ಚೆಯ್ಯಂಡಾಣೆ, ಆ. ೨೬ : ಸಮೀಪದ ಮಗ್ಗುಲದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾ ಸಂಸ್ಥೆಯ ಎಲ್ ಎಸ್ ಎ ಕೇರ್ ವತಿಯಿಂದ ಈದ್ ಮಿಲಾದ್-ಉನ್-ನಬಿ ವಿಶೇಷ ಸೌಹಾರ್ದ ಕಾರ್ಯಕ್ರಮ ಜರುಗಿತು.

ಎಲ್ ಎಸ್ ಎ ಕೇರ್ ವತಿಯಿಂದ ವೀರಾಜಪೇಟೆಯ ಆರ್ಜಿಯಲ್ಲಿರುವ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಗೆ ಭೇಟಿ ನೀಡಲಾಯಿತು.

ಈದ್ ಮಿಲಾದ್-ಉನ್-ನಬಿ ಪ್ರಯುಕ್ತ ಆಯೋಜಿಸಲಾದ ಸೌಹಾರ್ದ ಕೂಟದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಅಲ್ಲಿನ ಮಕ್ಕಳೊಂದಿಗೆ ಮನೋರಂಜನಾ ಮತ್ತು ಸ್ನೇಹಭಾವದ ಕಾರ್ಯಕ್ರಮಗಳನ್ನು ನಡೆಸಿದರು.

ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಅಡುಗೆ ಸಾಮಗ್ರಿಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.

ಮಕ್ಕಳಲ್ಲಿ ವಿಶ್ವಾಸ, ಸ್ನೇಹ, ಸಹೋದರತ್ವ ಮತ್ತು ಸಮಾನತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆ ಮತ್ತು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.