ಅನಿಲ್ ಹೆಚ್.ಟಿ.

ಕೊಡಗಿನ ಈ ವಿದ್ಯಾರ್ಥಿನಿಗೆ ಯೋಗ ಎಂದರೆ ಅಚ್ಚುಮೆಚ್ಚು. ಯೋಗ ಈಕೆಯ ಜೀವನದಲ್ಲಿನ ಯೋಗಾಯೋಗವೇ ಹೌದು. ಹೀಗಾಗಿಯೇ ಈ ಗ್ರಾಮೀಣ ಪ್ರತಿಭೆ ಈವರೆಗೂ ಜಿಲ್ಲೆಯಲ್ಲಿಯೇ ಅತ್ಯಧಿಕವಾದ ೧೫ ರಾಷ್ಟಿçÃಯ ದಾಖಲೆಯನ್ನು ಮಾಡಿ ಅಪರೂಪದ ಯೋಗ ಸಾಧಕಿಯಾಗಿದ್ದಾಳೆ.ಈ ಯುವ ಸಾಧಕಿಯೇ ಸಿಂಚನಾ.

ಮದೆನಾಡಿನ ಕೀರ್ತಿ ಮತ್ತು ರೇಣುಕಾ ದಂಪತಿ ಪುತ್ರಿಯಾಗಿರುವ ಸಿಂಚನಾ, ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ೭ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ೭ ವರ್ಷದಿಂದ ಯೋಗ ಅಭ್ಯಾಸದಲ್ಲಿ ನಿರತರಾಗಿರುವ ಸಿಂಚನಾ, ೫ ವರ್ಷದಿಂದ ಕಲಾತ್ಮಕ ವಾಗಿ ಯೋಗ ಅಭ್ಯಾಸ ಮಾಡುತ್ತಿದ್ದು, ಈಕೆ ತನ್ನ ಮೊದಲ ಯೋಗ ಪ್ರದರ್ಶನವನ್ನು ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನೀಡಿದ್ದಳು. ನಂತರ ಶಾಲೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತನ್ನ ಕಲಾತ್ಮಕ ಯೋಗ ನೃತ್ಯ ಪ್ರದರ್ಶನ ನೀಡಿದ್ದಾಳೆ.

ದಾಖಲೆಗಳು ಮತ್ತು ಪ್ರಶಸ್ತಿಗಳು

೨೦೨೪ ರ ಮಾರ್ಚ್ ೨೭ ರಂದು ಯೋಗದಲ್ಲಿನ ಹಲವು ಕಠಿಣ ಆಸನಗಳನ್ನು ಮಾಡುವ ದಾಖಲೆಗಾಗಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸಿಂಚನಾ ಸಾಧನೆಯ ದಾಖಲೆ ಮಾಡಿದಳು.

೨೦೨೫ ರ ಮಾರ್ಚ್ ೨೮ ರಂದು ಚಕ್ರಾಸನ ಭಂಗಿಯಲ್ಲಿ ಕಾಲುಗಳನ್ನು ನಿಮಿಷಕ್ಕೆ ೧೧ ಬಾರಿ ತಿರುಗಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದಳು. ದೆಹಲಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಯೋಗ ಪ್ರರ್ದನಕ್ಕಾಗಿ ಪ್ರಮಾಣ ಪತ್ರ ಮತ್ತು ಟ್ರೋಫಿ ಪಡೆದು ಯೋಗ ಡೈನಾಮೊ ಎಂಬ ಬಿರುದು ಪಡೆದಳು.

ಜೂನ್ ೨೦೨೪ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡದ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ರಾಷ್ಟ್ರೀಯ ಯೋಗೋತ್ಸವ-೨೦೨೪ ಪ್ರತಿಭಾನ್ವೇಷ್ವಣೆಯಲ್ಲಿ ಅತ್ಯದ್ಭುತ ಯೋಗ ಪ್ರತಿಭೆ ಎಂದು ಗುರುತಿಸಲ್ಪಟ್ಟು ರಾಷ್ಟ್ರೀಯ ಯೋಗ ಭಾರತಿ ಪ್ರಶಸ್ತಿಗೂ ಪಾತ್ರಳಾದಳು.

೨೦೨೪ ರ ಮೇ ೨೧ ರಂದು ಡಿಂಬಾಸನ ಭಂಗಿಯಲ್ಲಿ ನಿಮಿಷಕ್ಕೆ ೧೦ ಮೀಟರ್ ನಡೆಯುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಹಿರಿಮೆಗೂ ಸಿಂಚನಾ ಪಾತ್ರಳಾದಳು.

೨೭ನೇ ಚುಂಚಾದ್ರಿ ರಾಜ್ಯ ಮಟ್ಟದ ಕ್ರೀಡೋತ್ಸವದ ಸಂದರ್ಭ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಸಿಂಚನಾ, ೨೦೨೫ ರಲ್ಲಿ ಚೆಷ್ಟ್ ಸ್ಯಾಂಡ್ ಕಾಲುಗಳನ್ನು ನಿಮಿಷಕ್ಕೆ ೨೫ ಬಾರಿ ತಿರುಗಿಸುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.

೨೦೨೫ ರಲ್ಲಿ ನಿರಾಲಂಭ ಪೂರ್ಣ ಚಕ್ರಾಸನವನ್ನು ನಿಮಿಷಕ್ಕೆ ೧೦ ಬಾರಿ ಮಾಡಿ ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದು, ಈ ಸಾಧನೆಗಾಗಿ ಪಂಜಾಬ್ ನ ಅಮೃತಸರದಲ್ಲಿ ಪ್ರಸಸ್ತಿಯನ್ನು ಪಡೆದಿರುತ್ತಾಳೆ.

೨೦೨೫ ರ ಮಾರ್ಚ್೧೨ ರಂದು ಡಿಂಬಾಸನದಲ್ಲಿ ಒಂದು ನಿಮಿಷಕ್ಕೆ ೧೫ ಮೀಟರ್ ಚಲಿಸುವ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ಕೀರ್ತಿಯೂ ಸಿಂಚನಾಳಿಗೆ ಸಂದಿದೆ.

೨೦೨೫ ರಲ್ಲಿ ಉರಬ್ರಾಸನ ಸ್ಥಿತಿಯಲ್ಲಿ ಒಂದು ನಿಮಿಷ ೪ ಸೆಕೆಂಡ್ ಗಳ ಕಾಲ ಇರುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಮಾಡಿದ ಸಿಂಚನಾ, ಅದೇ ವರ್ಷ ೨೦೨೫ ಮೃಗ ಮುಖಾಸನ ಸ್ಥಿತಿಯಲ್ಲಿ ಒಂದು ನಿಮಿಷ ೪೪ ಸೆಕೆಂಡುಗಳ ಕಾಲ ಇದ್ದು ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪಾತ್ರಳಾದಳು.

ಈ ಮೂರು ದಾಖಲೆಯನ್ನು ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ತೀರ್ಪುಗಾರರ ಉಪಸ್ಥಿತಿಯಲ್ಲಿ ಸಿಂಚನ ಓದುತ್ತಿರುವ ಬಿಜಿಎಸ್ ಪಬ್ಲಿಕ್ ಶಾಲೆ ಮದೆನಾಡುವಿನಲ್ಲಿ ಪ್ರದರ್ಶಿಸಿ, ಯೋಗದಲ್ಲಿ ಈ ೩ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ್ನು ಮಾಡಿದ ಕೀರ್ತಿಗೆ ಪಾತ್ರಳಾದಳು.

ಸಿಂಚನಳ ಸಾಧನೆಯನ್ನು ಗುರುತಿಸಿ ೨೦೨೪ -೨೦೨೫ ಸಾಲಿನ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ ದೊರೆತಿದೆ ೨೦೨೪-೨೦೨೫ ಕನ್ನಡ ಭವನ ಅಂತರರಾಜ್ಯ ಯುವ ಪ್ರತಿಭಾ ಪ್ರಶಸ್ತಿಯಾದ ‘ಭರವಸೆಯ ಬೆಳಕು’ ಪ್ರಶಸ್ತಿ ಕೂಡ ದೊರೆತಿದೆ , ಜೂನ್ ೨೦೨೫ ರಲ್ಲಿಸ ೧೧ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದಂದು ಕೊಡಗು ಪತ್ರಕರ್ತರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಂಬಾಸನ ದಲ್ಲಿ ೩೦ ನಿಮಿಷ ೫ ಸೆಕೆಂಡ್ ಆದೇ ಸ್ಥಿತಿಯಲ್ಲಿ ಇರುವ ಮೂಲಕ ಆಸ್ಟ್ರೇಲಿಯಾದ ಸ್ಟೆಫಾನ್ ಮಿಲೇಂಗರ್ ಎಂಬ ೩೧ ವರ್ಷದ ಮಹಿಳೆ ಮಾಡಿರುವ ೩೦.೩ಸೆಕೆಂಡು ಮಾಡಿದ ದಾಖಲೆಯನ್ನು ಮುರಿದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ್ನು ಸಿಂಚನಾ ಪಡೆದುಕೊಂಡಳು. .

ಅಕ್ಟೋಬರ್ ೨೮ ೨೦೨೫ ರಲ್ಲಿ, ಒಂದು ನಿಮಿಷ ಡಿಂಬಾಸನ ದಲ್ಲಿ ೧೦ ಬಾರಿ ಸುತ್ತುವಿಕೆ, ಒಂದು ನಿಮಿಷ ೪೪ ಸೆಕೆಂಡುಗಳ ಕಾಲ ಖಂಡಪೀಡಾಸನ ಸ್ಥಿತಿಯಲ್ಲಿ ಇರುವುದು, ಒಂದು ನಿಮಿಷ ಧನುರಾಸನ ದಲ್ಲಿ ೧೮ ಬಾರಿ ಸುತ್ತುವ ಮೂಲಕ ವಿಶ್ವ ದಾಖಲೆಯನ್ನೂ ಮದೆನಾಡಿನ ಸಿಂಚನಾ ಮಾಡಿದಳು. ಸಿಂಚನ ಓದುತ್ತಿರುವ ಬಿಜಿಎಸ್ ಪಬ್ಲಿಕ್ ಶಾಲೆ ಮದೆನಾಡುವಿನಲ್ಲಿ ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ತೀರ್ಪುಗಾರರ ಉಪಸ್ಥಿತಿಯಲ್ಲಿ ಈ ಮೂರು ವಿಶ್ವ ದಾಖಲೆಯನ್ನು ಮಾಡಿದ್ದು ಕೂಡ ಗಮನಾರ್ಹ. ೨೦೨೬ ರಲ್ಲಿ ಏಕ ಪಾದ ಉಷ್ಟ್ರಾಸನದಲ್ಲಿ ಆದೆ ಸ್ಥಿತಿಯಲ್ಲಿ ಇರುವ ಮೂಲಕ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೂ ಪಾತ್ರಳಾಗಿದ್ದಾಳೆ.

೨೧ ಜೂನ್ ೨೦೨೬ ರಂದು ಅಂತರರಾಷ್ಟಿçÃಯ ಯೋಗ ದಿನಾಚರಣೆಯಂದು ೩೩.೫೪ಸೆಕೆಂಡ್‌ಗೆ ೩೧೦ ಆಸನಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದ ಸಿಂಚನಾ ಈ ಮೂಲಕ ಒಟ್ಟು ೧೫ ದಾಖಲೆ ಮಾಡಿದ್ದು ಇದರಲ್ಲಿ ೧೨ವಿಶ್ವ ದಾಖಲೆ, ೩ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಾಖಲೆಗಳು ಇವೆ. ಭವಿಷ್ಯದಲ್ಲಿ ಮತ್ತೆ ಮೂರು ದಾಖಲೆಗೆ ಸಿಂಚನಾ ತಯಾರಾಗುತ್ತಿದ್ದಾಳೆ.

ಸಿಂಚನಳ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿ ಸನ್ಮಾನದ ಗೌರವ ನೀಡಿವೆ.

ಮದೆನಾಡಿನ ಬೆಟ್ಟದ ತಪ್ಪಲಿನ ನಿವಾಸಿಯಾಗಿರುವ ಸಿಂಚನಾಳ ಪಾಲಿಗೆ ಯೋಗ ಎಂದರೆ ಕೇವಲ ಅಭ್ಯಾಸ ಮಾತ್ರವಲ್ಲ. ಯೋಗ ಎಂದರೆ ಈಕೆಯ ಪಾಲಿಗೆ ಅದು ಛಲಕ್ಕೆ ಕಾರಣವಾಗಿರುವ ವಿದ್ಯೆ, ಹೀಗಾಗಿಯೇ ಕಠಿಣ ಪರಿಶ್ರಮದಿಂದ ಯೋಗದಲ್ಲಿ ಸಾಧನೆ ಮಾಡುತ್ತಾ ಹಂತಹAತವಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿಂಚನಾ ಪಾಲಿಗೆ ಅಮ್ಮ ರೇಣುಕಾ ಅವರು ಯೋಗ ಗುರುವಾಗಿದ್ದಾರೆ.

ಪ್ರತಿ ನಿತ್ಯ ಮನೆಯಲ್ಲಿಯೇ ಬೆಳಿಗ್ಗೆ ಮತ್ತು ಸಂಜೆ ೧ ಗಂಟೆ ಯೋಗಾಭ್ಯಾಸ ಮಾಡುವ ಸಿಂಚನಾಳಿಗೆ ರಾಷ್ಟ್ರಮಟ್ಟದಲ್ಲಿಯೂ ಯೋಗ ಪ್ರದರ್ಶನ ನೀಡಬೇಕೆಂಬ ಹಂಬಲವಿದೆ. ಯೋಗದಲ್ಲಿನ ಹೊಸ ವಿಧಾನಗಳನ್ನು ಕಲಿಯಲು ಸದಾ ಉತ್ಸಾಹಿಯಾಗಿರುವ ಈಕೆ, , ಯೋಗ ಕ್ಷೇತ್ರದಲ್ಲಿಯೇ ಮುಂದುವರೆಯಬೇಕೆAಬ ಹಂಬಲ ಹೊಂದಿದ್ದಾಳೆ. ಸರ್ಕಾರ ಕೂಡ ಈ ಯುವ ಯೋಗ ಪ್ರತಿಭೆಯ ಸಾಧನೆ ಪರಿಗಣಿಸಿ, ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ.