ಸೋಮವಾರಪೇಟೆ, ಆ. ೨೬: ಸಮೀಪದ ಓ. ಎಲ್. ವಿ. ಶಾಲೆಯ ೭ನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಯಾಸಿನ್ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
೨೦೨೫ರಲ್ಲಿ ಮಹಾರಾಷ್ಟçದಲ್ಲಿ ನಡೆದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಸಿಲ್ವರ್ ಮೆಡಲ್ ಪಡೆದುಕೊಂಡಿದ್ದ ಯಾಸಿನ್, ಈ ಬಾರಿ ಅಂತರÀರಾಷ್ಟಿçÃಯ ಮಟ್ಟದ ವಿಶ್ವಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾನೆ. ಇವರು ಬೇಳೂರು ಗ್ರಾ.ಪಂ. ನೌಕರ, ಬಜೆಗುಂಡಿ ಗ್ರಾಮ ನಿವಾಸಿ ರಷೀದ್ ಮತ್ತು ಸೆಮಿರಾ ದಂಪತಿಗಳ ಪುತ್ರ.