ಮಡಿಕೇರಿ, ಆ. ೩೧: ನಗರದ ಮುಳಿಯ ಗೋಲ್ಡ್ & ಡೈಮಂಡ್ಸ್ನ ಮಡಿಕೇರಿ ಶಾಖೆಯಲ್ಲಿ ಡೈಮಂಡ್ ಫೆಸ್ಟ್ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ಉಪಾಧ್ಯಕ್ಷರಾದ ನವೀನ್ ಅಂಬೇಕಲ್ಲು, ಬರಹಗಾರರಾದ ಈರಮಂಡ ಹರಿಣಿ ವಿಜಯ್, ಮಡಿಕೇರಿ ಇನ್ನರ್‌ವೀಲ್‌ನ ಮಾಜಿ ಅಧ್ಯಕ್ಷರಾದ ಶಫಾಲಿ ರೈ, ಪ್ರಮುಖರಾದ ಸುನಿತಾ ಮಾಚಯ್ಯ, ಉದ್ಯಮಿ ಸೋನಿಯಾ ಗಣಪತಿ ಹಾಗೂ ಮುಳಿಯ ಸಂಸ್ಥೆಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ ಉಪಸ್ಥಿತರಿದ್ದರು.

ಡೈಮಂಡ್ ಫೆಸ್ಟ್ಗೆ ಚಾಲನೆ ನೀಡಿ ಮಾತನಾಡಿದ ಅತಿಥಿಗಳು, ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವಿಶಿಷ್ಟ ಹಾಗೂ ಆಕರ್ಷಕ ಆಭರಣ ವಿನ್ಯಾಸಗಳು, ಗುಣಮಟ್ಟ ಮತ್ತು ಗ್ರಾಹಕರಿಗೆ ನೀಡುತ್ತಿರುವ ಉತ್ತಮ ಸೇವೆಯನ್ನು ಶ್ಲಾಘಿಸಿದರು.

ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಗುಣಮಟ್ಟದ ಆಭರಣಗಳನ್ನು ಒದಗಿಸುವುದರ ಜೊತೆಗೆ, ವಿವಿಧ ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಇಂತಹ ಉತ್ಸವಗಳನ್ನು ಆಯೋಜಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಸಂತೋಷವನ್ನು ನೀಡುತ್ತಿದೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಸಿಲ್ವರ್ ಮ್ಯಾರಥಾನ್ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಅತಿಥಿಗಳು ಹಾಗೂ ಗ್ರಾಹಕರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಲಕ್ಕಿ ಡ್ರಾದಲ್ಲಿ ಬೋಪಯ್ಯ (ಕೂರ್ಗಳ್ಳಿ, ಮೈಸೂರು), ಪೊನ್ನಪ್ಪ (ಐಗೂರು) ಹಾಗೂ ಪ್ರವೀಣ್ (ಯಡವನಾಡು) ವಿಜೇತರಾಗಿ ಹೊರಹೊಮ್ಮಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ, ಗ್ರಾಹಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.