ಸಿದ್ದಾಪುರ, ಆ. ೨೭: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾದರು. ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಚೆನ್ನಂಗಿ ಶಾಲೆಯ ವ್ಯಾಪ್ತಿಗೆ ಒಳಪಡುವ ಮೇಕೂರು-ಹೊಸ್ಕೇರಿ, ಬಾಡಗ-ಬಾಣಂಗಾಲ, ಬಿ.ಕಾನನ್‌ಂಗಾಡ್, ಮಾರ್ಗೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭ ಎರಡು ಗುಂಪುಗಳ, ಮರಿಯಾನೆ ಸೇರಿದಂತೆ ೨೨ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು ಎಂದು ಕಾರ್ಯಾಚರಣೆ ತಂಡದ ಅಧಿಕಾರಿ ಮಾಹಿತಿ ನೀಡಿದರು. ಈ ಕಾಡಾನೆಗಳ ಹಿಂಡನ್ನು ಮಾಲ್ದಾರೆಯ ಮೂಲಕ ದುಬಾರೆ ಅರಣ್ಯಕ್ಕೆ ಅಟ್ಟಲಾಯಿತು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತ ಚೌಹಾಣ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಮಂಜುನಾಥ್, ವಲಯ ಅರಣ್ಯ ಅಧಿಕಾರಿ ರಾಕೇಶ್, ದೇವರಾಜ್, ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ತಂಡದಲ್ಲಿ ಆರ್. ಆರ್. ಟಿ. ತಂಡದ, ಶಂಕರ್, ಪ್ರಜ್ವಲ್, ರಂಜಿತ್, ಸುಂದರ, ಪ್ರವೀಣ, ರೋಶನ್, ಆಕಾಶ್, ಪ್ರದೀಪ್, ಧನು, ಅರುಣ, ಇ.ಟಿ.ಎಫ್. ತಂಡದ ರಂಜನ್, ಕೇಶವ, ಮನು, ಪ್ರದೀಪ್, ವಿನೋದ್ ಹಾಗೂ ಟಾಟಾ ಸಂಸ್ಥೆಯ ಆನೆ ಟ್ರಾö್ಯಕರ್ ಭಾಗವಹಿಸಿದ್ದರು.

- ವಾಸು