ವೀರಾಜಪೇಟೆ: ನಗರದ ದಖ್ಖನಿ ಮೊಹಲ್ಲಾದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ಈ ಬಾರಿ ತನ್ನ ೩೯ನೇ ವರ್ಷದ ಗೌರಿ ಗಣೇಶ ಉತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲು ಸರ್ವ ಸಿದ್ಧತೆ ನಡೆಸಿದೆ.

೧೯೮೯ರಲ್ಲಿ ಮೊದಲ ಬಾರಿಗೆ ಯುವಕರ ತಂಡ, ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಈ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಜೀರ್ ಅಹಮದ್ ಅಧ್ಯಕ್ಷತೆಯಲ್ಲಿ ಆರಂಭವಾದ ಈ ಸಮಿತಿಗೆ ಬಿ.ಪಿ. ಸೋಮಣ್ಣ, ಎಂ.ಕೆ. ರವಿಕುಮಾರ್, ಟಿ.ಜೆ. ಶಂಕರ, ಡಿ.ಜಿ. ಕೇಶವ, ಟಿ.ಪಿ. ಷಣ್ಮುಖ ಹಾಗೂ ಟಿ.ಡಿ. ಹರೀಶ ಪ್ರಥಮ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಬಳಿಕ ೧೯೯೨ರಲ್ಲಿ ಟಿ.ಡಿ. ಹರೀಶ, ೧೯೯೫-೧೯೯೯ ರವರೆಗೆ ಟಿ.ಜೆ. ಶಂಕರ ಅಧ್ಯಕ್ಷರಾಗಿ ಸಮಿತಿಯನ್ನು ಮುನ್ನಡೆಸಿದರು. ನಂತರ ಎಂ.ಕೆ. ರವಿಕುಮಾರ್ ಅವರು ಸುದೀರ್ಘ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಉತ್ಸವಕ್ಕೆ ಹೊಸ ಮೆರಗು ನೀಡಿದರು. ಇವರ ಅವಧಿ ಯಲ್ಲಿ ಭಕ್ತಾದಿಗಳು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಅನ್ನ ಸಂತರ್ಪಣೆ, ವಿವಿಧ ಫಿಲಂ ಸ್ಟುಡಿಯೋಗಳ ಮಾದರಿಯ ಒಳ ಅಲಂಕಾರ ಕಾರ್ಯಗಳು ಪ್ರಾರಂಭಗೊAಡವು.

ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಟಿ.ಡಿ. ಲೋಕೇಶ್ ಅವರ ಸಾಂಸ್ಕöÈತಿಕ ಹಾಗೂ ಕಲಾತ್ಮಕ ವಿನ್ಯಾಸದಲ್ಲಿ ಭಂಗAಡೇಶ್ವರ ದೇವಾಲಯ ಮತ್ತು ಗಡಿಯಾರ ಕಂಬದ ಗೋಪುರದ ಮಾದರಿಯನ್ನು ನಿರ್ಮಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರದ ದಿನಗಳಲ್ಲಿ ಟಿ.ಜೆ. ಕೇಶವ ಹಾಗೂ ಎಂ.ಕೆ. ಗಣೇಶ ಅಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ವಿಜಯ ವಿನಾಯಕ ಉತ್ಸವ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹೊರರಾಜ್ಯದ ವಿವಿಧ ಆಕರ್ಷಕ ಸ್ತಬ್ಧಚಿತ್ರಗಳು, ಸಂಗೀತ ಕಾರ್ಯಕ್ರಮ, ಕ್ಯಾಲಿಕಟ್‌ನ ವಾದ್ಯಮೇಳ ಹಾಗೂ ಪೂಕೋಡ್ ಬ್ಯಾಂಡ್ ಸೆಟ್‌ಗಳು ಮೆರವಣಿಗೆಗೆ ವಿಶೇಷ ಕಳೆ ತರುತ್ತವೆ. ಇದರೊಂದಿಗೆ ದೇಶದಲ್ಲಿ ನಡೆದ ಪ್ರಮುಖ ಹಾಗೂ ಅದ್ಭುತ ಘಟನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಜಾಗೃತಿ ಫಲಕಗಳನ್ನು ಅಳವಡಿಸುವುದು ಈ ಸಮಿತಿಯ ವಿಶೇಷತೆಯಾಗಿದೆ. ಪ್ರಸ್ತುತ ಎಂ.ಕೆ. ನಿತಿನ್ ಲೇಪು ಅವರ ಅಧ್ಯಕ್ಷತೆಯಲ್ಲಿ ಹಾಗೂ ೪೦ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯ ನೇತೃತ್ವದಲ್ಲಿ ೩೭ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ.

ಗೌರವ ಅಧ್ಯಕ್ಷರಾಗಿ ಎಂ.ಕೆ. ರವಿಕುಮಾರ್ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿಯೂ ಮನಮೋಹಕ ಒಳಅಲಂಕಾರ, ವೈವಿಧ್ಯಮಯ ಸಾಂಸ್ಕöÈತಿಕ ಕುಣಿತಗಳು, ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ಮುಂದುವರಿಯಲಿವೆ.

-ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧