ಮಡಿಕೇರಿ, ಆ. ೩೧: ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಆರೋಪದಂತೆ ಎರಡು ಗುಂಪಿನ ಮೂಲಕ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ೪೨ ಮಂದಿಯ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದ್ದು, ನಾಪೋಕ್ಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಕಳೆದೆರೆಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೊಂದು ಕೌಟುಂಬಿಕ ಕಲಹದ ಮಾದರಿಯಲ್ಲಿ ತಿರುವು ಪಡೆದುಕೊಂಡಿದೆ. ವ್ಯಕ್ತಿಯೋರ್ವ ಅಶ್ಲೀಲ ರೀತಿಯಲ್ಲಿ ಕೈ ಸನ್ನೆ ಮಾಡಿ ವಾಹನದ ಮೂಲಕ ಕೆಸರುಹಾರಿಸಿ ಬೆದರಿಕೆ ಹಾಕಿದ್ದ ಎಂಬಲ್ಲಿAದ ಈ ಕಲಹ ಆರಂಭಗೊAಡಿದೆ. ಈ ಬಗ್ಗೆ ಮುಬೀನ ಎಂಬ ಮಹಿಳೆ ಮೊದಲು ದೂರು ನೀಡಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ದೂರಿಗೆ ಷಂಶುದೀನ್ ಎಂಬವರು ಪ್ರತಿದೂರು ನೀಡಿದ್ದು, ಇದರಲ್ಲಿ ೮ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ಅಪರಾಹ್ನದೊಳಗೆ ನಡೆದಿದೆ. ಅಪರಾಹ್ನ ಬಳಿಕ ಇದೇ ಪ್ರಕರಣ ಬೆಳವಣಿಗೆಗಳು ಮತ್ತೆ ಮುಂದುವರಿದಿದ್ದು, ಇನ್ನೂ ಎರಡು ಗುಂಪಿನ ಮೂಲಕ ಪರಸ್ಪರ ದೂರು ದಾಖಲಾಗಿದೆ.
ರಿಯಾಜ್ ಕೆ.ಇ. ಹಾಗೂ ಪಮೀರಾ ಎಂಬವರು ನೀಡಿರುವ ದೂರು-ಪ್ರತಿದೂರಿನಂತೆ ಇನ್ನಿತರ ಹಲವರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.