ಮಡಿಕೇರಿ, ಆ. ೨೨: ವೀರಾಜಪೇಟೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ, ಆದರ್ಶ ಸೇವಾ ಪ್ರಶಸ್ತಿ ನೀಡಿ ಗೌರವಿಸ ಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ದೇವರಾಜ್ ಬಿ.ಟಿ. ಸಂಘಟನಾ ಕ್ಷೇತ್ರ, ಮನ ಕೆ.ಆರ್. ಸಾಹಿತ್ಯ ಕ್ಷೇತ್ರ, ಎಂ. ಸಾದಿಕ್ ಅಹಮ್ಮದ್ ಸಮಾಜ ಸೇವಾ ಕ್ಷೇತ್ರ, ಪೂಜಾ ರವೀಂದ್ರ ಸಮಾಜ ಸೇವಾ ಕ್ಷೇತ್ರ, ಕುಂಜ್ಞAಡ ಮಹೇಶ್ ಅಪ್ಪಯ್ಯ ಸಮಾಜಸೇವಾ ಕ್ಷೇತ್ರ, ಮೀನಾಕ್ಷಿ ಕಲಾಕ್ಷೇತ್ರ, ಪ್ರೇಮಾಂಜಲಿ ಆಚಾರ್ಯ ಎಸ್. ಕಲಾ ಕ್ಷೇತ್ರ, ಕೆ.ಆರ್. ವಿಶಾಲಾಕ್ಷಮ್ಮ ಶಿಕ್ಷಣ ಕ್ಷೇತ್ರ, ಶಶಿ ಅಚ್ಚಪ್ಪ ಮಾಧ್ಯಮ ಕ್ಷೇತ್ರ, ಶಾಂತಿಭೂಷಣ್ ಮಾಧ್ಯಮ ಕ್ಷೇತ್ರ, ಟಿ.ವಿ. ಭಾಗ್ಯವತಿ ಅಣ್ಣಪ್ಪ ಶಿಕ್ಷಣ ಕ್ಷೇತ್ರ ಇವರುಗಳಿಗೆ ರಾಜ್ಯ ಸಂಘದ ಮಹಾಪೋಷಕ ಮಲ್ಲಿಕಾರ್ಜುನ ತೊದಲಬಾಗಿ, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಅವರು ಗಳು ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ಬಿ.ಎನ್. ರಘುನಾಥ್, ಎಲ್.ಐ. ಲಕ್ಕಮ್ಮನವರ್, ಪರ್ವೀನ್ ಬಾನು, ಕಮಲಮ್ಮ ಹಾಗೂ ಕೊಡಗು ಜಿಲ್ಲಾ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತ ರಿದ್ದರು.