ಮಡಿಕೇರಿ, ಆ. ೨೬: ಕಸ್ತೂರಿರಂಗನ್ ವರದಿಯಲ್ಲಿನ ಅಂಶಗಳನ್ನು ಸಡಿಲಗೊಳಿಸಬೇಕು, ಸಿ ಆಂಡ್ ಡಿ ಸರ್ವೆ ವರದಿಯನ್ನು ನೀಡಬೇಕು, ಮೀಸಲು ಅರಣ್ಯ ಘೋಷಣೆ ಸಂಬAಧ ಸೆಕ್ಷನ್ ೪ ಕೈಬಿಡಬೇಕು ಹಾಗೂ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ ೧೧ ರಂದು ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಡಿ.ಸಿ ಕಚೇರಿವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಯಲಿದೆ. ಗಾಂಧಿ ಮೈದಾನದಲ್ಲಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿಗೆ ವಿರೋಧವಿಲ್ಲ, ಆದರೆ ಆದರಲ್ಲಿನ ಕೆಲ ಅಂಶಗಳನ್ನು ಸಡಿಲಗೊಳಿಸಬೇಕು. ಸಂರಕ್ಷಿತ ವಲಯ ವ್ಯಾಪ್ತಿಯ ಬಫರ್ ಝೋನ್ ಅನ್ನು ೧ ಕಿ.ಮೀ.ನಿಂದ ೦ ಕಿ.ಮೀ.ಗೆ ಇಳಿಸಬೇಕು, ರೈತರ ಪರವಾಗಿ ಕಾನೂನುಗಳನ್ನು ಸಡಿಲ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಿ ಹಾಗೂ ಡಿ ಲ್ಯಾಂಡ್ ಸಂಬAಧ ಸರ್ವೆ ನಡೆದಿದ್ದು ಈ ವರದಿಯನ್ನು ತಕ್ಷಣ ನೀಡಬೇಕು, ಮೀಸಲು ಅರಣ್ಯ ಘೋಷಣೆ ಸಂಬAಧ ಸೆಕ್ಷನ್ ೪ ಅನ್ನು ಕೈಬಿಟ್ಟು ಈಗಾಗಲೇ ಇರುವ ಅರಣ್ಯ ಪ್ರದೇಶವನ್ನು ಮುಂದುವರಿಸಬೇಕೆAದು ಒತ್ತಾಯಿಸಿದರು. ಹಾರಂಗಿ ನಿರ್ಮಾಣ ಸಂದರ್ಭ ೩,೬೦೦ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿದ್ದು, ಇಷ್ಟೇ ಜಾಗವನ್ನು ಅರಣ್ಯ ಇಲಾಖೆಗೆ ಮರಳಿ ನೀಡಬೇಕೆಂದು ಉಚ್ಛ ನ್ಯಾಯಾಲಯದಲ್ಲಿ ಖಾಸಗಿ ವ್ಯಕ್ತಿ ಧಾವೆ ಹೂಡಿದ್ದಾರೆ. ಈ ಸಂದರ್ಭ ತಪ್ಪಾಗಿ ೩,೬೦೦ ಹೆಕ್ಟೇರ್ ಬದಲು ೧೧,೦೦೦ ದಷ್ಟು ಹೆಕ್ಟೇರ್ ಅನ್ನು ಇಲಾಖೆಗೆ ನೀಡುವಂತೆ ಆದೇಶವಾಗಿದೆ. ಈ ಕಾರಣದಿಂದಾಗಿ ಜಿಲ್ಲೆಯ ಹಲವಾರು ರೈತರ ಜಮೀನುಗಳ ಆರ್.ಟಿ.ಸಿಯಲ್ಲಿ ಅರಣ್ಯ ಪ್ರದೇಶ ಎಂದು ನಮೂದಾಗಿದ್ದು ಸಂಕಷ್ಟದಲ್ಲಿದ್ದಾರೆ ಎಂದರು. ಸಮಿತಿಯ ನಿರ್ದೇಶಕ ಮಧು ಬೋಪಣ್ಣ ಅವರು ಮಾತನಾಡಿ, ಕೊಡಗನ್ನು ಪರಿಸರ ಸೂಕ್ಷö್ಮವಾಗಿ ಮಾಡಬೇಕೆಂದು ಕೆಲ ಪರಿಸರವಾದಿಗಳು ಮುಂದಾಗಿದ್ದಾರೆ. ಇದರ ಹಿಂದೆ ಅವರ ವೈಯಕ್ತಿತ ಹಿತಾಸಕ್ತಿ ಇದೆ. ಈ ಹಿಂದೆ ಕೊಡಗಿನಲ್ಲಿ ದೊಡ್ಡ ದೊಡ್ಡ ರೆಸಾರ್ಟ್ ಗಳು ನಿರ್ಮಾಣವಾದಾಗ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದೀಗ ಸಣ್ಣದೊಂದು ಹೋಂ ಸ್ಟೇ ಕಟ್ಟಲೂ ವಿರೋಧ ಮಾಡುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು. ೬ ಬಾರಿ ಅಧಿಸೂಚನೆ ಬಂದಾಗಲೂ ಕರ್ನಾಟಕದಿಂದ ಆಕ್ಷೇಪ ವ್ಯಕ್ತವಾದರೂ ಇದನ್ನು ಪರಿಗಣಿಸಿದೆ ಮತ್ತೇ ಕಸ್ತೂರಿ ರಂಗನ್ ವರದಿ ಅಧಿಸೂಚನೆ ಹೊರಡಿಸಿರುವ ಕ್ರಮ ಸರಿಯಲ್ಲ. ಕೇರಳದಲ್ಲಿ ಇದೇ ವರದಿ ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ತಯಾರಾಗಿದೆ. ಆದರೆ ಕರ್ನಾಟಕದಲ್ಲಿ ಗ್ರಾಮಗಳನ್ನೂ ಸೇರಿಸಿರುವುದು ಸರಿಯಾದ ಕ್ರಮವಲ್ಲ ಎಂದರು. ಕಸ್ತೂರಿರಂಗನ್ ವರದಿಯಿಂದ ಸೂಕ್ಷ್ಮ ಪ್ರದೇಶದ ಜಾಗದ ಮೌಲ್ಯ ಕಡಿಮೆಯಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂಸದರು, ಶಾಸಕರು ಅರಣ್ಯ ಸಚಿವರನ್ನು ನಿಯೋಗ ಸಮೇತ ಭೇಟಿ ಮಾಡಿ ವರದಿ ಅನುಷ್ಠಾನ ನಿಲ್ಲಿಸುವಂತೆ ಆಗಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕರುಗಳಾದ ರತೀಶ್ ಮಂದಣ್ಣ, ಚನ್ನಪಂಡ ದರ್ಶನ್, ಐಲಪಂಡ ಲೋಕೇಶ್, ಸಂಗಮ್ ನಲ್ಲಪಟ್ಟಿರ ಹಾಜರಿದ್ದರು.