ಗೋಣಿಕೊಪ್ಪ ವರದಿ, ಆ. ೨೪ ; ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ ಡಿವಿಜನ್ ಹಾಕಿ ಲೀಗ್ ಟೂರ್ನಿಯಲ್ಲಿ ಚಾರ್ಮರ್ಸ್, ಮಹಾದೇವ, ಶಿವಾಜಿ ತಂಡಗಳು ಗೆಲುವು ಪಡೆದವು.
ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡವು ಇವೈಸಿ ಬೇಗೂರು ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಮಹಾದೇವ ಪರ ಅಪ್ಪಚ್ಚು, ಕಾರ್ತಿಕ್ ಕಾರ್ಯಪ್ಪ, ಬೇಗೂರು ಪರ ವಿಶಾಲ್ ಗೋಲು ದಾಖಲಿಸಿದರು.
ಬೊಟ್ಟಿಯತ್ನಾಡ್ ಕುಂದ ತಂಡವು ಕ್‌ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋ ತಂಡದ ವಿರುದ್ಧ ೪-೧ ಗೋಲುಗಳಿಂದ ಜಯಿಸಿತು. ಕುಂದ ಪರ ನಾಗೇಶ್ ೨, ಹುಮೈಜ್, ಭೀಮಯ್ಯ, ಎಲ್ಬೋ ಪರ ವಶಿಕ್ ಗೋಲು ಹೊಡೆದರು. ಮಡಿಕೇರಿ ಚಾರ್ಮರ್ಸ್ ತಂಡ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ೬-೨ ಗೋಲುಗಳಿಂದ ಜಯ ಸಾಧಿಸಿತು. ಚಾರ್ಮರ್ಸ್ ಪರ ಪ್ರಜ್ವಲ್ ೩, ನಿಶಾಲ್, ಯಶಸ್, ಅರ್ಜುನ್, ಕೂಡಿಗೆ ಪರ ಆಕಾಶ್ ೨ ಗೋಲು ಬಾರಿಸಿದರು.
ಅಮ್ಮತ್ತಿ ರಾಯಲ್ಸ್ ತಂಡ ಯುಎಸ್ಸಿ ಬೇರಳಿನಾಡ್ ವಿರುದ್ಧ ೨-೧ ಗೋಲುಗಳ ಗೆಲುವು ಪಡೆಯಿತು. ಅಮ್ಮತ್ತಿ ಆಟಗಾರ ಪ್ರತಿಕ್ ಪೂವಣ್ಣ, ವಿಪುಲ್, ಬೇರಳಿನಾಡ್ ಆಟಗಾರ ರಿಶಿ ಗೋಲು ದಾಖಲಿಸಿದರು.
ನಾಪೋಕ್ಲು ಶಿವಾಜಿ ತಂಡ ಎಎಸ್ಸಿ ಅಮ್ಮತ್ತಿ ವಿರುದ್ಧ ೫-೧ ಗೋಲುಗಳ ಗೆಲುವು ಪಡೆಯಿತು. ನಾಪೋಕ್ಲು ಪರ ನಾಚಪ್ಪ ೩, ಅವಿನಾಶ್, ಸುಬ್ಬಯ್ಯ, ಅಮ್ಮತ್ತಿ ಪರ ಕವನ್ ಗೋಲು ಬಾರಿಸಿದರು.
ಕೂರ್ಗ್ ಚಾಲೆಂಜರ್ಸ್ ತಂಡ ಕಡಿಯತ್ನಾಡ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಚಾಲೆಂಜರ್ಸ್ ಆಟಗಾರ ಬೋಪಣ್ಣ, ಮುದ್ದಪ್ಪ, ಕಡಿಯತ್ನಾಡ್ ಪರ ಸುಬ್ಬಯ್ಯ ಗೋಲು ಹೊಡೆದರು.