ಹೆಚ್.ಜೆ. ರಾಕೇಶ್
ಮಡಿಕೇರಿ, ಆ. ೨೫: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ಕೊಡಗು ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಈಗಾಗಲೇ ಶೇ.೭೨.೮೩ ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆಗಸ್ಟ್ ತಿಂಗಳಾAತ್ಯದೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಮುಂದಿನ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ.
೨೦೨೩ರ ಜುಲೈನಲ್ಲಿ ಜಾರಿಗೆ ಬಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಹಾಗೂ ಯೋಜನೆಯ ದುರ್ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜುಲೈ ೧ ರಿಂದ ಪುನರ್ ಪರಿಶೀಲನಾ ಕಾರ್ಯ ಆರಂಭಿಸಲಾಗಿದೆ.
ಚೆಸ್ಕಾA ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಫಲಾನುಭವಿಗಳ ಅರ್ಜಿ ಹಾಗೂ ದಾಖಲೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದೆ. ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯದAತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ದೊರೆಯುವಂತೆ ಸಮೀಕ್ಷೆ ನಡೆಸಲಾಗುತ್ತಿದೆ. ಫಲಾನುಭವಿಗಳು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಮೀಕ್ಷೆ ಸಂದರ್ಭ ನೀಡದಿದ್ದಲ್ಲಿ ಯೋಜನೆಯ ಸೌಲಭ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳು ಸಮೀಕ್ಷಾ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಫಲಾನುಭವಿಗಳ ವಿವರಗಳನ್ನು ನವೀಕರಿಸುವುದು, ಅನರ್ಹ ಸಂಪರ್ಕಗಳನ್ನು ಪತ್ತೆಹಚ್ಚುವುದು ಹಾಗೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ಅರ್ಹರಿಗೆ ಸಮರ್ಪಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.ಆಧಾರ್ ಕಾರ್ಡ್, ಭಾವಚಿತ್ರ, ಮತದಾರರ ಗುರುತಿನ ಚೀಟಿ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಬಾಡಿಗೆ ಅಥವಾ ಲೀಸ್ ಒಪ್ಪಂದ ಪತ್ರ(ಅಗತ್ಯವಿದ್ದರೆ), ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ವಿವರಗಳನ್ನು ಸಮೀಕ್ಷೆ ವೇಳೆ ಗ್ರಾಹಕರಿಂದ ಪಡೆದುಕೊಳ್ಳುತ್ತಿರುವ ಚೆಸ್ಕಾಂ ಸಿಬ್ಬಂದಿ ವರ್ಗದವರು ಸ್ಥಳದಲ್ಲಿಯೇ ಆ್ಯಪ್ ಮೂಲಕ ಅವುಗಳನ್ನು ‘ಅಪ್ಲೋಡ್’ ಮಾಡುತ್ತಿದ್ದಾರೆ. ತಾಂತ್ರಿಕ ಅಥವಾ ದಾಖಲೆಯಲ್ಲಿನ ಸಮಸ್ಯೆಗಳಿಂದ ತೊಡಕುಗಳು ಉಂಟಾದಲ್ಲಿ ಸ್ಥಳೀಯ ಚೆಸ್ಕಾಂ ಕಚೇರಿ ಮೂಲಕ ಪರಿಹಾರವನ್ನು ಕೈಗೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ.
ಗೃಹಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರು ಸಮೀಕ್ಷೆ ಸಂದರ್ಭದಲ್ಲಿ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ನೀಡದಿದ್ದರೆ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಅರ್ಹ ಫಲಾನುಭವಿಗಳು ಸಮೀಕ್ಷಾ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಇಲಾಖೆ ಸೂಚಿಸಿದೆ.
ಶೇ ೭೨ ಪೂರ್ಣ
ಕೊಡಗು ಜಿಲ್ಲೆಯಲ್ಲಿ ಶೇ ೭೨.೮೩ ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಆಗಸ್ಟ್ ಅಂತ್ಯದ ತನಕ ಪ್ರಕ್ರಿಯೆ ನಡೆಸಲು ಸರಕಾರ ಅವಕಾಶ ನೀಡಿದ್ದು, ಗಡುವು ವಿಸ್ತರಣೆಯ ಕುರಿತು ಯಾವುದೇ ಮಾಹಿತಿಯೂ ಸದ್ಯಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು ೧,೬೫,೬೮೧ ವಿದ್ಯುತ್ ಸಂಪರ್ಕಗಳಿದ್ದು, ಈ ಪೈಕಿ ೧,೪೭,೮೧೨ ಗೃಹಜ್ಯೋತಿ ಯೋಜನೆಯಡಿ ಸಂಪರ್ಕಗಳಿವೆ. ಈ ತನಕ ೧,೦೭,೬೫೪ ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡು ಪ್ರಕ್ರಿಯೆ ಪೂರ್ಣಗೊಳಿಸಿ ಶೇ ೭೨.೮೩ ಪ್ರಗತಿ ಸಾಧಿಸಲಾಗಿದೆ.
ಜುಲೈ ತಿಂಗಳಿನಲ್ಲಿ ೮೩,೮೯೦ ಹಾಗೂ ಆಗಸ್ಟ್ ೨೪ರ ತನಕ ೨೩,೭೬೪ ಫಲಾನುಭವಿಗಳ ದಾಖಲೆಗಳು ಆ್ಯಪ್ ಮೂಲಕ ನೋಂದಾಯಿಸಲ್ಪಟ್ಟಿವೆ.
ತಾಲೂಕುವಾರು ಮಾಹಿತಿ
ಕುಶಾಲನಗರ ತಾಲೂಕಿನಲ್ಲಿ ೩೫,೨೨೬ ಫಲಾನುಭವಿಗಳ ಪೈಕಿ ೨೧,೧೮೦ (ಶೇ ೬೦.೧೩), ಮಡಿಕೇರಿ ತಾಲೂಕಿನಲ್ಲಿ ೩೯೪೨೫ ಪೈಕಿ ೨೮,೫೪೩ (ಶೇ ೭೨.೪೦), ಪೊನ್ನಂಪೇಟೆ ೨೪,೮೭೩ ಪೈಕಿ ೧೪,೯೬೧ (ಶೇ ೬೦.೧೫), ವೀರಾಜಪೇಟೆ ೨೬,೭೭೧ ಪೈಕಿ ೧೯೯೮೭ (ಶೇ ೭೪.೨೯) ಫಲಾನುಭವಿಗಳ ಪ್ರಕ್ರಿಯೆ ಪೂರ್ಣಗೊಂಡಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ೨೧,೫೧೭ ಫಲಾನುಭವಿಗಳ ಪೈಕಿ ೨೩,೦೮೩ (ಶೇ ೧೦೭.೨೮) ಫಲಾನುಭವಿಗಳ ದಾಖಲೆಗಳು ಅಪ್ಲೋಡ್ ಆಗಿದ್ದು, ಇದಕ್ಕೆ ಉತ್ತರಿಸಿದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಕುಠೀರ ಜ್ಯೋತಿ, ಭಾಗ್ಯಜ್ಯೋತಿ ಫಲಾನುಭವಿಗಳ ದಾಖಲೆಗಳು ಸಲ್ಲಿಕೆಯಾಗಿರುವುದರಿಂದ ಈ ಅಂಕಿಅAಶ ದಾಖಲಾಗಿದೆ ಎಂದು ತಿಳಿಸಿದ್ದಾರೆ.