ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋರ್ಯಾಕ್ಟ್ ಕ್ಲಬ್ನ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಹಿರಿಯರನ್ನು ಗೌರವಿಸಿ ಅವರ ಜೀವನದ ಸಂಧ್ಯಾಕಾಲದಲ್ಲಿ ಅವರೊಂದಿಗೆ ಇದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯರಿಗೆ ಪ್ರೀತಿ ತೋರಿಸುವ ಮೂಲಕ ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ಹಿರಿಯರು ನಡೆದು ಬಂದ ದಾರಿ ಕಿರಿಯರಿಗೆ ದಾರಿದೀಪ ಎಂದರು. ಹಿರಿಯ ನಾಗರಿಕರನ್ನು ಮರದ ಆಳವಾದ ಬೇರಿಗೆ ಹೋಲಿಸಿದ ಅವರು, ಹಾಡಿನ ಮೂಲಕ ಕಾರ್ಯಕ್ರಮದ ಮಹತ್ವವನ್ನು ಸಾರಿದರು. ಸುಬ್ರಾಯ ಸಂಪಾಜೆ ಅವರು ಹಿರಿಯ ನಾಗರಿಕರಿಗೆ ಸಂಬAಧಿಸಿದ ಪುರಾಣ ಕಥೆಗಳನ್ನು ಉಲ್ಲೇಖಿಸಿ ಯಕ್ಷಗಾನದ ಹಾಡುಗಳನ್ನು ಹಾಡಿ ರಂಜಿಸಿದರು. ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ವೇಣುಗೋಪಾಲ್ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಕರೆ ನೀಡಿದರು.
ರೋಟರಿ ಜಿಲ್ಲೆ ೩೧೮೧ರ ವಲಯ ೬ರ ವಲಯ ಸೇನಾನಿ ವಸಂತ್ ಕುಮಾರ್ ಮಾತನಾಡಿ, ಹಿರಿಯರ ಆರೈಕೆ ನಮ್ಮ ಜವಾಬ್ದಾರಿ ಎಂಬುದನ್ನು ಅರಿತು ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ವುಡ್ಸ್ನ ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಂದರ್ ಹಾಗೂ ವುಡ್ಸ್ ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ ಉಪಸ್ಥಿತರಿದ್ದರು. ಹಿರಿಯ ತಲೆಮಾರು ನಡೆದು ಬಂದ ರೀತಿ, ಕೂಡು ಕುಟುಂಬದ ಸಂಭ್ರಮ ಹಾಗೂ ಆಚಾರ-ವಿಚಾರಗಳನ್ನು ಒಳಗೊಂಡ ಸಾಕ್ಷö್ಯಚಿತ್ರವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರಿಗೆ ರೋಟರಿ ವುಡ್ಸ್ ಹೆಸರಿನ ಛತ್ರಿಗಳನ್ನು ನೀಡಿ ಗೌರವಿಸಲಾಯಿತು. ಕಾಲೇಜು ಉಪನ್ಯಾಸಕಿ ರಾಖೀ ಪೂವಣ್ಣ, ರೊಟೇರಿಯನ್ನರಾದ ಧನಂಜಯ ಶಾಸ್ತಿç, ರವಿ ಪಿ. ರವೀಂದ್ರ ಹೆಚ್. ದಿವ್ಯಾ ಲೋಕೇಶ್ ಸೇರಿದಂತೆ ಬೋಧಕ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು. ರೋರ್ಯಾಕ್ಟ್ ಕ್ಲಬ್ ಸದಸ್ಯರು ಪ್ರಾರ್ಥಿಸಿದರು. ಹೂವಿನ ಕುಂಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಮಡಿಕೇರಿ: ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಟಿವಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಟಿವಿಯಲ್ಲಿ ಬರುವ ಒಳ್ಳೆಯ ಕಾರ್ಯಕ್ರಮವನ್ನು ಮಾತ್ರ ನೋಡಬೇಕು ಎಂದು ಅತ್ತೂರಿನ ಹಿರಿಯ ನಾಗರಿಕರಾದ ಕೆ. ಬೋಜಮ್ಮ ಕಿವಿಮಾತು ಹೇಳಿದರು.
ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಜ್ಞಾನಗಂಗಾ ಇಂರ್ಯಾಕ್ಟ್ ಕ್ಲಬ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ವಿ. ಜೋಯಪ್ಪ, ವಿದ್ಯಾರ್ಥಿಗಳಲ್ಲಿ ಬಹಳಷ್ಟು ಶಿಸ್ತು ಇರಬೇಕು. ಶಿಸ್ತು ಇದ್ದಾಗ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭುಲಿAಗಪ್ಪ ವಿದ್ಯಾರ್ಥಿಗಳು, ಶಿಕ್ಷಕರು ಹೇಳುವ ಒಳ್ಳೆ ಮಾತುಗಳನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯೂ ಪೋಷಕರಿಗೆ, ಹಿರಿಯರಿಗೆ ಗೌರವ ಸಲ್ಲಿಸಿದರೆ ಮಾತ್ರ ಜೀವನದಲ್ಲಿ ಒಳಿತಾಗುತ್ತದೆ ಎಂದರು.
ಶಾಲೆಯ ಪ್ರಾಂಶುಪಾಲರಾದ ಸತ್ಯ ಸುಲೋಚನ ಎಸ್.ಎಂ. ಹಿರಿಯ ನಾಗರಿಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಹಿರಿಯ ನಾಗರಿಕರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಾದ ಗಣ್ಯ, ಸುಚೇತ್, ಶಿಶಿರ್ ಭಟ್ ಮಾತನಾಡಿದರು.
ಜ್ಞಾನಗಂಗಾ ಶಾಲೆಯ ಅಧ್ಯಕ್ಷ ಟಿ.ಕೆ. ಸುಧೀರ್ ವೇದಿಕೆಯಲ್ಲಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಕನಿಷ್ಕ ನೆರವೇರಿಸಿ, ವಿಶ್ರುತ ಸ್ವಾಗತಿಸಿ, ಶಿಕ್ಷಕಿ ವಿನಿತಾ ಅತಿಥಿ ಪರಿಚಯ ನೆರವೇರಿಸಿದರು. ವಿದ್ಯಾರ್ಥಿ ಮನ್ವಿತ್ ವಂದಿಸಿದರು. ಸಂಗೀತ ಶಿಕ್ಷಕಿ ರತ್ನಾವತಿ ಹಿರಿಯ ನಾಗರಿಕರನ್ನು ಕುರಿತು ಹಾಡನ್ನು ಹಾಡಿದರು.