ಸೋಮವಾರಪೇಟೆ, ಆ. ೨೪: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಈಚೆಗೆ ಶಾಲಾ ಸಭಾಂಗಣದಲ್ಲಿ ನೆರವೇರಿತು.

ಸಂಸ್ಥೆಯ ಪ್ರಾಂಶುಪಾಲೆ ಮಿಲ್ಡೆçಡ್ ಗೋನ್ಸಾಲ್‌ವೆಸ್ ಪ್ರಮಾಣ ವಚನ ಬೋಧಿಸಿದರು. ಶಾಲಾ ನಾಯಕರಾದ ಎಸ್.ವೈ.ನಮನ, ಎಚ್.ಪಿ.ಅಕುಲ್‌ಗೌಡ, ಕ್ರೀಡಾನಾಯಕರಾದ ಎನ್.ಆರ್.ಅದೃಷ್ಟ, ಎಚ್.ವಿ.ವಿಕ್ರಾಂತ್, ಶಿಸ್ತುಸಮಿತಿಯ ಡಿ.ಎಂ.ಚರಿತ, ಬಿ.ವಿ.ಕುಶಾಲ್, ಶಿಕ್ಷಣ ಸಮಿತಿಯ ಕೆ.ಡಿ. ರಿಶಾ, ಬಿ.ಎಸ್.ಅಂಶಿಕಾ, ಅರೋಗ್ಯ ಸಮಿತಿಯ ಕೆ.ಎನ್. ತ್ರಿಶಾಲ, ಸಿ.ಎಂ.ವಿಕ್ಕಿ, ಸಾಂಸ್ಕೃತಿಕ ಸಮಿತಿ ಕ್ಷಮ್ಯಾಗೌಡ, ಬ್ಯಾಂಡ್ ಲೀಡರ್‌ಗಳಾದ ವಿಭಾ ನಂದಕುಮಾರ್ ಮತ್ತು ಶ್ರದ್ಧಾ ಕೆ. ಸತೀಶ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.

ಇದೇ ಸಂದರ್ಭ ಸಂಸ್ಥೆಯ ಭಾತ್ಮೀದಾರರಾದ ಕೆ.ಎಂ.ಜಗದೀಶ್, ನಿರ್ದೇಶಕ ಕೆ.ಟಿ.ಪರಮೇಶ್, ಮಾಜಿ ಸೈನಿಕ ಚಂದ್ರಕುಮಾರ್ ಇದ್ದರು.