ಮಡಿಕೇರಿ: ಕಡಗದಾಳು ಬದರ್ ಜುಮಾ ಮಸೀದಿ ವತಿಯಿಂದ ಪ್ರವಾದಿ ಪೈಗಂಬರ್ ಅವರ ೧೫೦೧ ನೇ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಆಚರಣೆಯು ೨ ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು. ಮಸೀದಿ ಹಾಗೂ ಮಸೀದಿಗೆ ತೆರಳುವ ರಸ್ತೆಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳ ಮೂಲಕ ಅಲಂಕರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕತ್ತಲೆಕಾಡು, ನೀರುಕೊಲ್ಲಿ ಹಾಗೂ ತುರುಕದಟ್ಟಿಯ ಮಕ್ಕಳು, ಯುವಕರು, ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಈ ಸಂದರ್ಭ ಮುಖ್ಯ ಭಾಷಣ ಮಾಡಿದ ಕತ್ತಲೆಕಾಡು ಮದರಸ ಅಧ್ಯಾಪಕ ಹಾಗೂ ಮಸೀದಿಯ ಉಸ್ತಾದರಾದ ಹಂಸ ಸಖಾಫಿ ಅವರು , ಪ್ರವಾದಿ ಪೈಗಂಬರ್ ಅವರು ನಮಗೆ ಕಲಿಸಿಕೊಟ್ಟ ಪ್ರಕಾರ ನಮಾಝ್ ಹಾಗೂ ಪ್ರಾರ್ಥನೆ ಮಾತ್ರವಿದ್ದರೆ ನಿಜವಾದ ಮುಸ್ಲಿಮನಾಗುವುದಿಲ್ಲ, ನಿಜವಾದ ಮುಸ್ಲಿಮನಾದವನು ಸಮಾಜಕ್ಕೆ ಸೇವೆ ಮಾಡುವವನಾಗಿದ್ದಾನೆ ಎಂದರಲ್ಲದೇ ಇಸ್ಲಾಮಿನ ಹಲವು ಚರಿತ್ರೆಗಳನ್ನು ತಿಳಿಸಿದರು.
ತುರುಕದಹಟ್ಟಿ ಮಸೀದಿಯ ಖತೀಬರಾದ ಹಂಝ ಮದನಿ ಅವರು ಮಾತನಾಡಿ, ಪ್ರವಾದಿಯ ಹಾಗೂ ಇಸ್ಲಾಂ ಚರಿತ್ರೆಗಳನ್ನು ಹೇಳಿದರು. ಮಸೀದಿಯ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಯೂಸುಫ್ ಅವರು ಎಲ್ಲರಿಗೂ ಶುಭ ಕೋರಿದರು. ಸ್ಥಳೀಯ ಪ್ರಮುಖರಾದ ನಾಸರ್ ಸಿ.ಕೆ. ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು. ಮಸೀದಿಯ ಸಭಾಂಗಣದಲ್ಲಿ ನಡೆದ ಮೊದಲನೇ ದಿನದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಹಿರಿಯರ ಹಾಗೂ ಕತ್ತಲೆಕಾಡು ಹಳೆ ವಿದ್ಯಾರ್ಥಿಗಳ ವತಿಯಿಂದ ನಡೆದ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಯಾದ ದಫ್ ಪ್ರದರ್ಶನವು ಜನರ ಗಮನ ಸೆಳೆಯಿತು. ಅದೇ ರೀತಿ ಯುವಕರ ಹಾಗೂ ಹಿರಿಯರ ಭಾಷಣ, ಹಾಡು ಹಾಗೂ ಬುರ್ದಾ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳ ಅದ್ಭುತ ಕಲಾ ಪ್ರದರ್ಶನಗಳು ನಡೆದವು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಯ ಹಾಗೂ ನಾಡಿನ ಕೀರ್ತಿಗೆ ಪಾತ್ರರಾದ ಕಡಗದಾಳು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹರ್ಷಿತ ಬಿ.ಎಸ್, ಭಾನುಪ್ರಿಯ, ಮುಹಮ್ಮದ್ ರಿಯಾಜ್ ಕೆ.ಬಿ, ಮಹಮ್ಮದ್ ಶರೀಫ್ ಹಾಗೂ ನೇತ್ರಾವತಿ ಜೆ.ಆರ್ ಅವರಿಗೆ ತುರುಕರಟ್ಟಿ ಬದರ್ ಜಮಾಅತ್ ಮಸೀದಿಯ ಜಮಾಅತ್ ಕಮಿಟಿ ವತಿಯಿಂದ ಸನ್ಮಾನ ಕಾರ್ಯಕ್ರಮ ಮತ್ತು ನಗದು ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಸ್ತಾದ್ ಉಮ್ಮರ್, ಬದರ್ ಜುಮಾ ಮಸೀದಿಯ ಜಮಾಅತ್ ಕಮಿಟಿಯ ಕಾರ್ಯದರ್ಶಿ ಹಮೀದ್ ಕೆ.ಎಂ, ಮಾಜಿ ಅಧ್ಯಕ್ಷರಾದ ನಿಸಾರ್ ಮತ್ತು ಖಾಸಿಂ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಿಗ್ಗೆ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ ಮಿಲಾದ್ ಅಂಗವಾಗಿ ಮಕ್ಕಳಾದಿಯಾಗಿ ರಸ್ತೆಯಲ್ಲಿ ಮಿಲಾದ್ ಸಂದೇಶ ಜಾಥಾ ನಡೆಸಿದರು. ಪುಟ್ಟ ಮಕ್ಕಳ ದಫ್ ನೃತ್ಯ ಮೆರವಣಿಗೆಗೆ ಮೆರುಗು ನೀಡಿತ್ತು.
ಸಮೀಪದ ಬಜೆಗುಂಡಿ ಖಿಳಾರಿಯಾ ಮಸೀದಿ ಆವರಣದಲ್ಲಿ ನಡೆದ ಈದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಈದ್ಮಿಲಾದ್ ಆಚರಣೆಯು ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವಂತಾಗಲಿ ಎಂದು ಆಶಿಸಿದರು.
ನಮ್ಮ ಜೀವನದಲ್ಲಿ ಬದಲಾವಣೆ ತರಬೇಕಾದರೆ ಮೊದಲು ನಮ್ಮ ಮನೆಗಳಿಂದಲೇ ಬದಲಾವಣೆ ಆರಂಭವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ಗಮನಹರಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಮಸೀದಿಯ ಅಭಿವೃದ್ಧಿಗೆ ರೂ. ೧೦ ಲಕ್ಷ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಸ್ಮಶಾನಕ್ಕೆ ಸ್ಥಳ ಮೀಸಲಿಡಲು ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಈದ್ಮಿಲಾದ್ ಹಬ್ಬವನ್ನು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪೈಗಂಬರರು ಸರ್ವಧರ್ಮದವರೊಂದಿಗೆ ನಾವುಗಳು ಹೇಗೆ ಒಂದಾಗಿ ಬದುಕಬೇಕು. ದೇಶದ ವಿಷಯ ಬಂದಾಗ ನಮ್ಮ ಮಾತೃಭೂಮಿಗೆ ಯಾವ ರೀತಿಯ ಗೌರವ ನೀಡಬೇಕು ಎಂದು ತಿಳಿಹೇಳಿದ್ದು, ಅದನ್ನು ಎಲ್ಲರೂ ಪಾಲಿಸಬೇಕೆಂದರು. ಧೈರ್ಯ ಹಾಗೂ ಸತ್ಯಕ್ಕಾಗಿ ಹೋರಾಡಿದವರ ಸ್ಮರಣೆಗೆ ವಿಶೇಷ ಮಹತ್ವ ಹೊಂದಿದ್ದು, ಎಲ್ಲರೂ ಅವರ ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಇಂದಿನ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು. ಕಾರ್ಯಕ್ರಮವನ್ನು ಮಸೀದಿಯ ಧರ್ಮಗುರುಗಳಾದ ನೌಶಾದ್ ಫೌಝಿ ಉದ್ಘಾಟಿಸಿದರು. ಧರ್ಮಗುರು ಶಮೀರ್ ಫೌಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಆರ್ಟಿಒ ಆಲಿ ಹುಸೇನ್, ಈಚೆಗೆ ನೇಪಾಳದಲ್ಲಿ ನಡೆದ ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಅಫೀಜ್ ಮತ್ತು ಯಾಸಿನ್, ಸಮಾಜದ ಮಹಮ್ಮದ್ ಇಸಾನ್, ಕೆ.ಎಂ. ಸುಲೈಮಾನ್, ನಿಯಾಜ್, ಇಬ್ರಾಹಿಂ, ಬೀರಾನ್ ಕುಟ್ಟಿ, ಅನಿಫ್, ಕೆ.ಎಸ್. ಅಬ್ಬಾಸ್, ರಷೀದ್, ಮುನೀರ್, ಮುಸ್ತಾಫ, ನಾಸೀರ್, ಇಸ್ಮಾಯಿಲ್ ಅವರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಮೇಸ್ತಿç, ಮಸೀದಿ ಉಪಾಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಮುಸ್ತಾಫ, ಖಿಳಾರಿಯಾ ಯೂತ್ ಕಮಿಟಿ ಅಧ್ಯಕ್ಷ ನಾಸೀರ್, ಯೂತ್ ಕಮಿಟಿಯ ಅಬ್ದುಲ್ ರಜಾಕ್, ನೌಷಾದ್, ಅಬ್ಬಾಸ್ ಬಜೆಗುಂಡಿ ಕಾರ್ಯಕ್ರಮ ನಿರ್ವಹಿಸಿದರು. ಹಿಶಾಮ್ ಅವರು ಖಿರಾಅತ್ ಪಠಿಸಿದರು.
ಜಲಾಲಿಯಾ ಮಸೀದಿ: ಪಟ್ಟಣದ ಜಲಾಲಿಯಾ ಮಸೀದಿ ವತಿಯಿಂದ ಸಂಭ್ರಮದ ಈದ್ ಮಿಲಾದ್ ಆಚರಣೆ ನಡೆಯಿತು. ಹಬ್ಬದ ಅಂಗವಾಗಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಕಕ್ಕೆಹೊಳೆ ಜಂಕ್ಷನ್ನಿAದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಿಲಾದ್ ಸಂದೇಶ ಜಾಥಾ ನಡೆಯಿತು.
ನಂತರ ಮಸೀದಿ ಆವರಣದಲ್ಲಿ ಮದರಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಸಕ ಡಾ. ಮಂತರ್ ಗೌಡ ಅವರು ಭಾಗವಹಿಸಿ ಶುಭಕೋರಿದರು. ಕಾರ್ಯಕ್ರಮವನ್ನು ಜಲಾಲಿಯಾ ಮಸೀದಿ ಖತೀಬರಾದ ಅಶ್ರಫ್ ಸಅದಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮಸೀದಿ ಅಧ್ಯಕ್ಷ ಕೆ.ಎ. ಆದಂ, ಮಾಜೀ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಎನ್.ಎ. ಮೂಸಾ, ಅಶ್ರಫ್ ಆಲಿ, ಕಾರ್ಯದರ್ಶಿ ಆಸೀಫ್, ಮಿಲಾದ್ ಕಮಿಟಿ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷ ಎಂ.ಇ. ಅಶ್ರಫ್, ಇರ್ಷಾದ್ ಮಿಸ್ಬಾಹಿ, ತೌಫೀಕ್, ಮೊಹಿದ್ದೀನ್ ಸೇರಿದಂತೆ ಇತರರು ಇದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತೆ ವತಿಯಿಂದ ಈದ್ ಮಿಲಾದ್ ಆಚರಣೆ ನಡೆಯಿತು.
ಹರಿಶ್ಚಂದ್ರಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿ ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಮೆರವಣಿಗೆಯಲ್ಲಿ ನೂರಲ್ ಹುದ ಮದರಸದ ವಿದ್ಯಾರ್ಥಿಗಳು ದಫ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಸಂಚಾಲಕತ್ವವನ್ನು ಸಂಸ್ಥೆಯ ಖಜಾಂಚಿ ಪಿ.ಎ.ರಶೀದ್ ವಹಿಸಿದ್ದರು. ಸಾಂಸ್ಕೃತಿಕ ಮೆರವಣಿಗೆಯು ಬಸ್ ನಿಲ್ದಾಣದಲ್ಲಿ ಸಮಾಗಮನಗೊಂಡಿತ್ತು. ನಿಲ್ದಾಣದಲ್ಲೂ ಮದರಸ ವಿದ್ಯಾರ್ಥಿಗಳು ದಫ್ ಕಾರ್ಯಕ್ರಮ ನಡೆಸಿಕೊಟ್ಟರು. ಸೋಹೆಬ್ ಫೈಜಿ ಮಾತನಾಡಿದರು.
ಶಾಫಿ ಮುಸ್ಲಿಂ ಜಮಾಅತೆ ಅಧ್ಯಕ್ಷರಾದ ಎಂ.ಹೆಚ್. ನಾಸೀರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಮಹಮ್ಮದ್ ಆಲಿ ಫೈಜಿ, ರಿಯಾಸ್ ಬಾಕವಿ, ಮುಜಿಬ್ಹಜಾರಿ, ಜುಬೈರ್ ಫೈಜಿ, ಅಬ್ದುಲ್ ರಶೀದ್,ಅಶ್ರಫ್, ರಹೀಂ, ಸಲಾಂ ಕೆ.ಪಿ. ಕಾರ್ಯದರ್ಶಿ ಅಬ್ದುಲ್ ಸಮ್ಮದ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಂ ಸಮುದಾಯದವರಿಗೆ ಹಲವು ಕಡೆಗಳಲ್ಲಿ ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.ವೀರಾಜಪೇಟೆ: ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಶಾಫೀ ಜುಮಾ ಮಸೀದಿ ಹಾಗೂ ಗೌರಿ ಕೆರೆ ಸಮೀಪದ ನುಸ್ರತುಲ್ ಉಲೂಂ ಮದರಸ ಆಡಳಿತ ಮಂಡಳಿಯ ಆಶ್ರಯದಲ್ಲಿ ಬೃಹತ್ ಈದ್ ಮಿಲಾದ್ ಮೆರವಣಿಗೆ ಜರುಗಿತು.
ನುಸ್ರತುಲ್ ಉಲೂಮ್ ಮದ್ರಸ ಆವರಣದಿಂದ ಆರಂಭಗೊAಡ ಮೆರವಣಿಗೆಗೆ ಮೊಹಲ್ಲಾ ಖತೀಬ ರಾದ ಹಾರಿಸ್ ಭಾಖವಿ ಅವರ ಪ್ರಾರ್ಥನೆಯೊಂದಿಗೆ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ರಶೀದ್ ಹಾಜಿ ಚಾಲನೆ ನೀಡಿದರು.
ಮೆರವಣಿಗೆಯು ವೀರಾಜಪೇಟೆಯ ಪ್ರಮುಖ ಬೀದಿಗಳು, ಗೋಣಿಕೊಪ್ಪ ರಸ್ತೆ, ದೊಡ್ಡಟ್ಟಿ ಚೌಕಿ ಹಾಗೂ ಎಫ್.ಎಮ್.ಸಿ. ರಸ್ತೆ, ಗಡಿಯಾರ ಕಂಬದ ಮೂಲಕ ಸಾಗಿ ಶಾಫೀ ಜುಮಾ ಮಸೀದಿಯ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ಮದ್ರಸ ವಿದ್ಯಾರ್ಥಿಗಳ ದಫ್ ನೃತ್ಯ, ಹೂವಿನ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು. ಕೊನೆಯಲ್ಲಿ ಬೃಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಮಹಮ್ಮದ್ ಶರೀಫ್, ಪ್ರವಾದಿಯವರು ಇಡೀ ಮಾನವ ಕುಲಕ್ಕೆ ಶಾಂತಿ, ಕರುಣೆ ಹಾಗೂ ಸಹೋದರತೆಯ ಸಂದೇಶ ಸಾರಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಸೀದಿ-ಮದರಸ ಆಡಳಿತ ಮಂಡಳಿ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು, ಮದ್ರಸ ವಿದ್ಯಾರ್ಥಿಗಳು ಹಾಗೂ ಜಮಾಅತ್ನವರು ಪಾಲ್ಗೊಂಡಿದ್ದರು.ಪೊನ್ನAಪೇಟೆ: ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಿಲಾದ್ ರ್ಯಾಲಿ ನಡೆಯಿತು. ಶಾಫಿ ಜುಮಾ ಮಸೀದಿಯಿಂದ ಆರಂಭಗೊAಡ ರ್ಯಾಲಿ, ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು. ಧರ್ಮಗುರು ಸೂಫಿ ದಾರಿಮಿ ಅವರು ಪ್ರಾರ್ಥನೆಯೊಂದಿಗೆ ರ್ಯಾಲಿಗೆ ಚಾಲನೆ ನೀಡಿದರು.
ರಸ್ತೆಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು. ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ದಫ್ ಪ್ರದರ್ಶನ, ಫ್ಲವರ್ ಡ್ಯಾನ್ಸ್ ಆಕರ್ಷಣೀಯವಾಗಿತ್ತು. ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವೀಕ್ಷಿಸಿದರು.
ಶಾಫಿ ಜುಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಜೀಜ್ ಪಿ.ಎ, ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಖಜಾಂಚಿ ಕೆ. ಮಹಮ್ಮದ್ ಹಾಜಿ, ಆಡಳಿತ ಮಂಡಳಿ ಸದಸ್ಯರು, ಮಿಲಾದ್ ಕಮಿಟಿ ಅಧ್ಯಕ್ಷ ಮಹಮ್ಮದ್ ಅಲಿ ವಿ.ಹೆಚ್, ಸಂಚಾಲಕ ಜುನೈದ್ ಸಿ.ಎ, ಖಜಾಂಚಿ ಸಾಜಿರ್ ಸಿ.ಎ, ಕಮಿಟಿ ಸದಸ್ಯರು ಮತ್ತಿತರರು ಹಾಜರಿದ್ದರು.
ಗೂಡ್ಲೂರಿನಲ್ಲಿ ಜಾನುವಾರು ಮೇಲೆ ಹುಲಿ ದಾಳಿ
ಸಿದ್ದಾಪುರ, ಆ. ೨೬: ಕಳೆದ ಕೆಲವು ದಿನಗಳಿಂದ ಹುಲಿ ದಾಳಿಯಿಂದಾಗಿ ಮೂರು ಜಾನುವಾರುಗಳು ಸಾವನ್ನಪ್ಪಿದ್ದು ಒಂದು ಜಾನುವಾರು ಗಂಭೀರ ಗಾಯಗೊಂಡಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗೂಡ್ಲೂರು ಗ್ರಾಮದಲ್ಲಿ ಸಂಭವಿಸಿದೆ.
ದೇವಮಚ್ಚಿ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುವ ಚೆನ್ನಂಗಿ ಗೂಡ್ಲೂರು ಗ್ರಾಮದ ನಿವಾಸಿಗಳಾದ ಕುಲ್ಲಚೆಟ್ಟಿರ ರಾಮಯ್ಯ ಎಂಬವರಿಗೆ ಸೇರಿದ ಕಡಸು ಮತ್ತು ಪಾಣತ್ತಲೆ ರಘು ಅವರಿಗೆ ಸೇರಿದ ಹಸು ಮತ್ತು ಸೋಮಯ್ಯ ಎಂಬವರಿಗೆ ಸೇರಿದ ಕಡಸು ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಈ ಭಾಗದ ನಿವಾಸಿಗಳ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆಗಳು ಕೆಲವೊಂದು ತಡವಾಗಿ ತಿಳಿದು ಬರುತ್ತಿದ್ದು ಇತ್ತೀಚೆಗೆ ಹಸು ಮೇಯಿಸುವ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಕೊಂದು ಹಾಕಿರುತ್ತದೆ ಎಂದು ಹಸುವಿನ ಮಾಲೀಕರು ತಿಳಿಸಿದ್ದಾರೆ.
ಕಣ್ಣೆದುರೇ ಹಸು ಕೊಂದ ಹುಲಿ!
ಚೆನ್ನಂಗಿ ಗೂಡ್ಲೂರು ಗ್ರಾಮದಲ್ಲಿ ಅಜೇಯ ಎಂಬಾತ ಹಸು ಕರುಗಳನ್ನು ಮೇಯಿಸಿಕೊಂಡು ಸಂಜೆ ನಾಲ್ಕು ಗಂಟೆ ಸಮಯಕ್ಕೆ ಮಾಲೀಕರ ಮನೆಗೆ ಜಾನುವಾರುಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಿಢೀರನೆ ಕಾಡಿನ ಒಳಗಿನಿಂದ ಹುಲಿ ಮತ್ತು ಅದರ ಮರಿ ಸೇರಿ ಹಠಾತ್ತನೆ ಬಂದು ಹಸುವಿನ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಅಜೇಯ ಧೈರ್ಯದಿಂದಲೇ ಅದರ ಮೇಲೆ ಮಣ್ಣು ಎರಚಿದ್ದಾನೆ. ಅಲ್ಲದೆ ಕಿರುಚಿದರೂ ಕೂಡ ಹುಲಿಯು ನೋಡು ನೋಡುತ್ತಿದ್ದಂತೆ ಹಸುವಿನ ಮೇಲೆ ದಾಳಿ ನಡೆಸಿ ಕೊಂದುಹಾಕಿತು ಎಂದು ಅಜೇಯ ಹಸುವಿನ ಮಾಲೀಕರಿಗೆ ತಿಳಿಸಿದ್ದಾನೆ.ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ
ನಾಪೋಕ್ಲು, ಆ. ೨೬: ಭಾಗಮಂಡಲ ಸಮೀಪದ ಬಂಡಿಕಡವು ಬಳಿ ನದಿ ನೀರಿನ ಪ್ರವಾಹದಲ್ಲಿ ಸಿಲುಕಿದ್ದ ಕಾರಿನ ಪ್ರಯಾಣಿಕರನ್ನು ಯುವಕರ ತಂಡ ರಕ್ಷಿಸಿದೆ. ಮಂಗಳವಾರ ರಾತ್ರಿ ೧೦ ಗಂಟೆ ಸಮಯದಲ್ಲಿ ಭಾಗಮಂಡಲ ಪೊಲೀಸ್ ಠಾಣೆಯ ಮುಖ್ಯಪೇದೆ ಶಮಿಲ್ ಅವರು ಪತ್ನಿ ಮಕ್ಕಳೊಂದಿಗೆ ಬಂಡಿಕಡು ಒಳ ರಸ್ತೆಯ ಮೂಲಕ ಅಯ್ಯಂಗೇರಿಯತ್ತ ತಮ್ಮ ಮಾರುತಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಭಾರಿ ಮಳೆಯಿಂದಾಗಿ ಬಂಡಿಕಡು ಒಳ ರಸ್ತೆಯ ಸೇತುವೆ ಬಳಿ ನದಿ ನೀರಿನ ಪ್ರವಾಹ ಆವರಿಸಿತ್ತು. ರಸ್ತೆಯಲ್ಲಿ ನೀರು ಕಡಿಮೆ ಇರಬಹುದೆಂದು ಭಾವಿಸಿ ಶಮೀಲ್ ಕಾರನ್ನು ಮುಂದೆ ಚಲಾಯಿಸಿದ್ದಾರೆ. ಅಷ್ಟರಲ್ಲಿ ಕಾರಿನ ಅರ್ಧದಷ್ಟು ಪ್ರವಾಹದ ನೀರು ಆವರಿಸಿ ಕಾರು ಮುಳುಗಡೆಯಾಗುವ ಪರಿಸ್ಥಿತಿ ತಲೆದೋರಿತು. ಶಮಿಲ್ ಪತ್ನಿ ಮಕ್ಕಳು ಗಾಬರಿಗೊಂಡು ಸಮೀಪದ ತಾವೂರು ಮಸೀದಿಯ ಧರ್ಮಗುರು ಶಿಯಾಬುದ್ದೀನ್ ಅವರಿಗೆ ಮಾಹಿತಿ ನೀಡಿದ್ದಾರೆ.
ಅವರು ಕೂಡಲೇ ಸ್ಥಳಕ್ಕೆ ಯುವಕರ ತಂಡವನ್ನು ಕಳುಹಿಸಿ ಪ್ರವಾಹದ ಮಧ್ಯದ ಕಾರಿನಲ್ಲಿ ಇದ್ದ ಶಮಿಲ್ ಕುಟುಂಬಸ್ಥರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ನೀರಿನಲ್ಲಿ ಮುಳುಗಿದ್ದ ಕಾರನ್ನು ಹಗ್ಗದ ಸಹಾಯದಿಂದ ತೆರವುಗೊಳಿಸಲಾಯಿತು.ಮಡಿಕೇರಿ, ಆ. ೨೬: ಮಡಿಕೇರಿ ನಗರ ದಸರಾ ಸಮಿತಿಯ ೨೦೨೫ನೇ ಸಾಲಿನ ಜಮಾ - ಖರ್ಚು ಮಂಡನೆ ಹಾಗೂ ೨೦೨೬ ರ ಅಕ್ಟೋಬರ್ನಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆ ಸಭೆ ತಾ. ೨೮ ರಂದು ಅಪರಾಹ್ನ ೪ ಗಂಟೆಗೆ ನಗರ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷೆ ಕಲಾವತಿ ಪಿ. ಅವರ ಅಧ್ಯಕ್ಷತೆಯಲ್ಲಿ ಮತ್ತು ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಗರದ ಹೊಟೇಲ್ ರಾಜ್ದರ್ಶನ್ನಲ್ಲಿ ಏರ್ಪಡಿಸಲಾಗಿದೆ. ಸಂಪ್ರದಾಯದAತೆ ಪೂಜಾ ಕಾರ್ಯಕ್ರಮವು ಅಪರಾಹ್ನ ೩ ಗಂಟೆಗೆ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ನಡೆಯಲಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ತಿಳಿಸಿದೆ.ಕೂಡಿಗೆ: ಈದ್ ಮಿಲಾದ್ ಹಬ್ಬದ ಅಂಗವಾಗಿ ಕೂಡಿಗೆಯ ಎಸ್ಕೆಎಸ್ಎಸ್ಎಫ್ ವಿಖಾಯ ಆ್ಯಕ್ಟಿವ್ ವಿಂಗ್ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕೂಡಿಗೆ ಸೋಮವಾರಪೇಟೆ ರಸ್ತೆಯ ಮಸೀದಿ ಮುಂಭಾಗದಿAದ ಕೂಡಿಗೆ ಸರ್ಕಲ್ವರೆಗೆ ರಸ್ತೆ ಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಎಸ್ಕೆಎಸ್ಎಸ್ಎಫ್ ಕೂಡಿಗೆ ಘಟಕದ ಅಧ್ಯಕ್ಷ ಮೊಹಮ್ಮದ್, ಕಳೆದ ಹಲವು ವರ್ಷಗಳಿಂದ ಕೂಡಿಗೆ ಘಟಕದ ಎಸ್ಕೆಎಸ್ಎಸ್ಎಫ್ ಸಂಘಟನೆಯು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈದ್ ಮಿಲಾದ್ ಪ್ರಯುಕ್ತ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಶಿವಕುಮಾರ್, ಎಸ್.ಎನ್. ಅನಂತ್, ಎಸ್ಕೆಎಸ್ಎಸ್ಎಫ್ ವಿಖಾಯ ಕೂಡಿಗೆ ಘಟಕದ ಕಲಂದರ್, ರಫೀಕ್, ಆಸಿಫ್, ಮುಸ್ತಫಾ, ಮೊಹಮ್ಮದ್ ರಾಹಿಫ್, ಹನೀಫ್, ಅಬ್ದುಲ್ ರಝಾಕ್, ಮದೀನಾ ಟಿಂಬರ್ ಶಂಸುದ್ದೀನ್, ಶಾಫಿ ಸೇರಿದಂತೆ ಎಸ್ಕೆಎಸ್ಎಸ್ಎಫ್ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.ಪಾಡಿಯಲ್ಲಿ ಸಿಂಹ ಮಾಸ ಉತ್ಸವ
ಮಡಿಕೇರಿ, ಆ. ೨೬: ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಸಿಂಹ ಮಾಸ ೧೦ ತಾ. ೨೭ ರಂದು (ಇಂದು) ದೇವರ ಸಿಂಹ ಮಾಸದ ಉತ್ಸವ ನಡೆಯಲಿದೆ.
ತಾ. ೨೮ ರಂದು ಕೈಲ್ಪೊಳ್ದ್ ಉತ್ಸವವು ನಡೆಯಲಿದೆ. ಮಧ್ಯಾಹ್ನ ೧.೩೦ಕ್ಕೆ ಶತಭಿಷಾ ನಕ್ಷತ್ರ ವೃಶ್ಚಿಕ ಲಗ್ನದಲ್ಲಿ ಆಯುಧ ಪೂಜೆಯು ನಡೆಯಲಿದೆ. ಸಂಜೆ ೭ ಗಂಟೆ ೧೦ ನಿಮಿಷಕ್ಕೆ ಬೇಟೆ ಮುಹೂರ್ತ ಇರುವುದಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಸ್ಥಾನದ ಜ್ಯೋತಿಷ್ಯ ಶಶಿಕುಮಾರ್ ಕೆ. ಹಾಗೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ವ್ಯವಸ್ಥಾಪನ ಸಮಿತಿ ಹಾಗೂ ಭಕ್ತಜನ ಸಂಘದ ಸಮಿತಿ ತಿಳಿಸಿದೆ.ನಾಪೋಕ್ಲು, ಆ. ೨೬: ಭಗವತಿ ಯುವಕ ಸಂಘ ನಾಪೋಕ್ಲು ವತಿಯಿಂದ ಕೈಲ್ ಪೊಳ್ದ್ ಹಬ್ಬ ಪ್ರಯುಕ್ತ ಸ್ಥಳೀಯ ಕೆಪಿಎಸ್ ಪ್ರಾರ್ಥಮಿಕ ಶಾಲಾ ಆಟದ ಮೈದಾನದಲ್ಲಿ ತಾ. ೨೮ ರಂದು (ನಾಳೆ) ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ.
ಸಂಘದ ಅಧ್ಯಕ್ಷ ಬೊಪ್ಪಂಡ ವೀರನ್ ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ನ ಅಧ್ಯಕ್ಷ ಬೊಪ್ಪಂಡ ಮಹೇಶ್ ತಿಮ್ಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ಸತೀಶ್ ದೇವಯ್ಯ ಭಾಗವಹಿಸಲಿದ್ದಾರೆ ಎಂದು ಭಗವತಿ ಯುವಕ ಸಂಘದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.