲಿಸಿ ಉತ್ತಮ ಸೇವೆ, ಕ್ಷಯರೋಗಿಗಳ ಆರೈಕೆಗಾಗಿ ೬ ತಿಂಗಳು ೧೦೦೦ ರೂಗಳ ಆರ್ಥಿಕ ನೆರವು, ಪ್ರತಿ ತಿಂಗಳು ಪಡಿತರ ವ್ಯವಸ್ಥೆಯಲ್ಲಿ ಉಚಿತವಾಗಿ ಮತ್ತು ಕಡಿಮೆ ಬೆಲೆಗೆ ಅಕ್ಕಿ ಈಗಾಗಲೇ ನೀಡಲಾಗುತ್ತಿದೆ.
ನಮ್ಮ ಶರೀರದ ಎಲ್ಲಾ ಅಂಗಾAಗಗಳು ಬೆಳೆಯಲು ನಾವು ತಿನ್ನುವ ಆಹಾರ ಪುಷ್ಟಿದಾಯಕ ಹಾಗೂ ಶಕ್ತಿದಾಯಕವಾಗಿರಬೇಕು. ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಸಸಾರಜನಕ, ಕೊಬ್ಬು, ಪಿಷ್ಟ, ಖನಿಜ, ನೀರು, ಮೇದಸ್ಸು, ರಂಜಕ, ಅನ್ನಾಂಗ. ಪ್ರೋಟಿನ್, ನಾರಿನಾಂಶ ಮುಂತಾದ ಪೌಷ್ಟಿಕಾಂಶಗಳು ಸಮತೋಲನದಲ್ಲಿರಬೇಕು. ಆಗ ಸಮತೂಕದ ಹಾಗೂ ಪೌಷ್ಟಿಕ ಆಹಾರವಾಗುತ್ತದೆ. ನಿರ್ಲಕ್ಷ ವಹಿಸಿದರೆ ಅಪೌಷ್ಟಿಕತೆ ಉಂಟಾಗುತ್ತದೆ.
ಬಡತನ ಒಂದೆಡೆಯಾದರೆ, ಉದಾಸೀನತೆ ಮತ್ತೊಂದೆಡೆ, ಪೌಷ್ಟಿಕ ಆಹಾರ ಪಡೆಯುವ ಸೌಭಾಗ್ಯ ನಮ್ಮ ದೇಶದ ಬಹುಪಾಲು ಜನರಿಗಿಲ್ಲದೆ ಅಪೌಷ್ಟಿಕತೆಯ ಕೊರತೆ ಒಂದು ಸವಾಲಾಗಿಯೇ ಉಳಿದಿದೆ.
ನಾವು ತಿಳಿದಿರುವಂತೆ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಣ ಬೇಕಿಲ್ಲ, ನಮ್ಮಲ್ಲೆ ಬೆಳೆಯುವ ದವಸಧಾನ್ಯಗಳು, ಹಿತ್ತಲಿನಲ್ಲಿ ಬೆಳೆಯುವ ಸೊಪ್ಪುಗಳು, ಪಪ್ಪಾಯಿ ಹಣ್ಣು, ನುಗ್ಗೆಸೊಪ್ಪು ಸರಿಯಾಗಿ ಬಳಸಿದರೆ ಸಾಕು. “ಕಾಲಾಡಿಸಿಕೊಂಡು ಹೋದರೆ ಕನ್ನೆ ಸೊಪ್ಪಿಗೆ ದರಿದ್ರವೇ” ಎಂಬAತೆ ಸುಲಭದಲ್ಲಿ ದೊರೆಯುವ ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಗರ್ಭಿಣಿ, ಬಾಣಂತಿಯರಿಗೆ, ಮಕ್ಕಳಿಗೆ ಇದು ಅತಿ ಅವಶ್ಯಕ.
ಯಾವುದೇ ಆಹಾರ ಪದಾರ್ಥಗಳನ್ನು ಮುಚ್ಚಿ ಬೇಯಿಸಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಮುಂತಾದ ತರಕಾರಿಗಳನ್ನು ಹಸಿಯಾಗಿಯೇ ಬಳಸುವುದು, ಮನೆಗೊಂದು ಕೈತೋಟ ಬೆಳೆಸುವುದು, ಅಕ್ಕಿಯನ್ನು ಹೆಚ್ಚಾಗಿ ಪಾಲಿಷ್ ಮಾಡದೆ ಬಳಸುವುದು, ಕಾಫಿ, ಟೀ ಗೆ ಬದಲಾಗಿ ಅಂಬಲಿ, ಗಸಗಸೆ ಪಾಯಸ, ಹೆಸರು ಕಾಳುಕೀರು, ಶುಂಠಿ ಮತ್ತು ಧನಿಯ ಕಾಫಿ ಅಬ್ಯಾಸವನ್ನಾಗಿಸುವುದು, ಮೊಳಕೆ ಬರಿಸಿದ ಕಾಳನ್ನು ಉಪಯೋಗಿಸುವುದು, ಮಗುವಿನ ಹಿಡಿಮುಷ್ಟಿಯಷ್ಟು ಕಡಲೆಬೀಜವನ್ನು ನೆನೆಸಿ ತಿನ್ನಿವುದರಿಂದ ದಿನಕ್ಕೆ ಬೇಕಾಗುವಷ್ಟು ಪ್ರೋಟಿನ್ ದೊರೆಯುತ್ತದೆ ಎಂದು ವೈದ್ಯಶಾಸ್ತç ಹೇಳುತ್ತದೆ.
ಸಮತೋಲಿತ ಆಹಾರ ಸೇವನೆ ಕಾಯಿಲೆಗಳನ್ನು ಹತೋಟಿಯಲ್ಲಿಡುವುದು ಮಾತ್ರವಲ್ಲ ಆರೋಗ್ಯವಂತ ವ್ಯಕ್ತಿಗಳಿಗೆ ಗಂಡಾAತರ ಕಾಯಿಲೆ ಮತ್ತು ಅಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುತ್ತದೆ ಮತ್ತು ದೇಹ ಹಾಗೂ ಮನಸ್ಸುಗಳ ಆರೋಗ್ಯಕರ ಕಾರ್ಯ ನಿರ್ವಹಣೆಗೆ ಸಹಕರಿಸುತ್ತದೆ.
ಮಿತ ಬಳಕೆಯಿರಲಿ: ಸೇವಿಸುವ ಆಹಾರದಲ್ಲಿ ಎಷ್ಟು ಕ್ಯಾಲರಿ ಇದೆ ಎಷ್ಟು ಪ್ರಮಾಣ ಸೇವಿಸಬೇಕು ಎಂಬ ವಿಚಾರಗಳ ಬಗ್ಗೆ ಪ್ರಾರಂಭದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆಹಾರದಲ್ಲಿನ ಬಣ್ಣ, ವೈವಿಧ್ಯ, ತಾಜಾತನ ಕಡೆ ಗಮನ ಹರಿಸಿ. ಮೊದಲು ನಿಮ್ಮ ದೈನಂದಿನ ಆಹಾರದ ಜೊತೆಗೆ ನೀವು ಇಷ್ಟಪಡುವ ವಿವಿಧ ಬಣ್ಣಗಳ ತರಕಾರಿ ಸಲಾಡ್ ಸೇರಿಸಿಕೊಳ್ಳುವುದು ಅಥವಾ ಅಡುಗೆಯಲ್ಲಿ ಬೆಣ್ಣೆ ಬದಲು ಆಲಿವ್ ಎಣ್ಣೆ ಬಳಸುವುದು ಮುಂತಾದ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಚಿಕ್ಕ ಬದಲಾವಣೆಗಳು ನಮಗೆ ಒಗ್ಗಿಕೊಂಡ ಮೇಲೆ ಹೆಚ್ಚಿನ ಆರೋಗ್ಯಕರ ಆಯ್ಕೆಗಳನ್ನು ಕ್ರಮೇಣವಾಗಿ ಆಹಾರ ಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು.
ನೀರು ನಮ್ಮ ದೇಹದ ವ್ಯವಸ್ಥೆಗಳನ್ನು ಶುದ್ಧೀಕರಿಸಿ ದೇಹದಲ್ಲಿನ ತ್ಯಾಜ್ಯ ಹಾಗೂ ನಂಜುಕಾರಕ ವಸ್ತುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಸುಸ್ತು, ನಿಶಕ್ತಿ, ಹಾಗೂ ತಲೆ ನೋವಿನಂತಹ ಸಮಸ್ಯೆಗಳು ಉಂಟಾಗುತ್ತದೆ. ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕರ ಆಹಾರ ಕ್ರಮಗಳನ್ನು ಸೇವಿಸಲು ಸಹಕರಿಯಾಗುತ್ತದೆ. ನಿಮ್ಮ ಪಥ್ಯಕ್ರಮಕ್ಕೆ ಹಸಿರು ಸೊಪ್ಪು, ತರಕಾರಿಗಳನ್ನು ಮೀನನ್ನು ಅಳವಡಿಸಿಕೊಂಡAತೆ ನಿಮಗೆ ಇಷ್ಟವಾದ ದೈಹಿಕ ಚಟುವಟಿಕೆ ಯಾವುದೆಂದು ನಿರ್ಧರಿಸಿ ಅದನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ನಿಯಮಿತ ವ್ಯಾಯಮದಿಂದ ಅನೇಕ ಪ್ರಯೋಜನಗಳಿವೆ. ಇದು ನಿಮ್ಮ ಆರೋಗ್ಯಕರ ಆಹಾರಕ್ಕೆ ಪ್ರೇರೇಪಕವಾಗಿರುತ್ತದೆ.
ಮಿತಾಹಾರ ಆರೋಗ್ಯದ ಗುಟ್ಟು: ಆರೋಗ್ಯಕರ ಕ್ರಮಕ್ಕೆ ಮಿತಾಹಾರವೇ ಮಂತ್ರ. ನಾವು ಪ್ರತಿನಿತ್ಯ ಬಳಸುವ ಆಹಾರದ ಕ್ರಮದಲ್ಲಿ ನಮಗೆ ಇನ್ನು ಬೇಕು ಎನ್ನುವಂತೆ ಸಾಕು ಮಾಡಬೇಕು. ಇನ್ನೂ ಹಸಿವಿದೆ ಎಂದಾಗ ತಾಜಾ ತರಕಾರಿಗಳನ್ನು ಸೇವಿಸುವುದು ಹಾಗೂ ಸಮತೋಲನ ಆಹಾರ ಬಳಕೆ ಮಾಡಬೇಕು. ಇದು ಕೆಲವು ದಿನಗಳಿಗೆ ಸಿಮಿತವಾಗದೆ ಜೀವನದಲ್ಲಿ ಜೀವಿತಾವಾಧಿಯವರೆಗೂ ಅನುಸರಿಸುವ ಬದ್ಧತೆ ಇದ್ದರೆ ಆರೋಗ್ಯದಲ್ಲಿ ಹಿತಕಾಣಬಹುದು.
ದಿನನಿತ್ಯ ಬಳಸುವ ಆಹಾರದಲ್ಲಿ ಆರೋಗ್ಯಕರವಲ್ಲದ ಸಕ್ಕರೆ, ಕೊಬ್ಬು, ಮುಂತಾದ ಆಂಶಗಳನ್ನು ತಗ್ಗಿಸುವುದು, ಇತ್ತಿಚೆಗಿನ ಸಂಶೋಧನೆಯAತೆ ಪ್ರತಿದಿನದ ಆಹಾರದಲ್ಲಿ ಒಂದು ಚಮಚ ಸಕ್ಕರೆ, ಒಂದು ಚಮಚ ಉಪ್ಪು, ಒಂದು ಚಮಚ ಎಣ್ಣೆ ಕಡಿಮೆ ಮಾಡುವುದನ್ನು ರೂಢಿಸಿಕೊಂಡರೆ ಆರೋಗ್ಯಕ್ಕೆ ಒಳಿತು.
ಕಚೇರಿ ಜಂಜಾಟ, ಸಭೆಗಳು, ಬಸ್ಸು ವಾಹನಗಳ ಧಾವಂತದಲ್ಲಿ ತರಾತುರಿಯ ಆಹಾರ ಸೇವನೆÉ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆಹಾರ ಸೇವನೆ ಸಂದರ್ಭದಲ್ಲಿ ದೇಹ ಮತ್ತು ಮನಸ್ಸುಗಳು ಶಾಂತವಾಗಿ ಆಹಾರವನ್ನು ಆಸ್ವಾಧಿಸುವಂತಿರಬೇಕು. ಜೀರ್ಣಕ್ರಿಯೆ ಕೂಡ ಉತ್ತಮವಾಗಿರುತ್ತದೆ. ಸಾಧ್ಯವಾದಷ್ಟು ಇತರರೊಡಗೂಡಿ ಆಹಾರ ಸೇವನೆ ಉತ್ತಮ.
ಬೆಳಗಿನ ತಿಂಡಿಯನ್ನು ತಪ್ಪದೆ ತಿನ್ನಬೇಕು. ಇದು ಚಯಾಪಚಯ ಕ್ರಿಯೆಗಳು ಚುರುಕುಗೊಳಿಸುತ್ತದೆ ಮತ್ತು ದೇಹದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ. ನಂತರದ ಮಧ್ಯಾಹ್ನ, ರಾತ್ರಿ ಊಟ ಮಿತವಾಗಿರಲಿ. ಬೆಳಗಿನ ತಿಂಡಿ ರಾಜನಂತೆ ಸಮೃದ್ಧವಾಗಿರಬೇಕಂತೆ, ಮಧ್ಯಾಹ್ನದ ಊಟ ರಾಣಿಯಂತೆ ಎಷ್ಟು ಬೇಕು ಅಷ್ಟು, ರಾತ್ರಿ ಊಟ ಭಿಕ್ಷÄಕನಂತೆ ಮಿತವಾಗಿರಲಿ.
ಗಾದೆ ಮಾತೊಂದಿದೆ: ಒಪ್ಪತ್ತು ತಿಂದೋನು ಯೋಗಿ, ಎರಡು ಹೊತ್ತು ತಿಂದೋನು ಬೋಗಿ, ಮೂರು ಹೊತ್ತು ತಿಂದೋನು ರೋಗಿ, ನಾಲ್ಕು ಹೊತ್ತು ತಿಂದೋನು ಎತ್ತಕೊಂಡು ಹೋಗಿ ಎಂದು. ಎನರ್ಜಿಗಾಗಿ ಆಹಾರ ಬೇಕಾಗಿದೆ, ನಿಮ್ಮ ಆಹಾರದಂತೆ ನಿಮ್ಮ ಆರೋಗ್ಯವಿರುತ್ತದೆ. ಉತ್ತಮ ಪೋಷಕಾಂಶಗಳು ಆಹಾರದಿಂದ ಸಿಗುತ್ತವೆ, ಮಾತ್ರೆಗಳಿಂದಲ್ಲ ನೆನಪಿರಲಿ.
ನಿಮ್ಮ ವಯಸ್ಸು, ದೇಹದ ತೂಕ, ಉದ್ಯೋಗ ಮತ್ತು ದೇಹÀ ಪ್ರಕೃತಿಗೆ ಅನುಗುಣವಾಗಿ ನಿಮ್ಮದೆ ರೀತಿಯ ಆರೋಗ್ಯಕರ ಆಹಾರಸೇವನಾ ಕ್ರಮವನ್ನು ರಚಿಸಿಕೊಂಡು ಅನುಸರಿಸಬೇಕು.
ಭಾರತದಲ್ಲಿ ಆರೋಗ್ಯಕರ ಆಹಾರವನ್ನು ಇನ್ನೂ ಏಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂಬುವುದೇ ಚರ್ಚಾವಿಷಯವಾಗಿದ್ದು ಅಪೌಷ್ಟಿಕತೆಯ ಪರಿಹಾರಕ್ಕೆ ಪೌಷ್ಟಿಕ ಆಹಾರದ ಬಗ್ಗೆ ಸರಿಯಾದ ತಿಳುವಳಿಕೆ ಆಸಕ್ತಿ ಇರಬೇಕು. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಆರೋಗ್ಯಕರ ಆಹಾರ ಪದ್ಧತಿ ಮತ್ತು ಸರಿಯಾದ ಪೋಷಣೆಯ ಮೌಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಇದೊಂದು ಜನತಾ ಚಳುವಳಿಯಾಗಬೇಕು.