ಸುಂಟಿಕೊಪ್ಪ, ಆ. ೨೬: ಇಲ್ಲಿನ ಸಮೀಪದ ಗದ್ದೆಹಳ್ಳದ ಹೋಮ್ಸ್ ಸಂಸ್ಥೆಯ ವತಿಯಿಂದ ಕೃತಿಕಾ, ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ‘ಜಿಜಿಎ ನಾಟಿ ಉತ್ಸವ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆನೆಕಾಡು ಅರಣ್ಯ ವಲಯ ಅಧಿಕಾರಿ ಮಧುಕುಮಾರ್, ರೈತರು ಭತ್ತದ ಕೃಷಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.
ಮಡಿಕೇರಿ ಕೃಷಿ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರಾದ ಡಾ.ಹೆಚ್.ಸಿ.ಲತಾ ಮಾತನಾಡಿ, ಭತ್ತದ ಕೃಷಿ ಅದರ ಬೆಳವಣಿಗೆ ಮತ್ತು ಅದರ ಪರಿಕಲ್ಪನೆಯ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮತ್ತು ಮಕ್ಕಳಿಗೆ ಮಾಹಿತಿ ನೀಡಿದರು. ನಾಟಿ ಉತ್ಸವ-೨೦೨೬ ಅನ್ನು ಉದ್ಯಮಿ ಹಾಗೂ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಎಸ್. ಜಿ ಶ್ರೀನಿವಾಸ್ ಚಾಲನೆ ನೀಡಿದರು.
ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಕೆ.ಎಲ್ ಕುಶಾಲಿ, ಶಿಕ್ಷಕಿ ಶಾಂತಿ ದೇವರಾಜ್, ಅರ್ಪಿತಾ ಧರ್ಮಪ್ಪ, ಪ್ರೇಮಾ ಗಣೇಶ್ ಕಟ್ಟೆಮನೆ, ಭಯಾನಕ, ಭತ್ತದ ನಾಟಿ ಪ್ರವೀಣೆ ಕಮಲ ಅವರುಗಳಿಗೆ ‘ಜಿಜಿಎ ಶಕ್ತಿ’ ಅವಾರ್ಡ್ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಪ್ರಸನ್ನ ಎಡಕೇರಿ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಮನೋರೋಗದ ವಿಶೇಷ ಶಿಕ್ಷಕಿ ಅನ್ನಮ್ ಜೀರಾ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪಿ.ಪಿ.ಜಯನಂದ, ಒಳಾಂಗಣ ವಿನ್ಯಾಸಕಿ ಕೃತಿಕಾ ಸದಾನಂದ್, ಓಎಪಿಪಿಎ ಸಂಸ್ಥೆಯ ಮಾಲೀಕರಾದ ಗಂಗೂಬಾಯಿ, ಹೋಮ್ಸ್ ಸಂಸ್ಥೆಯ ಸಂಘಟಕರಾದ ಸನ್ಮಾನ್, ತೃಶಾಲ್ ಸನ್ಮಾನ್, ಗಾನ, ಪಾರ್ಥ, ನಿಡುಮಲೆ ಮಾದವ, ಆಯೋಜಕರಾದ ಪಾರ್ಥ ಭೀಮಯ್ಯ, ಪವಿತ್ರ ಶೆಟ್ಟಿ, ಪ್ರದೀಶ ಇತರರು ಹಾಜರಿದ್ದರು.
ಈ ನಾಟಿ ಉತ್ಸವದಲ್ಲಿ ವಿವಿಧ ಶಾಲೆಗಳ ಸುಮಾರು ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ನುರಿತ ನಾಟಿ ಕೆಲಸಗಾರರ ಜೊತೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ನಾಟಿಯ ಬಗ್ಗೆ ಅನುಭವ ಪಡೆದುಕೊಂಡರು.
ಇದೇ ವೇಳೆ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಸಂತೋಷಪಟ್ಟರು.