ಮಡಿಕೇರಿ, ಆ. ೨೪: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ ರ ಪರಿಷ್ಕೃತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಬಿಡುಗಡೆ ಮಾಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜತೆ ನಡೆದ ಸಭೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಅವರು, ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೫೬೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೪,೦೫,೮೦೩ ಮತದಾರರು ಇದ್ದು, ಇವರಲ್ಲಿ ೧,೯೮,೨೯೪ ಪುರುಷರು ಮತ್ತು ೨,೦೭,೫೦೫ ಮಹಿಳಾ ಮತದಾರರು ಜೊತೆಗೆ ೪ ಇತರ ಮತದಾರರನ್ನು ಒಳಗೊಂಡಿದೆ ಎಂದರು.

ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೦೯,೧೧೫ ಮತದಾರರು ಇದ್ದು, ೧,೦೧,೩೧೬ ಪುರುಷ ಮತದಾರರು ಮತ್ತು ೧,೦೭,೭೯೭ ಮಹಿಳಾ ಮತದಾರರು ಇತರರು ಇಬ್ಬರು ಮತದಾರರನ್ನು ಒಳಗೊಂಡಿದ್ದು, ೨೮೫ ಮತಗಟ್ಟೆಗಳನ್ನು ಹೊಂದಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಂತೆ ೧,೯೬,೬೮೮ ಮತದಾರರು ಇದ್ದು, ೯೬,೯೭೮ ಪುರುಷರು ಮತ್ತು ೯೯,೭೦೮ ಮಹಿಳಾ ಮತದಾರರು ಮತ್ತು ಇಬ್ಬರು ಇತರ ಮತದಾರರನ್ನು ಒಳಗೊಂಡಿದೆ. ಹಾಗೆಯೇ ೨೮೨ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾ. ೦೧-೧೦-೨೦೨೬ ರ ಅರ್ಹತಾ ದಿನಾಂಕ ಆಗಿದ್ದು, ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನದಿಂದ (ಆ. ೨೪ ರಿಂದ ಸೆಪ್ಟೆಂಬರ್ ೨೩ ರವರೆಗೆ) ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಹಾಗೂ ತಿದ್ದುಪಡಿ, ವರ್ಗಾವಣೆ, ಎಪಿಕ್ ಕಾರ್ಡ್ ಬದಲಾವಣೆ ಮತ್ತು ಪಿಡಬ್ಲುö್ಯಡಿ ಗುರುತು ಮಾಡಲು ನಿಗದಿತ ನಮೂನೆ ಸಲ್ಲಿಸಬಹುದಾಗಿದೆ ಎಂದರು.

ಅಕ್ಟೋಬರ್ ೨೨ ರವರೆಗೆ ಸೂಚನೆಯ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅವಕಾಶವಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು.

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಮತದಾರರಿಂದ ಗಣತಿ ನಮೂನೆಯನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡಿ ಕರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರ ಪೈಕಿ ಜಿಲ್ಲೆಯಲ್ಲಿ ೫೮,೮೯೩ ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನೋಟೀಸ್ ನೀಡಿ ವಿಚಾರಣೆ ನಡೆಸಿ ಬಿಎಲ್‌ಒಗಳಿಂದ ವರದಿ ಪಡೆದು, ಅಂತಿಮ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಲಾಗಿದೆ ಎಂದು ಹೇಳಿದರು.

ಎಸ್‌ಐಆರ್ ಸಂದರ್ಭದಲ್ಲಿ ಮ್ಯಾಪಿಂಗ್ ಆಗದಿರುವುದು, ಹಾಗೆಯೇ ಮ್ಯಾಪಿಂಗ್‌ನಲ್ಲಿ ವ್ಯತ್ಯಾಸಗಳಾಗಿರುವುದು ಕಂಡುಬAದಿದೆ. ಅನೊಮಲೀಸ್ (ಂಟಿomಚಿಟies) ಮತದಾರರಿಗೆ ಸಂಬAಧಿಸಿದAತೆ ಭಾರತದ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಜೊತೆಗೆ ಎರಡು ದಾಖಲೆ ಸಲ್ಲಿಸಬೇಕಿದೆ. ಮ್ಯಾಪಿಂಗ್ ಆಗದಿರುವ ಮತದಾರರಿಗೆ ಭಾರತ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲೆಗಳ ಪೈಕಿ ಎರಡು ದಾಖಲಾತಿ ಸಲ್ಲಿಸಬೇಕಿದೆ.

ಹಾಗೆಯೇ ಮ್ಯಾಪಿಂಗ್ ಆಗದಿರುವ ಮತದಾರರು ಸಲ್ಲಿಸಿರುವ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಈ ಕಾರ್ಯಕ್ಕಾಗಿ ೫೮,೮೯೩ ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ಮಾಡಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ೭೩ ಹೆಚ್ಚುವರಿ ಸಹಾಯಕ ಮತದಾರರ ನೋಂದಾಣಾಧಿಕಾರಿ ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಸಜಿಲ್‌ಕೃಷ್ಣ, ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದ್ದು, ಬಿಎಲ್‌ಓಗಳು ಸಹ ಶ್ರಮವಹಿಸಿದ್ದಾರೆ ಎಂದು ಹೇಳಿದರು.

ಬಹುಜನ ಸಮಾಜ ಪಕ್ಷದ ದಿವಿಲ್ ಕುಮಾರ್ ಮಾತನಾಡಿ, ಹಾಡಿಗಳಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲದಿರುವ ಕುಟುಂಬಗಳು ಇದ್ದು, ಮತ್ತೊಮ್ಮೆ ಆಧಾರ್ ಕಾರ್ಡ್ ಮಾಡುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಮತ್ತೊಮ್ಮೆ ತಾಲೂಕು ಮಟ್ಟದಲ್ಲಿ ಆಧಾರ್ ಕಾರ್ಡ್ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಶಿಬಿರ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಆಮ್ ಆದ್ಮಿ ಪಕ್ಷದ ಎ.ಕೆ. ಅಪ್ಪಯ್ಯ, ಬೋಜಣ್ಣ, ಪೃಥ್ವಿ ಅವರು ಎಸ್‌ಐಆರ್ ಸಂಬAಧಿಸಿದAತೆ ಹಲವು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಪರಿಷ್ಕೃತ ವೇಳಾಪಟ್ಟಿಯಂತೆ ತಾ. ೨೪ ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ತಾ. ೨೪ ರಿಂದ ಸೆಪ್ಟೆಂಬರ್ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯಾಗಿದೆ. ತಾ. ೨೪ ರಿಂದ ಅಕ್ಟೋಬರ್ ೨೨ ರವರೆಗೆ ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ೨೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ ೨೦೮-ಮಡಿಕೇರಿ ಮತ್ತು ೨೦೯-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬAಧ ಮೊದಲ ಹಂತವಾಗಿ ೨೦೨೬ ರ ಜೂನ್ ೩೦ ರಿಂದ ಆಗಸ್ಟ್ ೧೭ ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಿ, ನಂತರ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಂಗ್ರಹಣೆ ಮಾಡಿ, ಬಿಎಲ್‌ಓ ಆಪ್‌ನಲ್ಲಿ ಡಿಜಿಟಲೀಕರಣ ಮಾಡಲಾಗಿದೆ.

೨೦೨೬ ರ ಜೂನ್ ೧೬ ರಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ೪,೬೮,೬೫೭ ಮತದಾರರು ಇದ್ದು, ಈ ಪೈಕಿ ೪೦೫೮೦೩-(ಶೇ. ೮೬.೫೯) ಮತದಾರರಿಂದ ಗಣತಿ ನಮೂನೆ ಸಂಗ್ರಹಿಸಿ ಡಿಜಿಟಲೀಕರಣ ಮಾಡಲಾಗಿದೆ.

ಅಲ್ಲದೇ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ಸಮಯದಲ್ಲಿ ಮೃತಪಟ್ಟ ಮತದಾರರ ಸಂಖ್ಯೆ ೧೩೭೩೧, ಶಾಶ್ವತವಾಗಿ ಸ್ಥಳಾಂತರಗೊAಡ ಮತದಾರರ ಸಂಖ್ಯೆ ೩೩೩೮೧, ಎರಡು ಕಡೆ ಹೆಸರು ಹೊಂದಿರುವ ಮತದಾರರ ಸಂಖ್ಯೆ ೬೦೪೬, ಗೈರು ಮತದಾರರ ಸಂಖ್ಯೆ ೯೫೮೦ ಹಾಗೂ ಇತರ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ ೧೧೬ ಆಗಿದ್ದು ಒಟ್ಟು ೬೨,೮೫೪ ಗಣತಿ ನಮೂನೆಗಳನ್ನು ಸಲ್ಲಿಸದೇ ಇರುವ ಮತದಾರರನ್ನು ಗುರುತು ಮಾಡಲಾಗಿದೆ.

ಕೊಡಗು ಜಿಲ್ಲೆಯ ೨೦೮-ಮಡಿಕೇರಿ ಮತ್ತು ೨೦೯-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದAತೆ ಮತಗಟ್ಟೆವಾರು ಅಂತಿಮ ಎಎಸ್‌ಡಿಡಿಒ ಪಟ್ಟಿ (ಗೈರು, ಸ್ಥಳಾಂತರ, ಮರಣ, ಡೂಪ್ಲೀಕೇಟ್ ಮತ್ತು ಇತರ ಪ್ರತಿಯನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್ hಣಣಠಿs://ಞoಜಚಿgu.ಟಿiಛಿ.iಟಿ/ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಪರಿಶೀಲನೆಗೆ ಕೋರಿಕೆ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ ೨೦೮-ಮಡಿಕೇರಿ ಮತ್ತು ೨೦೯-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ತಾ. ೨೪ ರಂದು ಎಲ್ಲಾ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ, ಕಂದಾಯಾಧಿಕಾರಿಗಳ ಕಚೇರಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ, ತಾಲೂಕು ಕಚೇರಿಗಳಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ, ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದಾಗಿದೆ.

ಕರಡು ಮತದಾರರ ಪಟ್ಟಿಯನ್ನು hಣಣಠಿs://ಛಿeo.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು hಣಣಠಿs://ಞoಜಚಿgu.ಟಿiಛಿ.iಟಿ ತಿebsiಣe ನಲ್ಲಿಯೂ ಸಹ ಅಪ್‌ಲೋಡ್ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ನಮೂನೆಗಳು

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು-ನಮೂನೆ-೬, ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-೬ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು / ಕೈಬಿಡಲು- ನಮೂನೆ-೭, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಥವಾ ಕ್ಷೇತ್ರದ ಹೊರಗೆ ನಿವಾಸವನ್ನು ಸ್ಥಳಾಂತರಿಸಲು, ನಮೂದುಗಳನ್ನು ಸರಿಪಡಿಸಲು, ಮತದಾನ ಗುರುತಿನ ಚೀಟಿ (ಎಪಿಕ್)ಯನ್ನು ಬದಲಾಯಿಸಲು ಮತ್ತು ವಿಶೇಷ ಚೇತನ ವ್ಯಕ್ತಿಗಳನ್ನು (ಪಿಡಬ್ಲ್ಯೂ ಡಿ) ಗುರುತು ಮಾಡಲು - ನಮೂನೆ-೮ ಆಗಿರುತ್ತದೆ. ನಮೂನೆ-೬ ಮತ್ತು ೮ನ್ನು ಸಲ್ಲಿಸುವಾಗ ಘೋಷಣೆ ಪತ್ರವನ್ನು ಸಲ್ಲಿಸಬೇಕಿದೆ.

ನಮೂನೆ-೬, ೬ಎ, ೭ ಮತ್ತು ೮ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ದಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ (ವೋಟರ್ ಹೆಲ್ಪ್ಲೈನ್ ಆಪ್) ಹಾಗೂ hಣಣಠಿs://voಣeಡಿs.eಛಿi.gov.iಟಿ/ / ಗಿಔಖಿಇಖS’ SಇಖಗಿIಅಇ Pಔಖಖಿಂಐ ಮೂಲಕ ಅನ್‌ಲೈನ್‌ನಲ್ಲಿ ನೇರವಾಗಿ ಸಲ್ಲಿಸಬಹುದು ಎಂದು ತಿಳಿಸಿದರು.

ಈಗಾಗಲೇ ನಮೂನೆ ೮ ರಲ್ಲಿ ಸಾವಿರಕ್ಕೂ ಅಧಿಕ ಹಾಗೂ ನಮೂನೆ ೭ ರಲ್ಲಿ ೨೪೬೩ ರಷ್ಟು ಅರ್ಜಿಗಳು ಬಂದಿವೆ. ಇವುಗಳನ್ನು ಮುಂದಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದೆಂದು ಜಿಲ್ಲಾಧಿಕಾರಿ ಹೇಳಿದರು.

ಮನೆ ಮನೆ ಭೇಟಿ ಸಮಯದಲ್ಲಿ ಮತದಾರರಿಂದ ಗಣತಿ ನಮೂನೆ ಸಂಗ್ರಹಿಸಿ, ಡಿಜಿಟಲೀಕರಣ ಮಾಡಿ ಕರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರ ಪೈಕಿ ಈ ವರ್ಗಗಳ ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ನೋಟೀಸ್ ನೀಡಿ ವಿಚಾರಣೆ ನಡೆಸಿ, ಬಿಎಲ್‌ಓಗಳಿಂದ ವರದಿ ಪಡೆದು ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮತದಾರರಿಗೆ ನೋಟೀಸ್

ಓo ಒಚಿಠಿಠಿiಟಿg (ಕಳೆದ ೨೦೦೨ SIಖ ನಲ್ಲಿ ಇಲ್ಲದ ಮತ್ತು ಅವರು ಕೊನೆ ಎಸ್‌ಐಆರ್‌ನಲ್ಲಿ ಸಂತತಿ ಇಲ್ಲದ) ಆisಛಿಡಿeಠಿಚಿಟಿಛಿies iಟಿ ಒಚಿಠಿಠಿiಟಿg (ಮ್ಯಾಪಿಂಗ್‌ನಲ್ಲಿ ವ್ಯತ್ಯಾಸಗಳು) ಅಡಿ ಒಟ್ಟು ಜಿಲ್ಲೆಯ ಮತದಾರರಿಗೆ ನೋಟೀಸ್ ನೀಡಲಾಗುವುದು.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೯೨೫೨ ಅನೊಮಲೀಸ್, ಮ್ಯಾಪಿಂಗ್ ಇಲ್ಲದಿರುವುದು ೯೫೩೩, ಒಟ್ಟು ೧೮೭೮೫, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೬೫೫೮ ಅನೊಮಲೀಸ್, ಮ್ಯಾಪಿಂಗ್ ಇಲ್ಲದಿರುವುದು ೧೩,೫೫೦ ಒಟ್ಟು ೪೦೧೦೮. ಒಟ್ಟು ಅನೊಮಲೀಸ್ ೩೫,೮೧೦ ಮತ್ತು ಮ್ಯಾಪಿಂಗ್ ಇಲ್ಲದಿರುವುದು ೨೩೦೮೩ ಸೇರಿದಂತೆ ೫೮೮೯೩ ಮಂದಿಗೆ ನೋಟೀಸ್ ನೀಡಲಾಗುವುದೆಂದರು.

ಂಟಿomಚಿಟies (ಅನೊಮಲೀಸ್) ಮತದಾರರಿಗೆ ಸಂಬAಧಿಸಿದAತೆ, ಭಾರತ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಜೊತೆಗೆ ಎರಡು ದಾಖಲೆಗಳನ್ನು ಸಲ್ಲಿಸುವುದು.

ಓo ಒಚಿಠಿಠಿiಟಿg ಮತದಾರರಿಗೆ ಸಂಬAಧಿಸಿದAತೆ, ಭಾರತ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲಿಗಳ ಪೈಕಿ ಆಧಾರ್ ಕಾರ್ಡ್ ಜೊತೆಗೆ ಎರಡು ದಾಖಲೆಗಳನ್ನು ಸಲ್ಲಿಸುವುದು. ಮ್ಯಾಪಿಂಗ್ ಇಲ್ಲದಿರುವ ಮತದಾರರು ಸಲ್ಲಿಸುವ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಒಟ್ಟು ೫೮೮೯೩ ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ಮಾಡಿ ನಿಗದಿತ ಅವದಿಯೊಳಗೆ ಪೂರ್ಣಗೊಳಿಸಲು ಒಟ್ಟು ೭೩ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಲ್ಲಿಸಬೇಕಾದ ದಾಖಲೆಗಳು

ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ/ ಸಾರ್ವಜನಿಕ ವಲಯ ಉದ್ಯಮದ ಖಾಯಂ ಉದ್ಯೋಗಿ/ ಪಿಂಚಣಿದಾರರಿಗೆ ನೀಡಿರುವ ಯಾವುದೇ ಗುರುತಿನ ಚೀಟಿ/ ಪಿಂಚಣಿ ಸಂದಾಯ ಆದೇಶ.

ಭಾರತದಲ್ಲಿ ೦೧.೦೭.೧೯೮೭ ಕ್ಕೂ ಮುಂಚೆ ಸರ್ಕಾರ/ ಸ್ಥಳೀಯ ಪ್ರಾಧಿಕಾರಗಳು/ ಬ್ಯಾಂಕುಗಳು/ ಅಂಚೆ ಕಚೇರಿ/ ಜೀವ ವಿಮಾ ನಿಗಮ/ ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು. ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣಪತ್ರ. ಪಾಸ್ಪೋರ್ಟ್. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯೂಲೇಷನ್/ ಶೈಕ್ಷಣಿಕ ಪ್ರಮಾಣಪತ್ರ., ರಾಜ್ಯದ ಸಕ್ಷಮ ಪ್ರಾಧಿಕಾರವು ನೀಡಿರುವ ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ., ಸಕ್ಷಮ ಪ್ರಾಧಿಕಾರವು ನೀಡಿರುವ ಒಬಿಸಿ/ ಪ.ಜಾ/ಪ.ಪಂ ಅಥವಾ ಯಾವುದೇ ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್ (ಅದು ಎಲ್ಲಾದರೂ ಅಸ್ತಿತ್ವದಲ್ಲಿರಲಿ) ರಾಜ್ಯ/ ಸ್ಥಳೀಯ ಪ್ರಾಧಿಕಾರಗಳು ಸಿದ್ದಪಡಿಸಿದ ಕುಟುಂಬ ರಿಜಿಸ್ಟರ್. ಸರ್ಕಾರವು ನೀಡಿದ ಯಾವುದೇ ಜಮೀನು/ ಮನೆ ಹಂಚಿಕೆ ಪ್ರಮಾಣಪತ್ರ.

ಆಧಾರ್‌ಗೆ ಸಂಬAಧಿಸಿದAತೆ, ಆಯೋಗವು ದಿನಾಂಕ ೦೯.೦೯.೨೦೨೫ರ ಪತ್ರ ಸಂಖ್ಯೆ ೨೩/೨೦೨೫-ಇಆರ್‌ಎಸ್ /ಸಂಪುಟ II ರಲ್ಲಿ ಹೊರಡಿಸಲಾದ ನಿರ್ದೇಶನಗಳು ಅನ್ವಯಿಸುತ್ತವೆ (ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿದೆ ಸ್ವೀಕರಿಸಲಾಗುವುದು. ಆಧಾರ್ ಕಾರ್ಡ್ ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪುರಾವೆಯಾಗಿರುವುದಿಲ್ಲ) ಎಂದು ಹೇಳಿದರು.

ಮತಗಟ್ಟೆ ಹೆಚ್ಚಳ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ೧೨೦೦ ಕ್ಕಿಂತ ಹೆಚ್ಚು ಮತದಾರರು ಇದ್ದ ಕೊಡಗು ಜಿಲ್ಲೆಯ ೨೦೮-ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ೧೫ ಮತಗಟ್ಟೆಗಳನ್ನು ವಿಭಜನೆ/ ಪುನರ್ ವಿಂಗಡಣೆ ಮಾಡಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಮತ್ತು ಮತಗಟ್ಟೆಗಳ ಬದಲಾವಣೆ ಬಗ್ಗೆ ಭಾರತ ಚುನಾವಣಾ ಆಯೋಗಕ್ಕೆ ಅನುಮೋದನೆ ಕೋರಿ ಪ್ರಸ್ಥಾವನೆಯನ್ನು ಸಲ್ಲಿಸಲಾಗಿತ್ತು. ಭಾರತ ಚುನಾವಣಾ ಆಯೋಗವು ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. ಪ್ರಸ್ತುತ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ಪಟ್ಟಿಯನ್ನು hಣಣಠಿs://ಞoಜಚಿgu.ಟಿiಛಿ.iಟಿ ತಿebsiಣe ನಲ್ಲಿ ಪ್ರಕಟಿಸಲಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಮತಗಟ್ಟೆಗಳ ಸಂಖ್ಯೆ ೨೭೫ ವಿಭಜನೆ/ಪುನರ್ ವಿಂಗಡಣೆ ಮಾಡಿ ೧೦ ಮತಗಟ್ಟೆ ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತ ೨೮೫ ಮತಗಟ್ಟೆಗಳಿವೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ೨೭೭ ಮತಗಟ್ಟೆಗಳಿದ್ದು, ವಿಭಜನೆ/ಪುನರ್ ವಿಂಗಡಣೆ ಮಾಡಿ ಮತಗಟ್ಟೆ ಹೆಚ್ಚಳ ಮಾಡಲಾಗಿದ್ದು, ಇದೀಗ ೨೮೨ ಮತಗಟ್ಟೆಗಳಿವೆ. ಒಟ್ಟು ಪ್ರಸ್ತುತ ೫೬೭ ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಮಂಜುನಾಥ, ರಾಮಣ್ಣ ಇದ್ದರು.