ಗೋಣಿಕೊಪ್ಪಲು, ಆ. ೨೨: ಗೋಣಿಕೊಪ್ಪ ಬೈಪಾಸ್‌ನಲ್ಲಿ ರೂ. ೧ ಕೋಟಿ ೩೬ ಲಕ್ಷದ ವೆಚ್ಚದಲ್ಲಿ ಸಂಘಕ್ಕೆ ಸ್ವಂತ ನಿವೇಶನ ಖರೀದಿಸಲು ಈಗಾಗಲೇ ಸಂಬAಧಿಸಿದ ನಿವೇಶನ ಮಾಲೀಕರಿಗೆ ಹಣವನ್ನು ಸಂದಾಯ ಮಾಡಲಾಗಿದೆ. ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ನಿವೇಶನದಲ್ಲಿ ನೂತನ ಕಟ್ಟಡ ಕಟ್ಟಲು ಮಹಾಸಭೆಯು ಅನುಮತಿ ನೀಡುವಂತೆ ಸಂಘದ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಮಹಾಸಭೆಯಲ್ಲಿ ತಮ್ಮ ವರದಿಯನ್ನು ಮಂಡಿಸಿದರು. ನೂತನ ಕಟ್ಟಡ ನಿರ್ಮಾಣಕ್ಕೆ ಮಹಾಸಭೆಯು ಸರ್ವಾನುಮತದ ಒಪ್ಪಿಗೆ ಸೂಚಿಸಿತು.
ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಉಮಾಮಹೇಶ್ವರಿ ದೇವಾಲಯ ಆವರಣದ ಸಭಾಂಗಣದಲ್ಲಿ ಜರುಗಿತು. ಮಹಾಸಭೆಯಲ್ಲಿ ಸಂಘದ ಪ್ರಗತಿಯ ಬಗ್ಗೆ ಸದಸ್ಯರು ಹಲವು ಸಲಹೆಗಳನ್ನು ನೀಡಿದರು.
ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು ಸಂಘದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ೧೦ ಕೋಟಿ ೭೪ ಲಕ್ಷ ರೂಪಾಯಿಗಳನ್ನು ಸಾಲವಾಗಿ ವಿತರಿಸಲಾಗಿದೆ. ಸಾಲ ಮರು ಪಾವತಿಯು ನಿಗದಿತ ಸಮಯದಲ್ಲಿ ನಡೆಯುತ್ತಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ೨ ಶಾಖೆಯಲ್ಲಿ ೧೭ ಪಿಗ್ಮಿ ಸಂಗ್ರಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸAಘದ ವತಿಯಿಂದ ೨ ಕೋಟಿ ೬೧ ಲಕ್ಷ ಆಭರಣ ಸಾಲವನ್ನು ನೀಡಲಾಗಿದೆ. ವಿವಿಧ ಸಂಘಗಳಲ್ಲಿ ಬ್ಯಾಂಕಿನ ಭದ್ರತಾ ನಿರಖು ಠೇವಣಿಗಳನ್ನು ಇಡಲಾಗಿದೆ. ಸಂಘವು ಪ್ರಗತಿಯಲ್ಲಿ ಸಾಗಿದೆ.ಸಂಘದಲ್ಲಿ ದುರುಪಯೋಗ ಪಡಿಸಿಕೊಂಡ ಸಿಬ್ಬಂದಿಗಳಿAದ ಸಂಘಕ್ಕೆ ಬರಬೇಕಾದ ಹಣವನ್ನು ಭರಿಸಲಾಗಿದೆ ಎಂದು ಮಹಾಸಭೆಯಲ್ಲಿ ವಿವರ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಎನ್.ಕೆ.ದೇವಯ್ಯ, ಸಿ.ಡಿ.ಸುಬ್ಬಯ್ಯ, ಕುಲ್ಲೇಟೀರ ಪ್ರವಿ ಮೊಣ್ಣಪ್ಪ, ಎ.ಜೆ. ಬಾಬು, ಹೆಚ್.ಎನ್. ಮುರುಗನ್, ಗಿರೀಶ್ ಗಣಪತಿ, ಸಿ.ಡಿ.ಮಾದಪ್ಪ, ಹಾಗೂ ಕೆ.ಬಿ.ಪ್ರತಾಪ್, ಹೆಚ್.ವಿ.ಜಗದೀಶ್ (ಮಧು) ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ಕಾರ್ತಿಕ್ ವರದಿ ಮಂಡಿಸಿದರು. ನಿರ್ದೇಶಕಿ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಡೆಮಾಡ ಸುನೀಲ್ ಮಾದಪ್ಪ ವಂದಿಸಿದರು. ಸಭೆಯ ಆರಂಭದಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚನೆ ಮಾಡಲಾಯಿತು.
-ಹೆಚ್.ಕೆ. ಜಗದೀಶ್