ಕೊಡ್ಲಿಪೇಟೆ, ಆ. ೨೬: ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ (ಸುನ್ನಿ ಜುಮ್ಮಾ ಮಸ್ಜಿದ್) ವತಿಯಿಂದ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ ತಾ.೨೭ ರಿಂದ ೪ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಾ. ೨೭, ೨೮, ೨೯ ರ ದಿನಗಳಲ್ಲಿ ಧಾರ್ಮಿಕ ಪ್ರವಚನ ಹಾಗೂ ೩೦ ರಂದು ವಿಶೇಷ ಮೀಲಾದ್ ಕಾರ್ಯಕ್ರಮಗಳು ನಡೆಯಲಿವೆ.
ತಾ. ೨೭ ರಂದು (ಇಂದು) ರಾತ್ರಿ ೭.೩೦ಕ್ಕೆ ಅಸ್ಲಂ ಆಝ್‌ಹರಿ, ತಾ. ೨೮ ರಂದು ಅಬ್ದುಲ್ ರಾಫಿ ಹಿಮಾಮಿ ಹಾಗೂ ತಾ. ೨೯ ಶನಿವಾರ ಉಸ್ತಾದ್ ರಫೀಕ್ ದಾರಿಮಿ ಅವರುಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ತಾ. ೨೯ ರಂದು ರಾತ್ರಿ ಸಯ್ಯದ್ ಝ್ಯೆನುಲ್ ಆಭಿದ್ ತಂಙಳ್ ನೇತೃತ್ವದಲ್ಲಿ ಸ್ವಲಾತ್ ದುಆ ಮಜ್ಲಿಸ್ ನಡೆಯಲಿದೆ. ಮಧ್ಯಾಹ್ನ ಬ್ಯಾಡಗೊಟ್ಟ ಮದ್ರಸ ಸಮೀಪದಿಂದ ಮಿಲಾದ್ ಸಂದೇಶ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ. ತಾ. ೩೦ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆಯವರೆಗೆ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದ್ ಜಲ್ಸಾ ಮತ್ತು ಅನ್ನದಾನ ಜರುಗಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ವಿದ್ವಾಂಸರು ಭಾಗವಹಿಸಲಿದ್ದಾರೆಂದು ಮಸ್ಜಿದುನ್ನೂರ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.