ಮಡಿಕೇರಿ, ಆ. ೨೫: ಕೊಡಗಿನ ಜನತೆಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯಲ್ಲಿನ ಕೊಡಗಿನ ಸೂಕ್ಷö್ಮ ಪರಿಸರ ಪ್ರದೇಶಗಳಾಗಿ ಗುರುತಿಸಲ್ಪಟ್ಟ ಗ್ರಾಮಗಳನ್ನು ವರದಿಯಿಂದ ಕೈ ಬಿಡುವುದಕ್ಕೆ ಪೂರಕವಾಗಿ ಕಂದಾಯ ಮತ್ತು ಅರಣ್ಯ ಇಲಾಖಾ ಜಂಟಿ ಸರ್ವೇ ಕಾರ್ಯಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಇದನ್ನು ರಾಜ್ಯ ಸರ್ಕಾರ ಈಗಾಗಲೆ ತಿರಸ್ಕರಿಸಿದೆ. ಇದಕ್ಕೆ ನಮ್ಮ ಸಹಮತ ಮತ್ತು ಬೆಂಬಲವಿದೆ. ಆದರೆ, ವರದಿಯನ್ನು ತಿರಸ್ಕರಿಸಿರುವ ಕ್ರಮ ಕೇವಲ ಪಶ್ಚಿಮ ಘಟ್ಟ ಪ್ರದೇಶದ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳುವ ಇಲ್ಲವೆ ಕೈತೊಳೆದುಕೊಳ್ಳುವ ಪ್ರಯತ್ನವಾಗಿರಬಾರದೆಂದು ಸ್ಪಷ್ಟಪಡಿಸಿದರು.

ಬಫರ್ ಝೋನ್ “೦”ಗೆ ಸೀಮಿತವಾಗಲಿ- ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬAಧಿಸಿದAತೆ ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷö್ಮ ವಲಯದ ಗಡಿಯಿಂದ ೦ ದಿಂದ ೧೦ ಕಿ.ಮೀ. ವರೆಗಿನ ಪ್ರದೇಶವನ್ನು ಬಫರ್ ಝೋನ್‌ಗೆ ಅವಕಾಶವಿದೆ. ಇದನ್ನು “೦”ಗೆ ಸೀಮಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಬಫರ್‌ಝೋನ್ ವಿಸ್ತ್ತರಿಸಕೂಡದೆಂದು ರವಿ ಕಾಳಪ್ಪ ಆಗ್ರಹಿಸಿದರು.

ವಿಶೇಷ ಗ್ರಾಮ ಸಭೆಗಳಾಗಲಿ- ಕಸ್ತೂರಿ ರಂಗನ್ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ೬೦ ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಸ್ತುತ ಗ್ರಾಮ ಪಂಚಾಯ್ತಿಗಳಲ್ಲಿ ಆಡಳಿತ ಮಂಡಳಿ ಇಲ್ಲದೆ, ಆಡಳಿತಾಧಿಕಾರಿಗಳಷ್ಟೆ ಇದ್ದಾರೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಪಂ ಆಡಳಿತಾಧಿಕಾರಿಗಳಿಗೆ “ವಿಶೇಷ ಗ್ರಾಮ ಸಭೆ” ನಡೆಸಲು ಸೂಚನೆ ನೀಡಬೇಕು ಮತ್ತು ಈ ವಿಶೇಷ ಸಭೆಗಳಲ್ಲಿ ಕಸ್ತೂರಿ ರಂಗನ್ ವರದಿಗೆ ವಿರುದ್ಧವಾದ ನಿರ್ಣಯ ಕೈಗೊಂಡು ಕಳುಹಿಸುವ ಕಾರ್ಯ ನಡೆಯಬೇಕಾಗಿದೆಯೆಂದು ರವಿ ಕಾಳಪ್ಪ ಅಭಿಪ್ರಾಯಿಸಿದರು. ಕೇರಳ ಮಾದರಿಯ ಸರ್ವೇ ಆಗಲಿ- ಕಸ್ತೂರಿ ರಂಗನ್ ವರದಿಯ ಆರಂಭದ ಹಂತದಲ್ಲೆ ನೆರೆಯ ಕೇರಳ ರಾಜ್ಯವು, ತನ್ನ ರಾಜ್ಯದಲ್ಲಿನ ಪರಿಸರ ಸೂಕ್ಷö್ಮ ವಲಯಕ್ಕೆ ಒಳಪಟ್ಟ ಗ್ರಾಮಗಳಿಗೆ ಸಂಬAಧಿಸಿದAತೆ ಕಂದಾಯ, ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಸಿ, ಆ ಗ್ರಾಮಗಳನ್ನು ಪಟ್ಟಿಯಿಂದ ತೆಗೆಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಕೊಡಗನ್ನು ಒಳಗೊಂಡAತೆ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ೧೫೦೦ಕ್ಕೂ ಹೆಚ್ಚಿನ ಜನವಸತಿಯನ್ನು ಹೊಂದಿದ ಸೂಕ್ಷö್ಮ ಪರಿಸರ ವಲಯಕ್ಕೆ ಒಳಪಟ್ಟ ಗ್ರಾಮಗಳನ್ನು ಕೈ ಬಿಡುವ ಕುರಿತಾದ ಸಮಗ್ರ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಬೇಕೆಂದು ತಿಳಿಸಿದರು.

ಕಳೆೆದೊಂದು ದಿನದ ಅವಧಿಯಲ್ಲಿ ಏಕಾಏಕಿ ಸುರಿದ ಮಳೆಯನ್ನು ಗಮನಿಸಿದಾಗ ಕೊಡಗು ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಿರುವ ಅನುಮಾನಗಳು ಉಂಟಾಗುತ್ತಿರುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.

ಕೃತಕ ಮಳೆÉಯಿಂದ ರಾಸಾಯನಿಕಗಳು ಭೂಮಿಗೆ ಸೇರಿ ಅಲ್ಲಿನ ಸೂಕ್ಷö್ಮ ಜೀವಿಗಳಿಗೆ ತೊಂದರೆಯುAಟಾಗುವ ಸಾಧ್ಯತೆ ಇದೆ. ಈಗಾಗÀಲೇ ಜಿಲೆಯಲ್ಲಿ ಹೆಚ್ಚಿನ ಮಳೆÉಯಿಂದ ಕಾಫಿ ಕೃಷಿಯಲ್ಲಿ ಕೊಳೆರೋಗದ ಬಾಧೆ ಕಾಣಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಮೋಡಬಿತ್ತನೆ ಜಿಲ್ಲೆಗೆ ಬೇಡ. ಅಗತ್ಯ ಸರ್ವೇ ನಡೆಸಿ ಜಿಲ್ಲೆಯ ಬೆಳೆಗಾರರಿಗೆ ಕೃಷಿ ಹಾನಿಗೆ ಸಂಬAಧಿಸಿದAತೆ ಪರಿಹಾರ ಒದಗಿಸಬೇಕೆಂದರು.

ಜಿಲ್ಲಾ ವಕ್ತಾರ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಸೋಮವಾರ ನಡುರಾತ್ರಿ ವಿಮಾನ ಹಾದು ಹೋದ ಶಬ್ದ ಕೇಳಿ ಬಂದ ಬಳಿಕ, ಧಾರಾಕಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಿರಬಹುದೆನ್ನುವ ಸಂಶಯ ಉಂಟಾಗಿದೆಯೆAದು ತಿಳಿಸಿದರು. ಪಕ್ಷದ ಪ್ರಮುಖರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ, ಕಂದಾಯ ಮತ್ತು ಅರಣ್ಯ ಇಲಾಖಾ ಸರ್ವೇ ಕಾರ್ಯದ ಮೂಲಕ ಕೃಷಿ ಪ್ರದೇಶ ಮತ್ತು ಸ್ವಾಭಾವಿಕ ಅರಣ್ಯಗಳನ್ನು ಸ್ಪಷ್ಟವಾಗಿ ಗುರುತಿಸುವ ಕಾರ್ಯ ನಡೆಯಬೇಕಾಗಿದೆಯೆಂದು ತಿಳಿಸಿದರು

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಶಾಂತೆಯAಡ ರವಿ ಕುಶಾಲಪ್ಪ, ಬಿಜೆಪಿ ಮಂಡಲ ಅಧ್ಯಕ್ಷರಾದ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಕಾರೇರ ಸತೀಶ್ ಉಪಸ್ಥಿತರಿದ್ದರು.