ಗೋಣಿಕೊಪ್ಪಲು, ಆ. ೩೧:ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಪಟ್ಟಣದಲ್ಲಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಪೈಶಾಚಿಕ ಕೃತ್ಯ ಎಸೆಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಆರೋಪಿಯು ಕುಂಜಿಲ ಗ್ರಾಮದ ಕೆ.ಡಿ. ಭರತ್ (೫೭) ಆಗಿದ್ದಾನೆ. ಆರೋಪಿಗೆ ಇಬ್ಬರು ಪುತ್ರರು, ಓರ್ವ ಪುತ್ರಿಯಿದ್ದು, ಆರೋಪಿಯು ಕಳೆದ ೫ ತಿಂಗಳಿನಿAದ ಕುಂಜಿಲ ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈತ ಅಲೆಮಾರಿಯಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತಾಡುತ್ತಲೇ ದಿನ ಕಳೆಯುತ್ತಿದ್ದ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಕುಟ್ಟ ಸಮೀಪದ ಪೂಜೆಕಲ್ಲು ಆರೋಪಿಯ ಸ್ವಂತ ಊರಾಗಿದೆ.

ಕಳೆದ ೬ ದಿನಗಳ ಹಿಂದೆ ಗೋಣಿಕೊಪ್ಪದ ಬಸ್ ನಿಲ್ದಾಣದ ಸಮೀಪದ ಶೌಚಾಲಯದ ಬಳಿ ಸಂತ್ರಸ್ಥೆಯು ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದಿದ್ದ ಭರತ್ ಬಾಲಕಿಯ ಜೊತೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಆಕೆಯನ್ನು ಪುಸಲಾಯಿಸಿ ಸಮೀಪದ ಮಾರ್ಕೆಟ್ ರಸ್ತೆಯ ಕಡೆಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಆಕೆಗೆ ಬನ್ನು ಹಾಗೂ ತಿಂಡಿಗಳನ್ನು ಕೊಡಿಸಿ, ಬಳಿಕ ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ನಂತರ ಸಂತ್ರಸ್ಥೆಯು ಆತನಿಂದ ತಪ್ಪಿಸಿಕೊಂಡು ಬಂದ ದಾರಿಯಲ್ಲಿಯೇ ವಾಪಸ್ಸಾಗಿ ಮಾರುಕಟ್ಟೆ ಬಳಿ ಬಂದು ನಿಂತಿದ್ದಾಳೆ. ರಕ್ತಸ್ರಾವಗೊಂಡು ಬಳಲಿದ್ದ ಸಂತ್ರಸ್ಥೆಯನ್ನು ಅಲ್ಲಿದ್ದವರು ಉಪಚರಿಸಿದ್ದಾರೆ. ಈ ವೇಳೆ ನೊಂದ ಬಾಲಕಿ ನಡೆದ ಘಟನೆಯನ್ನು ಹೇಳಿಕೊಂಡ ಹಿನ್ನಲೆಯಲ್ಲಿ ಸ್ಥಳೀಯರು ತಕ್ಷಣವೇ ಗೋಣಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಗೋಣಿಕೊಪ್ಪ ಪೊಲೀಸರು ಸಂತ್ರಸ್ಥೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಸಂತ್ರಸ್ಥೆಯ ತಂದೆಯಿAದ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋಣಿಕೊಪ್ಪ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದರು. ಆತನಿಗಾಗಿ ಹಲವೆಡೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೬ ತಂಡಗಳಾಗಿ ಶೋಧ ಕಾರ್ಯ ನಡೆಸಿದರು. ನಂತರ ಆತನನ್ನು ಕುಂಜಿಲ ಗ್ರಾಮದಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯ ವಿರುದ್ಧ ಪೋಕ್ಸೋ ದೌರ್ಜನ್ಯ ಕಾಯ್ದೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ನಿರ್ದೇಶನದ ಮೇರೆ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶಿವರಾಜ್ ಆರ್. ಮುದೋಳ್, ಠಾಣಾಧಿಕಾರಿ ಕಾಳೇಗೌಡ, ಕ್ರೆöÊಂಎಸ್‌ಐ ವೆಂಕಟೇಶ್ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಯನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

-ಹೆಚ್.ಕೆ.ಜಗದೀಶ್