ಕುಶಾಲನಗರ, ಆ. ೩೦: ಪೀಠೋಪಕರಣಗಳ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಮೂರು ದಶಕದಿಂದ ಕಾರ್ಯನಿರ್ವಹಿಸುತ್ತಿರುವ ಪೂರ್ಣಶ್ರೀ ಫರ್ನಿಚರ್ಸ್ನ ಅತ್ಯಾಧುನಿಕ ಪೀಠೋಪ ಕರಣಗಳುಳ್ಳ ಮಳಿಗೆ ಗೋದ್ರೇಜ್ ಮತ್ತು ಪೂರ್ಣಶ್ರೀಯವರ ಸ್ವಂತ ಬ್ರಾö್ಯಂಡ್ “ಖಂIZಔ” ಕಾರ್ಯಾರಂಭ ಮಾಡಿದೆ.
ರವೀಂದ್ರ ರೈ ಮಾಲೀಕತ್ವದ ನೂತನ ಮಳಿಗೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುಣಮಟ್ಟದ ಉತ್ಪನ್ನಗಳಿಗೆ ಹೊರ ಜಿಲ್ಲೆಗೆ ಹೋಗಿ ಖರೀದಿಸುವ ಬದಲು, ಜಿಲ್ಲೆಯಲ್ಲೇ ಸಿಗುವ ಮಳಿಗೆಗಳಿಂದ ಖರೀದಿಸಿದರೆ ಹಣಕಾಸಿನ ಉಳಿತಾಯ ಆಗುತ್ತದೆ ಎಂದರು. ಮಾಲೀಕ ರವೀಂದ್ರ ರೈ ಮಾತನಾಡಿ, ೩೦ ವರ್ಷದಿಂದ ಕೊಡಗಿನ ಜನ ನಮಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ನೂತನ ಬ್ರಾಂಡ್ “ಖಂIZಔ” ಲೋಗೋವನ್ನು ಉದ್ಯಮಿ ಜಗದೀಶ್ ರೈ ಅನಾವರಣಗೊಳಿಸಿದರು. ರಾಜಕೀಯ ಮುಖಂಡ ವಿ ಪಿ ಶಶಿಧರ್ ರವೀಂದ್ರ ರೈಯವರ ಮೂವತ್ತು ವರ್ಷಗಳ ಸಂಘರ್ಷ ಮತ್ತು ಯಶಸ್ಸನ್ನು ಸಭೆಗೆ ವಿವರಿಸಿದರು
೨೦ ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಮಳಿಗೆ ಇದ್ದು, ಹಲವು ಬಗೆಯ ಪೀಠೋಕರಣಗಳು ಇಲ್ಲಿವೆ. ಜಿಲ್ಲೆಯ ಪ್ರಥಮ ಗೋದ್ರೇಜ್ ಶೋರೂಂ, ಸ್ಲೀಪ್‌ವೆಲ್ ಹಾಸಿಗೆಗಳು ಸೇರಿ ಬೇರೆ ಬೇರೆ ಉತ್ಪನ್ನಗಳ ಪ್ರತ್ಯೇಕ ವಿಭಾಗ ಈ ಮಳಿಗೆಯೊಳಗೆ ಇದೆ. ಕುಡ ಅಧ್ಯಕ್ಷ ಪ್ರಮೊದ್ ಮುತ್ತಪ್ಪ ಗ್ರಾಹಕರ ಬಹುಮಾನ ಯೋಜನೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ವಸಂತ್ ಕುಮಾರ್, ಟಿಬೆಟ್ ಸಂಸದ ಚೋಫೆಲ್ ತುಪ್ಟೆನ್, ರಾಜಕೀಯ ಮತ್ತು ವಿವಿಧ ಕ್ಷೇತ್ರದ ಪ್ರಮುಖರು ಕುಶಾಲನಗರದ ಮತ್ತು ಸುತ್ತಮುತ್ತಲಿನ ಉದ್ಯಮಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.