ಮಡಿಕೇರಿ, ಆ. ೨೯: ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆ ವತಿಯಿಂದ ಮಕ್ಕಳಿಗೆ ವ್ಯವಸ್ಥಾಪಕ ಕಿಶೋರ್, ಸಿಬ್ಬಂದಿಗಳಾದ ಪುನೀತ್, ಸನತ್ ಕೊಡೆ ಮತ್ತು ಲೇಖನಿ ಸಾಮಗ್ರಿ ವಿತರಿಸಿದರು.

ಈ ಸಂದರ್ಭ ಮುಖ್ಯ ಶಿಕ್ಷಕಿ ಕೆ.ಪಿ. ಪವಿತ್ರ, ಸಹ ಶಿಕ್ಷಕ ತಿರುನೆಲ್ಲಿಮಡ ಜೀವನ್, ಸುನೋಜಮ್ಮ, ಸೌಮ್ಯ ಹಾಜರಿದ್ದರು.