ಸಿದ್ದಾಪುರ, ಆ. ೨೪: ರಸ್ತೆಯ ಬದಿಯಲ್ಲಿ ಗೋಹತ್ಯೆ ಮಾಡಿ, ಅದರ ಮಾಂಸವನ್ನು ಕೊಂಡೊಯ್ದು ತ್ಯಾಜ್ಯ ಹಾಗೂ ರುಂಡವನ್ನು ಎಸೆದು ಹೋಗಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ರಸ್ತೆಯ ಮೇಕೂರು-ಹೊಸ್ಕೇರಿ ಗ್ರಾಮದ ಬಜೆಕೊಲ್ಲಿ ಸಮೀಪ ನಡೆದಿದೆ. ಸಿದ್ದಾಪುರ-ಪಾಲಿಬೆಟ್ಟ ಮುಖ್ಯರಸ್ತೆಯ ಬಜೆಕೊಲ್ಲಿ ಬಳಿ ಜಾನುವಾರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ, ಅದರ ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಉಳಿದ ಕಳೇಬರ ಹಾಗೂ ರುಂಡವನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಗಮನಕ್ಕೆ ಬಂದ ಬಳಿಕ ಬಜೆಕೊಲ್ಲಿ ಕಾಫಿ ತೋಟದ ವ್ಯವಸ್ಥಾಪಕ ಜಯ ಕುಮಾರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮಕೈಗೊಂಡಿದ್ದಾರೆ