ವೀರಾಜಪೇಟೆ: ವೀರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಓಣಂ ಆಚರಣೆಯ ಅಂಗವಾಗಿ ಹೆಗ್ಗಳದಲ್ಲಿರುವ ಸ್ನೇಹ ಭವನ ಹಾಗೂ ಮೆರ್ಸಿ ಹೋಂ ವೃದ್ಧಾಶ್ರಮದ ನಿವಾಸಿಗಳಿಗೆ ಓಣಂ ಸದ್ಯ ವ್ಯವಸ್ಥೆ ಮಾಡುವುದರ ಜೊತೆಗೆ, ೪೬ ಬಡ ಕುಟುಂಬಗಳಿಗೆ ಓಣಂ ಕಿಟ್ ವಿತರಿಸಲಾಯಿತು.
ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಸದಸ್ಯರು ತಮ್ಮ ಮನೆಗಳಲ್ಲಿಯೇ ತಯಾರಿಸಿ ತಂದಿದ್ದ ಓಣಂ ಸದ್ಯದ ವೈವಿಧ್ಯಮಯ ಅಡುಗೆಗಳನ್ನು ಆಶ್ರಮದ ಪ್ರತಿಯೊಬ್ಬ ಹಿರಿಯರಿಗೂ ಉಣ ಬಡಿಸಿದರು.
ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ವೃದ್ಧಾಪ್ಯದ ಒಂಟಿತನದಲ್ಲಿರುವ ಹಿರಿಯರ ನಡುವೆ ಹಬ್ಬ ಆಚರಿಸುವುದರಲ್ಲಿ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಸೇವೆಗೆ ಸಮಾಜದ ಸದಸ್ಯರು ಸಹಕರಿಸುತ್ತಿದ್ದಾರೆ ಎಂದರು.
ಹೆಗ್ಗಳ ಚರ್ಚ್ನ ಧರ್ಮಗುರುಗಳಾದ ಫಾದರ್ ಮ್ಯಾಥ್ಯೂ (ಜೋಯ್) ಅವರು ಮಾತನಾಡಿ, "ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಪ್ರತಿವರ್ಷ ಆಶ್ರಮದ ಹಿರಿಯರಿಗೆ ಪ್ರೀತಿಯ ಭೋಜನದ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಹಬ್ಬದ ಸಂದರ್ಭದಲ್ಲಿ ಇಂತಹ ಆಸರೆಯಿಲ್ಲದ ಜೀವಗಳೊಂದಿಗೆ ಸಂತಸ ಹಂಚಿಕೊಳ್ಳುವ ಇಂತಹ ಕಾರ್ಯಗಳು ಇಡೀ ಸಮಾಜಕ್ಕೇ ಮಾದರಿಯಾಗಿವೆ ಎಂದರು. ಸಮಾಜದ ವತಿಯಿಂದ ಈ ವರ್ಷ ಒಟ್ಟು ೪೬ ಕುಟುಂಬಗಳಿಗೆ ರೂ.೨,೦೦೦ ಕ್ಕೂ ಹೆಚ್ಚು ಮೌಲ್ಯದ ಓಣಂ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಪದ್ಮನಾಭ ಟಿ.ಕೆ., ಸಲಹೆಗಾರ ಪಿ.ಜೆ. ವಿಶ್ವನಾಥ್, ಸಹ ಕಾರ್ಯದರ್ಶಿ ರಂಜಿತ್, ನಿರ್ದೇಶಕರಾದ ಕೆ.ಆರ್. ಬಿಂದು ಸೇರಿದಂತೆ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.ವೀರಾಜಪೇಟೆ: ವೀರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಓಣಂ ಆಚರಣೆಯ ಅಂಗವಾಗಿ ಹೆಗ್ಗಳದಲ್ಲಿರುವ ಸ್ನೇಹ ಭವನ ಹಾಗೂ ಮೆರ್ಸಿ ಹೋಂ ವೃದ್ಧಾಶ್ರಮದ ನಿವಾಸಿಗಳಿಗೆ ಓಣಂ ಸದ್ಯ ವ್ಯವಸ್ಥೆ ಮಾಡುವುದರ ಜೊತೆಗೆ, ೪೬ ಬಡ ಕುಟುಂಬಗಳಿಗೆ ಓಣಂ ಕಿಟ್ ವಿತರಿಸಲಾಯಿತು.
ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಸದಸ್ಯರು ತಮ್ಮ ಮನೆಗಳಲ್ಲಿಯೇ ತಯಾರಿಸಿ ತಂದಿದ್ದ ಓಣಂ ಸದ್ಯದ ವೈವಿಧ್ಯಮಯ ಅಡುಗೆಗಳನ್ನು ಆಶ್ರಮದ ಪ್ರತಿಯೊಬ್ಬ ಹಿರಿಯರಿಗೂ ಉಣ ಬಡಿಸಿದರು.
ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ವೃದ್ಧಾಪ್ಯದ ಒಂಟಿತನದಲ್ಲಿರುವ ಹಿರಿಯರ ನಡುವೆ ಹಬ್ಬ ಆಚರಿಸುವುದರಲ್ಲಿ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಸೇವೆಗೆ ಸಮಾಜದ ಸದಸ್ಯರು ಸಹಕರಿಸುತ್ತಿದ್ದಾರೆ ಎಂದರು.
ಹೆಗ್ಗಳ ಚರ್ಚ್ನ ಧರ್ಮಗುರುಗಳಾದ ಫಾದರ್ ಮ್ಯಾಥ್ಯೂ (ಜೋಯ್) ಅವರು ಮಾತನಾಡಿ, "ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಪ್ರತಿವರ್ಷ ಆಶ್ರಮದ ಹಿರಿಯರಿಗೆ ಪ್ರೀತಿಯ ಭೋಜನದ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಹಬ್ಬದ ಸಂದರ್ಭದಲ್ಲಿ ಇಂತಹ ಆಸರೆಯಿಲ್ಲದ ಜೀವಗಳೊಂದಿಗೆ ಸಂತಸ ಹಂಚಿಕೊಳ್ಳುವ ಇಂತಹ ಕಾರ್ಯಗಳು ಇಡೀ ಸಮಾಜಕ್ಕೇ ಮಾದರಿಯಾಗಿವೆ ಎಂದರು. ಸಮಾಜದ ವತಿಯಿಂದ ಈ ವರ್ಷ ಒಟ್ಟು ೪೬ ಕುಟುಂಬಗಳಿಗೆ ರೂ.೨,೦೦೦ ಕ್ಕೂ ಹೆಚ್ಚು ಮೌಲ್ಯದ ಓಣಂ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಪದ್ಮನಾಭ ಟಿ.ಕೆ., ಸಲಹೆಗಾರ ಪಿ.ಜೆ. ವಿಶ್ವನಾಥ್, ಸಹ ಕಾರ್ಯದರ್ಶಿ ರಂಜಿತ್, ನಿರ್ದೇಶಕರಾದ ಕೆ.ಆರ್. ಬಿಂದು ಸೇರಿದಂತೆ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.ಶನಿವಾರಸಂತೆ: ಪಟ್ಟಣ ವ್ಯಾಪ್ತಿಯಲ್ಲಿ ತಿರು ಓಣಂ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಪಟ್ಟಣ, ತ್ಯಾಗರಾಜ ಕಾಲೋನಿ, ಗುಂಡೂರಾವ್ ಬಡಾವಣೆಯಲ್ಲಿ ಮಲಯಾಳಿ ಸಮುದಾಯದವರು ಮನೆಯಂಗಳದಲ್ಲಿ ಪೂಕಳಂ ಬಿಡಿಸಿ, ನಂದಾದೀಪವÀನ್ನು ಬೆಳಗಿಸಿದರು. ಹಬ್ಬದ ವಿಶೇಷ ಖಾದ್ಯಗಳನ್ನು ತಯಾರಿಸಿ ಸವಿದರು.ವೀರಾಜಪೇಟೆ: ತಾಲೂಕಿನಾದ್ಯಂತ ಮಲಯಾಳಿ ಸಮುದಾಯದವರ ಮನೆ ಮನೆಗಳಲ್ಲಿ ಓಣಂ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಮನೆಯಂಗಳದಲ್ಲಿ ವರ್ಣರಂಜಿತ ಹೂವುಗಳಿಂದ ಪೂಕಳಂ ಬಿಡಿಸಿ ಸಾಂಪ್ರದಾಯಿಕ ಓಣಂ ಸದ್ಯವನ್ನು ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಸವಿದರು.ಶನಿವಾರಸಂತೆ: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೆಹೊಸೂರು ಮತ್ತಿತರ ಗ್ರಾಮಗಳಲ್ಲಿ ತಿರು ಓಣಂ ಹಬ್ಬವನ್ನು ಆಚರಿಸಲಾಯಿತು. ಬಣ್ಣ ಬಣ್ಣದ ಹೂವುಗಳಿಂದ ರಂಗೋಲಿ ರಚಿಸಿ ದೀಪ ಬೆಳಗಿ ಪೂಜೆ ಸಲ್ಲಿಸಲಾಯಿತು. ಹಬ್ಬದ ವಿಶೇಷ ಭೋಜನವನ್ನು ಸವಿಲಾಯಿತು.