*ಗೋಣಿಕೊಪ್ಪ, ಆ. ೨೯: ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಪ್ರಯುಕ್ತ ರಾಷ್ಟಿçÃಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಸತಿ ನಿಲಯ, ಪೊನ್ನಂಪೇಟೆ ವತಿಯಿಂದ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಹಾಗೂ ಒಲಂಪಿಯನ್ ಸಿ.ಎಸ್. ಪೂಣಚ್ಚ ಅವರು ಯುವ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ, ತಮ್ಮ ಅನುಭವ ಹಂಚಿಕೊAಡು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಂಗವಾಗಿ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು. ತರಬೇತುದಾರರಾದ ಸುಬ್ಬಯ್ಯ, ಗಣಪತಿ, ಸನ್ನು ಗಣಪತಿ ಹಾಗೂ ವಸತಿ ನಿಲಯದ ವಾರ್ಡನ್ ದಿನೇಶ್ ಉಪಸ್ಥಿತರಿದ್ದರು.