ಭಕ್ತಿ, ಸಾಮರಸ್ಯ ಹಾಗೂ ಸಾಂಸ್ಕöÈತಿಕ ವೈಭವಕ್ಕೆ ಹೆಸರಾದ ವೀರಾಜಪೇಟೆಯ ಗೌರಿ-ಗಣೇಶೋತ್ಸವದ ಜನಮಾನಸದಲ್ಲಿ ಧಾರ್ಮಿಕ ಚೈತನ್ಯ ಮೂಡಿಸಿರುವ ಹರಿಕೇರಿಯ ಶ್ರೀ ದೊಡ್ಡಮ್ಮ - ಚಿಕ್ಕಮ್ಮ ತಾಯಿ ವಿನಾಯಕ ಸಮಿತಿ ೨೩ ವರ್ಷಗಳ ಹಿಂದೆ ಹರಿಕೇರಿಯ ದೇವಸ್ಥಾನದ ಆವರಣದಲ್ಲಿ ಗಣಪತಿ ಪ್ರತಿಷ್ಠಾಪನೆಯ ಉದಯವಾಯಿತು.

ವೀರಾಜಪೇಟೆ ಪಟ್ಟಣದ ೬ನೇ ವಾರ್ಡ್ನ ಹರಿಕೇರಿಯಲ್ಲಿರುವ ಐತಿಹಾಸಿಕ ಶ್ರೀ ದೊಡ್ಡಮ್ಮ ತಾಯಿ, ಚಿಕ್ಕಮ್ಮ ತಾಯಿ ದೇವಾಲಯಕ್ಕೆ ತನ್ನದೇ ಆದ ಪವಿತ್ರ ಇತಿಹಾಸವಿದೆ. ಈ ಪವಿತ್ರ ದೇವಸ್ಥಾನದ ಆವರಣದಲ್ಲಿ ಹಿರಿಯರ ಪ್ರೇರಣೆಯೊಂದಿಗೆ ೨೦೦೩ ರಲ್ಲಿ ಪ್ರಥಮ ಬಾರಿಗೆ ಶ್ರೀ ವಿಘ್ನೇಶ್ವರ ಮೂರ್ತಿಯನ್ನು ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಯಿತು. ಅಂದು ಆರಂಭಗೊAಡ ಈ ಭಕ್ತಿ ಪಯಣವು ಇಂದು ಯಶಸ್ವಿಯಾಗಿ ೨೩ನೇ ವರ್ಷದ ಹರಸೇವೆಯಾಗಿ ಬೆಳೆದುಬಂದಿದೆ.

ಸಮಿತಿಯ ಆರಂಭದ ದಿನಗಳಲ್ಲಿ ವಿ.ಆರ್. ರಜಿನಿಕಾಂತ್ ಅಧ್ಯಕ್ಷರಾಗಿ, ಸತೀಶ್ ಉಪಾಧ್ಯಕ್ಷರಾಗಿ, ಅನಿಲ್ ಕುಮಾರ್ ಖಜಾಂಚಿಯಾಗಿ, ಕೃಷ್ಣ ಹೆಚ್.ಎಸ್. ಗೌರವ ಅಧ್ಯಕ್ಷರಾಗಿ ಹಾಗೂ ರಾಜು ಕೆ.ಪಿ. ಪ್ರಧಾನ ಸಲಹೆಗಾರರಾಗಿ ಸಮಿತಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇದರೊಂದಿಗೆ, ಉತ್ಸವದ ಯಶಸ್ಸು ಹಾಗೂ ಸಂಘಟನೆಗೆ ಅಂದಿನ ದಿನಗಳಲ್ಲಿ ಸದಾ ನೆರವಾಗಿದ್ದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ದಿ. ಫಾರೂಕ್ ರಹಿಂ ಅವರ ಕೊಡುಗೆಯನ್ನು ಸಮಿತಿಯು ಇಂದೂ ಕೃತಜ್ಞತೆಯಿಂದ ಸ್ಮರಿಸುತ್ತದೆ.

ಪ್ರಸ್ತುತ ಸುಮಾರು ೪೦ ಸಕ್ರಿಯ ಸದಸ್ಯರನ್ನೊಳಗೊಂಡ ಈ ಸಮಿತಿಯು ವರ್ಷಂಪ್ರತಿ ಉತ್ಸವವನ್ನು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದೆ. ಪ್ರಸ್ತುತ ಅಧ್ಯಕ್ಷರಾಗಿ ಅನಿಲ್, ಕಾರ್ಯದರ್ಶಿಯಾಗಿ ಕಿಶೋರ್, ಉಪಾಧ್ಯಕ್ಷರಾಗಿ ಪ್ರಥ್ವಿ, ಸ್ಥಾಪಕ ಅಧ್ಯಕ್ಷರಾಗಿ ರಜನಿಕಾಂತ್ ಕಾರ್ಯನಿರ್ವಹಿಸುತ್ತಿದ್ದಾರೆ.

ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ಹಿಡಿದು ೧೧ ದಿನಗಳ ಕಾಲ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು, ೧೧ನೇ ದಿನದಂದು ಅನ್ನಸಂತರ್ಪಣೆ ನಡೆಸುತ್ತಾರೆ.

ಮುಂಚಿನ ದಿನಗಳಲ್ಲಿ ಸರಳವಾಗಿ ನಡೆಯುತ್ತಿದ್ದ ವಿಸರ್ಜನಾ ಕಾರ್ಯಕ್ರಮವು ಈಗ ನವೀನ ರೂಪ ಪಡೆದುಕೊಂಡಿದೆ. ಕಣ್ಣುಕಟ್ಟುವ ವಿದ್ಯುತ್ ಅಲಂಕೃತ ಮಂಟಪ ಹಾಗೂ ಸ್ಥಳೀಯ ಪ್ರತಿಭಾವಂತ ಕಲಾವಿದರ ಸಾಂಸ್ಕöÈತಿಕ ಕಲಾ ತಂಡಗಳೊAದಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದ್ದು, ಸಾರ್ವಜನಿಕರ ಕಣ್ಮನ ಸೆಳೆಯಲಿದೆ.

ಹರಿಕೇರಿಯ ಈ ಐತಿಹಾಸಿಕ ೨೩ನೇ ವರ್ಷದ ಮಹೋತ್ಸವದಲ್ಲಿ ಈ ಬಾರಿ ಆಕರ್ಷಕ ಮಂಟಪ ಜನಮನ ಸೂರೆಗೊಳ್ಳಲಿದ್ದು ವಿಭಿನ್ನವಾಗಿ ಶೋಭಾಯಾತ್ರೆಯಲ್ಲಿ ಕಾಣಿಸಿಕೊಳ್ಳಲಿದೆ.

- ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧