ಮಡಿಕೇರಿ, ಆ. ೨೫: ಮಡಿಕೇರಿ ದಸರಾ ಸಮಿತಿ ನಿಯೋಗ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರನ್ನು ಭೇಟಿಯಾಯಿತು.
ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಆಚರಣೆ ಕುರಿತು ಪ್ರಮುಖರು ಚರ್ಚಿಸಿದರು. ಬಿಂದುಮಣಿ ಅವರನ್ನು ಭೇಟಿ ಮಾಡಿ ಮುಂಬರುವ ದಸರಾ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕಾನೂನು ಸುವ್ಯಸ್ಥೆಯೊಂದಿಗೆ ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಬಿಂದುಮಣಿ ಭರವಸೆ ನೀಡಿದರು. ಈ ಸಂದರ್ಭ ದಸರಾ ಸಮಿತಿಯ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಕಾರ್ಯಾಧ್ಯಕ್ಷ ಬಿ. ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಉಪಾಧ್ಯಕ್ಷರುಗಳಾದ ವಿ.ಜಿ.ಮೋಹನ್ ಬಿ.ಪಿ. ಡಿಷು ಹಾಗೂ ಒ.ಎನ್.ಬಾಬು ಹಾಜರಿದ್ದರು.