ಕುಶಾಲನಗರ, ಆ. ೨೫: ಮುಖ್ಯಮಂತ್ರಿಗಳ ಕಾರ್ಯದರ್ಶಿ ಯಾಗಿ ನೇಮಕಗೊಂಡಿರುವ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ಎಸ್ ಎಸ್ ನಕುಲ್ ಅವರನ್ನು ಆರ್ಯ ವೈಶ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು. ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಕುಲ್ ಪೋಷಕರಾದ ಎಸ್ ಕೆ ಸತೀಶ್, ಶೋಭಾ ಸತೀಶ್, ಪತ್ನಿ ಪೂಜಿತ, ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರುಗಳಾದ ಸತ್ಯನಾರಾಯಣ ಬಿ ಎಲ್, ಉದಯ್ ಕುಮಾರ್ ಬಿ ಎಲ್, ಖಜಾಂಚಿ ಪ್ರಶಾಂತ್, ನಿರ್ದೇಶಕರುಗಳಾದ ಬಿ ಎಲ್ ಅಶೋಕ್, ಕೆ ಜೆ ಸತೀಶ್, ವೈಶಾಖ್ ಇದ್ದರು.