ಮಡಿಕೇರಿ, ಆ. ೨೨: ತುಂತುರುಮಳೆ ಹಾಗೂ ಮೈಕೊರೆಯುವ ಚಳಿಯ ನಡುವೆ ಭಗಂಡೇಶ್ವರ ದೇವಸ್ಥಾನದ ಸನ್ನಿಧಾನದ ಮುಂಭಾಗದಲ್ಲಿರುವ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಜರುಗಿದ್ದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನೆರೆದಿದ್ದವರ ಮನೆಸೂರೆಗೊಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ಶ್ರೀ ಕೃಷ್ಣ ಯೂತ್ ಕ್ಲಬ್, ಅಯ್ಯಂಗೇರಿ ಇದರ ಸಂಯುಕ್ತ ಆಶ್ರಯದಲ್ಲಿ ೩೪ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ವಿಧಾನಸಭಾ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಅವರು, ಉದ್ಘಾಟಿಸಿ ಮಾತನಾಡುತ್ತಾ, ಹಿಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ನಾಟಿ ಕಾರ್ಯ ನಡೆದ ಬಳಿಕ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಾಂಪ್ರದಾಯಿಕ ನಾಟಿ ಓಟವನ್ನು ಏರ್ಪಡಿಸಿ ಬಾಳೆಗೊನೆ, ತೆಂಗಿನಕಾಯಿ, ಎಲೆ - ಅಡಿಕೆಯನ್ನು ಕ್ರಮವಾಗಿ ವಿಜೇತರಾದವರಿಗೆ ನೀಡಿ ಸನ್ಮಾನಿಸುತ್ತಿದ್ದರು. ಆದರೆ, ಇದೀಗ ವರ್ಷಗಳದಂತೆ ಗ್ರಾಮೀಣ ಕ್ರೀಡಾಕೂಟ ನಾಟಿ ಓಟದೊಂದಿಗೆ ವಿವಿಧ ವಿಭಾಗದ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದು, ರಾಜ್ಯಮಟ್ಟದಲ್ಲಿ ಖ್ಯಾತಿಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಇAದು ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿಯಿಂದ ಅದೆಷ್ಟೋ ಭತ್ತದ ಗದ್ದೆಗಳು ನೆಡದೆ ಪಾಳು ಬಿದ್ದಿದ್ದು, ಇದರ ಮಧ್ಯೆ ಇಂತಹ ಕ್ರೀಡಾಕೂಟಗಳು ನಡೆಯುತ್ತಿರುವುದು ಸಂಸ್ಕೃತಿಯ ಪೋಷಣೆಗೆ ಸಹಕಾರಿಯಾಗಿದೆ ಎಂದರು.

ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಮುಖ್ಯ ಹೊರತು ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುವಂತಾಗಬಾರದೆAದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರಲ್ಲದೆ, ಕಳೆದ ೩೩ ವರ್ಷಗಳಿಂದ ಇಂತಹ ಕೆಸರುಗದ್ದೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜಿಲ್ಲಾ ಯುವ ಒಕ್ಕೂಟದ ಕಾರ್ಯವನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಮಡಿಕೇರಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಭಾಗವಹಿಸಿ ಮಾತನಾಡುತ್ತಾ, ಇಂತಹ ರಮಣೀಯ ಸ್ಥಳದಲ್ಲಿ ಕೆಸರುಗದ್ದೆ ಕ್ರೀಡೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟದ ವಿಜೇತ ಸ್ಪರ್ಧಿಗಳು ರಾಜ್ಯ - ರಾಷ್ಟçಮಟ್ಟದಲ್ಲಿ ಪ್ರಜ್ವಲಿಸುವಂತಾಗಲಿ ಎಂದು ಆಶಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯ ಚಕ್ರವರ್ತಿ ಮಾತನಾಡುತ್ತಾ, ಇಲಾಖಾ ವತಿಯಿಂದ ಆಯೋಜಿಸುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸುತ್ತಿರುವುದು ಕ್ರೀಡಾಕೂಟದ ಯಶಸ್ವಿಗೆ ಸಹಕಾರಿ ಆಗಿದೆ ಎಂದರು.

ವೇದಿಕೆಯಲ್ಲಿ ಸ್ಥಳೀಯ ನಿವೃತ್ತ ಶಿಕ್ಷಕ ಶ್ರೀಧರ್, ಭಾಗಮಂಡಲ ಗ್ರಾ.ಪಂ. ಮಾಜಿ ಅಧ್ಯಕ್ಷ ಕಾಳನ ರವಿ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಶ್ರೀ ಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ಜಿಲ್ಲಾ ಯುವ ಒಕ್ಕೂಟ ಖಜಾಂಚಿ ಕುಂಜಿಲನ ಮಧು ಮೋಹನ್, ಸದಸ್ಯ ಜಯಕುಮಾರ್, ಚೋಕಿರ ಬಾಬಿ ಭೀಮಯ್ಯ ಭಾಗವಹಿಸಿದ್ದರು.

ಬಿದ್ದಿಯಂಡ ಸಾಕ್ಷಿ ಕಾವೇರಮ್ಮ ಪ್ರಾರ್ಥಿಸಿ, ಬಾಳಾಡಿ ದಿಲೀಪ್ ಕುಮಾರ್ ಸ್ವಾಗತಿಸಿ, ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ, ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷೆ ಕೇಕಡ ಇಂದುಮತಿ ವಂದಿಸಿದರು. ಬಳಿಕ ಸಾರ್ವಜನಿಕ ಪುರುಷರ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ವಿವಿಧ ಓಟದ ಸ್ಪರ್ಧೆ ನಡೆಯಿತು.

- ವರದಿ : ಕೂಡಂಡ ಸಾಬ