ಶನಿವಾರಸAತೆ, ಆ. ೨೯: ಕೊಡಗು ಜಿಲ್ಲಾಧಿಕಾರಿಗಳು ಆ. ೩೧ ರವರೆಗೆ ಜಿಲ್ಲೆಯಾದ್ಯಂತ ಮರದ ದಿಮ್ಮಿಗಳ ಸಾಗಾಣಿಕೆಯನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು (ಕೆ.ಎ.-೧೮-ಎ-೫೭೮೮) ಶನಿವಾರಸಂತೆ ಪೊಲೀಸರು ಪತ್ತೆಹಚ್ಚಿ, ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಕಳುಹಿಸಿದ ಮೇರೆಗೆ ಅಧಿಕಾರಿಗಳು ರೂ. ೪೦,೫೦೦ ದಂಡ ವಿಧಿಸಿದ್ದಾರೆ.
ಕೊಡ್ಲಿಪೇಟೆ ಪಟ್ಟಣದ ಸಕಲೇಶಪುರ ಮುಖ್ಯರಸ್ತೆಯಲ್ಲಿ ಆ.೨೬ ರ ಸಂಜೆ (ಕೆ.ಎ.-೧೮-ಎ-೫೭೮೮) ಟಿಂಬರ್ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಶನಿವಾರಸಂತೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಹಾಗೂ ಸಿಬ್ಬಂದಿ ಪತ್ತೆಹಚ್ಚಿದ್ದರು ೪ಏಳನೇ ಪುಟಕ್ಕೆ
.
(ಮೊದಲ ಪುಟದಿಂದ) ಲಾರಿಯಲ್ಲಿ ಸರಕು ಸಮೇತ ಒಟ್ಟು ೨೮೦೨೫ ಟನ್ ತೂಕವಿರುವುದು ಕಂಡು ಬಂದಿತ್ತು. ಲಾರಿ ಚಾಲಕ ಚಿಕ್ಕಮಗಳೂರಿನ ನಿವಾಸಿ ರವಿಕುಮಾರ್ (೪೧) ಲಾರಿಯಲ್ಲಿ ೫ ಟನ್ ಹೆಚ್ಚುವರಿಯಾಗಿ ತುಂಬಿರುವುದು ಕಂಡುಬAದ ಹಿನ್ನೆಲೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಆ. ೨೮ ರಂದು ಜಿಲ್ಲಾಧಿಕಾರಿ ಅವರ ಆದೇಶ ಉಲ್ಲಂಘನೆ ಹಾಗೂ ತೂಕ ಹೆಚ್ಚಿದ್ದ ಕಾರಣ ರೂ. ೪೦,೫೦೦ ದಂಡ ವಿಧಿಸಿದ್ದಾರೆ.