ಭಾಗಮಂಡಲ, ಆ. ೨೬: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೬೧.೭೯ ಲಕ್ಷಲಾಭಗಳಿಸಿದೆ. ಇದು ಹಿಂದಿನ ಸಾಲಿಗಿಂತ ರೂ. ೬.೬೨ ಲಕ್ಷ ಹೆಚ್ಚುವರಿ ಪ್ರಗತಿಯಾಗಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ೩೯೧೯ ಮಂದಿ ಸದಸ್ಯರಿದ್ದು ಶೇರು ಹಣ ೨೩೭.೬೮ ಲಕ್ಷ ರೂ. ಇರುತ್ತದೆ. ೪೬೩ ಮಂದಿ ಸದಸ್ಯರಿಗೆ ೧೫೭೮.೧೧ ಲಕ್ಷ ರೂ. ಕೃಷಿ ಸಾಲವನ್ನು ವಿತರಿಸಲಾಗಿದೆ. ೧೨೭೫ ಜನ ಸದಸ್ಯರಿಗೆ ೧೫೨೬.೪೮ ಲಕ್ಷ ರೂ. ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ವಾಹನ ಸಾಲದ ಬಡ್ಡಿ ದರವನ್ನು ಇಳಿಸಿದ್ದು ಗ್ರಾಹಕರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವರು ಕೋರಿದರು.
೨೦೨೫ -೨೬ರ ಸಾಲಿನಲ್ಲಿ ಸಂಘದಲ್ಲಿ ೯೩೬.೫೫ ಟನ್ ಗೊಬ್ಬರ ಮಾರಾಟ ಮಾಡಲಾಗಿದ್ದು ಪ್ರಸಕ್ತ ಸಾಲಿನಲ್ಲಿ ರೂ ೨೩.೯೪ ಲಕ್ಷ ವ್ಯಾಪಾರ ನಡೆದಿದ್ದು ೫.೫೩ ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಸAಘವು ೨೦೨೫ -೨೬ರ ಸಾಲಿನಲ್ಲಿ ೧೮೫.೦೭ ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು ಹಿಂದಿನ ಸಾಲಿನಲ್ಲಿ ೧೪೪.೦೭ ಕೋಟಿ ರೂ.ವ್ಯವಹಾರ ನಡೆದಿದ್ದು ಒಟ್ಟಾರೆ ೪೧ ಕೋಟಿ ರೂ. ನಷ್ಟು ಪ್ರಗತಿ ಸಾಧಿಸಿದೆ ಎಂದರು.
ಗೋದಾಮು ಉದ್ಘಾಟನೆ
ಈ ಸಂದರ್ಭ ಅಂದಾಜು ರೂ. ೪೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಗೋದಾಮು ಅನ್ನು ಉದ್ಘಾಟಿಸಲಾಯಿತು. ಸಮಾರಂಭದ ಸಭಾಂಗಣವನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ಊಟದ ಸಭಾಂಗಣವನ್ನು ಉಪಾಧ್ಯಕ್ಷ ಕುಯ್ಯಮುಡಿ ಸೀತಾರಾಮ, ಸಾಮಗ್ರಿಗಳ ಕೊಠಡಿಯನ್ನು ಸಂಘದ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ್ ಎಡಿಕೇರಿ ಉದ್ಘಾಟಿಸಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಘದ ಸದಸ್ಯರನ್ನು ಹಾಗೂ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್, ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾಗಿದ್ದ ಪಾಣತ್ತಲೆ ಸಿ. ಗೋಪಾಲ ಮಕ್ಕಳ ತಜ್ಞ ಹಾಗೂ ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿದ ಕುಶ್ವಂತ್ ಕೋಳಿ ಬೈಲು, ರಾಷ್ಟ್ರೀಯ ಮತ್ತು ಅಂತರÀರಾಷ್ಟಿçÃಯ ಫುಟ್ಬಾಲ್ ಸಾಧಕ ಎಡಿಕೇರಿ ವೈದ್ಯ ವೇದಾಂತ್ ಹಾಗೂ ರಾಷ್ಟಿçÃಯ ಫುಟ್ಬಾಲ್ ಆಟಗಾರ್ತಿ ಕೋಡಿ ವಿಜೇತ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋನಾಶ್ರೀ, ಪ್ರಣಾಮ್ ಹಾಗೂ ಬಿ.ಎ ತೇಜಸ್ವಿ ಅವರಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. ಪಿಯುಸಿಯಲ್ಲಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ಚಿಂತನ್ ಹಾಗೂ ನಿತ್ಯ ಎ. ಎಸ್ ,ವಾಣಿಜ್ಯ ವಿಭಾಗದಲ್ಲಿ ಶೋಭಿತ ಎ.ಪಿ ಹಾಗೂ ಲಕ್ಷಿತಾ ಸುನಿಲ್ ,ಕಲಾವಿಭಾಗದಲ್ಲಿ ಡಿ.ಆರ್. ಭುವನ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಪುಷ್ಪಲತ. ನಿರ್ದೇಶಕರುಗಳಾದ ರೋಷನ್, ತಮ್ಮಯ್ಯ, ದಿನೇಶ್, ಹರೀಶ್, ಮನೋಜ್, ಪೂರ್ಣಿಮಾ, ಭಾನುಪ್ರಕಾಶ್, ಪುರುಷೋತ್ತಮ, ಬೆಳ್ಳಿಯಪ್ಪ ಉಪಸ್ಥಿತರಿದ್ದರು.