ದಿನಾಂಕ ೧೮.೦೮.೨೦೨೬ನೇ ಮಂಗಳವಾರ ದಿನ ಸ್ವರ್ಗವಾಸಿಯಾದ ಸಣ್ಣುವಂಡ ಶಂಕರ್ (ಕನಕ) ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಆಗಮಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿದ ನೆರೆಕರೆಯವರಿಗೂ, ಊರಿನವರಿಗೂ, ಬಂಧು ಮಿತ್ರಾದಿಗಳಿಗೂ, ಕುಟುಂಬಸ್ಥರಿಗೂ, ದೂರವಾಣಿ ಮೂಲಕ ಸಾಂತ್ವಾನ ಹೇಳಿದ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ: ೨೬.೦೮.೨೦೨೬ನೇ ಬುಧವಾರ ಪೂರ್ವಾಹ್ನ ೧೧:೦೦ ಗಂಟೆಗೆ ಅರುವತ್ತೊಕ್ಲು ಗ್ರಾಮದ ಭರಣಿ ಹಾಲ್‌ನಲ್ಲಿ ನಡೆಸಲು ನಿಶ್ಚಯಿಸಿದ್ದು, ಆಹ್ವಾನ ಪತ್ರ ತಲುಪದೇ ಇರುವವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಕೋರಬೇಕಾಗಿ ಬಯಸುವ,
ದುಃಖತಪ್ತ: ಪತ್ನಿ ಸಣ್ಣುವಂಡ ಬೀನ ಶಂಕರ್ ಹಾಗೂ ಕುಟುಂಬಸ್ಥರು. ಅತ್ತೂರು ಗದ್ದೆಮನೆ