ಮಡಿಕೇರಿ ಆ.೨೭: ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಾ. ೨೮ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷಗಳಿಗೆ ಸಂಬAಧಿಸಿದAತೆ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ.ಎಸ್. ಜಗದೀಶ ರೆಡ್ಡಿ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ : ಕೇರಳಂ ಮಾದರಿ ತಿದ್ದುಪಡಿಗೆ ಪ್ರಸ್ತಾಪ ಸಲ್ಲಿಸಲು ನಿರ್ಣಯ
ಮಡಿಕೇರಿ, ಆ. ೨೭: ಕೇರಳಂ ರಾಜ್ಯದ ಮಾದರಿಯಲ್ಲಿ ಕಸ್ತೂರಿ ರಂಗನ್ ವರದಿಯ ತಿದ್ದುಪಡಿಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.
ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ನಗರದ ರಾಜ್‌ದರ್ಶನ್ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಿದ್ದರೂ, ಸ್ಥಳೀಯ ಜನರ ಜೀವನೋಪಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕಾಗಿದೆ. ಪ್ರಸ್ತುತ ಹೊರಡಿಸಿರುವುದು ಕರಡು ಅಧಿಸೂಚನೆಯಾಗಿದ್ದು, ಸಾರ್ವಜನಿಕರಿಗೆ ಚರ್ಚೆ, ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಕೊಡಗು ಪರಿಸರ ಸಂರಕ್ಷಣೆಯಲ್ಲಿ ಪಾರಂಪರಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದ್ದು, ಇಲ್ಲಿನ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಪರಿಗಣಿಸಬೇಕು ಎಂದು ಹೇಳಿದರು.
ಕೇರಳಂ ರಾಜ್ಯದಲ್ಲಿ ಜೀವವೈವಿಧ್ಯತೆ ಮಂಡಳಿಯ ಸಹಕಾರದೊಂದಿಗೆ ಸಮೀಕ್ಷೆ ನಡೆಸಿ ಸೂಕ್ಷö್ಮ ಪರಿಸರ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ವೈಜ್ಞಾನಿಕ ಸಮೀಕ್ಷೆ ನಡೆಸಿ ವ್ಯಾಪ್ತಿಯನ್ನು ನಿರ್ಧರಿಸಬೇಕು. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಜೀವನೋಪಾಯಕ್ಕೆ ಧಕ್ಕೆಯಾಗಬಾರದು. ಕೊಡಗಿನ ಸಮಸ್ಯೆಗಳನ್ನು ಬಗೆಹರಿಸದೆ ವರದಿ ಅನುಷ್ಠಾನಗೊಳಿಸುವುದು ಕಷ್ಟವಾಗಲಿದೆ. ಅರಣ್ಯದ ಗಡಿಯನ್ನು ಶೂನ್ಯಕ್ಕೆ ಸೀಮಿತಗೊಳಿಸುವುದು ಸೇರಿದಂತೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಸ್ತೂರಿ ರಂಗನ್ ವರದಿ ಸಂಬAಧಿಸಿದ ವಿಷಯಗಳ ಕುರಿತು ಕೇಂದ್ರದ ಗಮನ ಸೆಳೆಯಲು ನಿಯೋಗ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗುವುದು ಎಂದು ಯದುವೀರ್ ಒಡೆಯರ್ ತಿಳಿಸಿದರು.
ವನ್ಯಜೀವಿ ಸಂಘರ್ಷದ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಮಾತ್ರ ಆರೋಪ ಹೊರಿಸುವುದು ಸರಿಯಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ಈಗಾಗಲೇ ಸುಮಾರು ೨೫೦ ಕೋಟಿ ಅನುದಾನ ಲಭ್ಯವಿದ್ದು, ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯಕ್ಕೆ ವಿವಿಧ ಯೋಜನೆಗಳಡಿ ಬಿಡುಗಡೆಯಾದ ಸುಮಾರು ರೂ. ೩,೭೦೦ ಕೋಟಿ ಅನುದಾನದಲ್ಲಿ ೧,೭೦೦ ಕೋಟಿಯಷ್ಟು ಹಣ ಮಾತ್ರ ಬಳಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಹಣವನ್ನು ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಸಿ ಮತ್ತು ಡಿ ವರ್ಗದ ಜಮೀನನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ಯಾವುದೇ ಪ್ರಸ್ತಾಪ ಸದ್ಯ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಕುರಿತು ಅನಗತ್ಯ ಆತಂಕ ಬೇಡ ಎಂದರು.
ರಾಜ್ಯ ಸರಕಾರದ ಪಾತ್ರವೂ ದೊಡ್ಡದಿದೆ : ಕೆ.ಜಿ. ಬೋಪಯ್ಯ
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಾಗೂ ನಿರ್ವಹಣೆಯ ಪ್ರಮುಖ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಕೇರಳಂ ಸರ್ಕಾರ ಭೌತಿಕ ಪರಿಶೀಲನೆ ನಡೆಸಿ ಸೂಕ್ಷö್ಮ ಪರಿಸರ ಪ್ರದೇಶದ ಬಫರ್‌ಝೋನ್ ವ್ಯಾಪ್ತಿಯನ್ನು ಶೂನ್ಯ ಕಿ.ಮೀ.ಗೆ ಇಳಿಸುವಂತೆ ಕ್ರಮ ಕೈಗೊಂಡಿದೆ. ಕರ್ನಾಟಕ ಸರ್ಕಾರವೂ ಇದೇ ರೀತಿಯಲ್ಲಿ ವೈಜ್ಞಾನಿಕ ಪರಿಶೀಲನೆ ನಡೆಸಬೇಕು. ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ವಿಷಯ ಗಂಭೀರವಾಗಿರುವುದರಿAದ ಅಸ್ತಿತ್ವದಲ್ಲಿರುವ ಉಪಸಮಿತಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟಿçÃಯ ಹಸಿರು ನ್ಯಾಯಾಧೀಕರಣಕ್ಕೆ ಗೋವಾ ಪರಿಸರವಾದಿಗಳ ಅರ್ಜಿ ಹಾಕಿದ ಬಳಿಕ ಕ್ರಮ ತೆಗೆದುಕೊಳ್ಳಲು ಆದೇಶ ಬಂದಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಅಭಿಪ್ರಾಯ ಮುಂದಿಡಬೇಕಾಗಿದೆ. ವರದಿಯ ಅನುಷ್ಠಾನ ಮತ್ತು ನಿರ್ವಹಣೆ ರಾಜ್ಯ ಸರಕಾರದ ಮೇಲಿದೆ. ಇದರೊಂದಿಗೆ ಬದಲಾವಣೆಗಳಿಗೂ ಅವಕಾಶವನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಕರ್ನಾಟಕ ಸರಕಾರ ಇದುವರೆಗೂ ಆಕ್ಷೇಪಣೆ ಸಲ್ಲಿಸಿಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಕೇರಳಂಗೆ ಈ ಅಧಿಸೂಚನೆ ಇಲ್ಲ. ಇದೇ ರೀತಿ ರಾಜ್ಯ ಸರಕಾರವೂ ಕ್ರಮಕೈಗೊಳ್ಳಬೇಕೆಂದರು.
ತಾರ್ಕಿಕ ಅಂತ್ಯ ಕಾಣಬೇಕು : ರಂಜನ್
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹಿಂದೆ ಕಸ್ತೂರಿ ರಂಗನ್ ವರದಿ ವಿರುದ್ಧ ಕೇರಳಂ ಮಾದರಿಯಲ್ಲಿ ಕೊಡಗಿನಲ್ಲಿಯೂ ಹೋರಾಟ ನಡೆಸಲಾಗಿತ್ತು. ನಮ್ಮ ಸರಕಾರವಿದ್ದ ಸಂದರ್ಭದಲ್ಲಿಯೇ ನಾವು ಪ್ರತಿರೋಧ ಒಡ್ಡಿದ್ದೆವು. ಪ್ರತಿಬಾರಿ ವರದಿಯನ್ನು ತಿರಸ್ಕರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತೊಮ್ಮೆ ಅಧಿಸೂಚನೆ ಹೊರಡದಂತೆ ತಾರ್ಕಿಕ ಅಂತ್ಯ ಕಾಣಿಸುವ ಅಗತ್ಯವಿದೆ ಎಂದರು.
ಬಫರ್‌ಝೋನ್ ಶೂನ್ಯವಾಗಬೇಕು : ಸುಜಾ
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಆಡಳಿತ ಪಕ್ಷದ ಜನಪ್ರತಿನಿಧಿಗಳು ಸಭೆಗೆ ಆಗಮಿಸಬೇಕಾಗಿತ್ತು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು ಎಂದ ಅವರು, ದೊಡ್ಡ ಪ್ರಮಾಣದ ಭೂ ಪರಿವರ್ತನೆಗೆ ಕಡಿವಾಣ ಹಾಕುವುದರ ಜೊತೆಗೆ ಕೊಡಗಿನ ದೇವರಕಾಡುಗಳನ್ನೂ ಸಂರಕ್ಷಿಸಬೇಕು. ಬಫರ್‌ಝೋನ್‌ನ್ನು ಶೂನ್ಯಕ್ಕೆ ಸೀಮಿತಗೊಳಿಸಬೇಕು ಎಂದು ಹೇಳಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಕೇಂದ್ರ ಸರ್ಕಾರದ ವಿಚಾರ ಮಾತ್ರವಲ್ಲ. ರಾಜ್ಯ ಸರ್ಕಾರದ ಮೂಲಕವೇ ಕೇಂದ್ರಕ್ಕೆ ಸಮರ್ಪಕ ಪ್ರಸ್ತಾವನೆ ಸಲ್ಲಿಸಬೇಕು. ವರದಿ ಅನುಷ್ಠಾನದಿಂದ ಕೊಡಗಿನ ರೈತರು, ಜನರು ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ೨೦೧೩-೧೪ರಿಂದ ಕಸ್ತೂರಿ ರಂಗನ್ ವರದಿ ಕುರಿತು ಆತಂಕ ಮುಂದುವರಿದಿದೆ. ಬೆಳೆಗಾರರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರಬಾರದು. ಅರಣ್ಯ ಪ್ರದೇಶವನ್ನು ಮಾತ್ರ ಪರಿಗಣಿಸಿ ಸೂಕ್ಷö್ಮ ಪರಿಸರ ಪ್ರದೇಶದ ಗಡಿ ಗುರುತಿಸಬೇಕು ಎಂದರು.
ಮಾನವ-ವನ್ಯಜೀವಿ ಸಂಘರ್ಷವೂ ಕೊಡಗಿನಲ್ಲಿ ಗಂಭೀರವಾಗಿದ್ದು, ವನ್ಯಜೀವಿ ಕಾರಿಡಾರ್ ಹಾಗೂ ಅರಣ್ಯದಂಚಿನಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ವನ್ಯಜೀವಿ-ಮಾನವ ಸಂಘರ್ಷದಿAದ ವಾರ್ಷಿಕ ಸುಮಾರು ೧೫ ರಿಂದ ೨೦ ಸಾವು ಸಂಭವಿಸುತ್ತಿದೆ. ತಮಿಳುನಾಡಿನಲ್ಲಿ ಐಷಾರಾಮಿ ರೆಸಾರ್ಟ್ ತೆರವು ಮಾಡಿ ಕಾರಿಡಾರ್ ನಿರ್ಮಿಸಲಾಯಿತು. ಅದೇ ರೀತಿ ರಾಜ್ಯದಲ್ಲಿ ಕಾರಿಡಾರ್ ಆಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಸಮನ್ವಯತೆ ಸಾಧಿಸಬೇಕು. ಸರ್ಫೇಸಿ ಕಾಯ್ದೆಯಡಿ ೧೦ ಸಾವಿರ ರೈತರ ಖಾತೆಗಳು ಸೇರಿವೆ. ಇದರಲ್ಲಿ ಕೃಷಿಕರು ಸಿಕ್ಕಿಹಾಕಿಕೊಳ್ಳಬಾರದು ಎಂದರು.
ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತರ ಜೀವನ ಪರಿಸರದೊಂದಿಗೆ ಬೆಸೆದುಕೊಂಡಿದೆ. ಕಸ್ತೂರಿ ರಂಗನ್ ವರದಿಯ ವ್ಯಾಪ್ತಿ ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಬೇಕು. ಬಫರ್‌ಝೋನ್ ಅನ್ನು ಶೂನ್ಯಕ್ಕೆ ಇಳಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ವನ್ಯಜೀವಿ ಹಾವಳಿಯಿಂದ ಉಂಟಾಗುವ ನಷ್ಟಕ್ಕೆ ಪರಿಣಾಮಕಾರಿ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಜೆಡಿಎಸ್ ಮುಖಂಡ ಸಿ.ಎಲ್. ವಿಶ್ವ ಮಾತನಾಡಿ, ಸಭೆ ಪಕ್ಷಾತೀತವಾಗಿ ನಡೆದಿದ್ದು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಬೇಕಾಗಿತ್ತು. ಕಸ್ತೂರಿ ರಂಗನ್ ವರದಿಗೆ ವಿರೋಧವಿಲ್ಲವಾದರೂ, ಜನಜೀವನಕ್ಕೆ ಧಕ್ಕೆಯಾಗುವ ರೀತಿಯ ಅನುಷ್ಠಾನವನ್ನು ಒಪ್ಪಲು ಸಾಧ್ಯವಿಲ್ಲ. ಕೇರಳಂ ಮಾದರಿಯಲ್ಲಿ ಮರುಪರಿಶೀಲನೆ ನಡೆಸಿ ಗಡಿ ನಿಗದಿಪಡಿಸಬೇಕು. ಅಗತ್ಯವಿದ್ದರೆ ಕಾನೂನು ಹೋರಾಟ ನಡೆಸಬೇಕು ಎಂದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಮುಖ ವಿಶ್ವನಾಥ್ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಮೊದಲ ಕರಡಿನಲ್ಲಿದ್ದ ಹಲವು ಗೊಂದಲಗಳು ಇನ್ನೂ ಮುಂದುವರಿದಿವೆ. ಕೇರಳದಲ್ಲಿ ಜಾಗವನ್ನು ಪ್ರತ್ಯೇಕಿಸಿ ಪರಿಶೀಲಿಸಿರುವ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು. ಕೃಷಿ ಚಟುವಟಿಕೆಗಳಿಗೆ ಸದ್ಯ ಯಾವುದೇ ನಿರ್ಬಂಧವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ಸ್ಪಷ್ಟ ಕ್ರಮ ಕೈಗೊಳ್ಳಬೇಕು. ಕಾಫಿ ಕೃಷಿಯನ್ನು ಸೂಕ್ಷö್ಮ ಪರಿಸರ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದರು.
ಮಧುಬೋಪಣ್ಣ ಮಾತನಾಡಿ, ಸಿ ಮತ್ತು ಡಿ ವರ್ಗದ ಜಾಗವನ್ನು ಅರಣ್ಯವೆಂದು ಪರಿಗಣಿಸಿದರೆ ಹಲವು ಕಂದಾಯ ಗ್ರಾಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಭೌತಿಕ ಸಮೀಕ್ಷೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ಗಡಿ ನಿಗದಿಪಡಿಸಬೇಕು. ರಾಜ್ಯದ ಆರು ಪಶ್ಚಿಮಘಟ್ಟ ಜಿಲ್ಲೆಗಳ ಶಾಸಕರು ಹಾಗೂ ಸಂಸದರನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ಕರೆದೊಯ್ದು ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಕಸ್ತೂರಿ ರಂಗನ್ ವ್ಯಾಪ್ತಿಗೆ ಬರುವ ೫೩ ಗ್ರಾಮಗಳಲ್ಲಿ ಸಭೆ ನಡೆಸಿ ಠರಾವು ಅಂಗೀಕರಿಸಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಇದು ಕಾನೂನುಬದ್ಧ ಹಾಗೂ ಒಗ್ಗಟ್ಟಿನ ಹೋರಾಟವಾಗಬೇಕು. ರೈತರು ತೂಗುಗತ್ತಿಯ ಪರಿಸ್ಥಿತಿಯಲ್ಲಿದ್ದು, ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದರು. ಸಭೆಯಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು, ರೈತರು ಹಾಗೂ ಬೆಳೆಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.