ವೀರಾಜಪೇಟೆ, ಆ. ೨೪: ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವರ್ಷಂಪ್ರತಿ ನೀಡುವ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಸಮಾಜದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ತಿಳಿಸಿದ್ದಾರೆ.

೭ನೇ ತರಗತಿ ಮೇಲ್ಪಟ್ಟ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ವ್ಯಾಸಂಗ ದೃಢಿಕರಣ ಪತ್ರ ಅಥವಾ ಶಾಲಾ ಶುಲ್ಕ ಪಾವತಿಸಿದ ನಕಲು ಪ್ರತಿಯೊಂದಿಗೆ ಸಂಘದ ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ತಾ. ೨೬ರ ಒಳಗಾಗಿ ಸಂಘದ ಪ್ರತಿನಿಧಿಗಳಿಗೆ ಅಥವಾ ಅಧ್ಯಕ್ಷರು ಉಮೇಶ್ ಕೇಚಮಯ್ಯ, ೯೪೮೦೪೨೫೭೭೩ ಕಾರ್ಯದರ್ಶಿ ಅಮ್ಮತ್ತಿರ ವಾಸು ವರ್ಮಾ ೯೪೮೦೧೧೬೬೯೯ ಇವರಿಗೆ ತಲುಪಿಸಬಹುದಾಗಿದೆ ಎಂದು ತಿಳಿಸಿದರು.