ವೀರಾಜಪೇಟೆ, ಆ. ೨೪: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಶಾಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಭಾರತ ಸರಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಕೇಂದ್ರ, ಕೊಡಗು ಘಟಕ ಮತ್ತು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಮಾದಕ ವ್ಯಸನ ಮಾಡುವುದನ್ನು ಸಮಾಜ, ಕುಟುಂಬವು ದೂರ ಮಾಡುತ್ತದೆ. ಒಮ್ಮೆ ಕಾನೂನಿನಡಿಯಲ್ಲಿ ಬಂಧಿತರಾದರೆ ಭವಿಷ್ಯವೇ ನಾಶಗೊಳ್ಳುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಎನ್.ಕೆ. ಶಾಂತಿ ಮಾತನಾಡಿ, ಆರೋಗ್ಯಯುತ ಹಾಗೂ ನೆಮ್ಮದಿಯ ಬದುಕಿಗಾಗಿ ವ್ಯಸನ ಮುಕ್ತರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ., ವಿದ್ಯಾರ್ಥಿಗಳು ಶಿಸ್ತು ನಿಯಮಗಳನ್ನು ಪಾಲಿಸುತ್ತಾ ಅಧ್ಯಯನಶೀಲರಾಗಬೇಕು ಎಂದರು.

ಸಾಂಸ್ಕöÈತಿಕ ಸಮಿತಿಯ ಸಂಚಾಲಕಿ ಪ್ರೊ. ನಿರ್ಮಲ ಹೆಚ್.ಪಿ., ಜಿಲ್ಲಾ ಯುವಜನ ಅಧಿಕಾರಿ ಟಿ. ಅಖಿಲ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಕೆ. ಬಸವರಾಜು ವೇದಿಕೆಯಲ್ಲಿದ್ದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ನಶಾಮುಕ್ತ ಯುವ ವಿಕಸಿತ ಭಾರತದ ಕಾರ್ಯಕ್ರಮಗಳಾದ ಸಮೂಹ ಗೀತೆ, ಸಮೂಹ ನೃತ್ಯ, ರೀಲ್ಸ್, ಕಿರುಚಿತ್ರ ರಚನೆ, ಕವನ ವಾಚನ, ಭಾಷಣ ಸ್ಪರ್ಧೆ, ಘೋಷಣ ವಾಕ್ಯ ಬರಹ, ಚಿತ್ರಕಲೆ ಸ್ಪರ್ಧೆಗಳ ಮೂಲಕ ಜನಜಾಗೃತಿ ಮೂಡಿಸಿದರು.

ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದ ಸಂತ ಅನ್ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಸ್ಥಾನ ಪಡೆದ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.