ಕಡಂಗ: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ವತಿಯಿಂದ ಹಿರಿಯ ಜೀವಿಗಳಿಗೆ ನಮನ ಕಾರ್ಯಕ್ರಮವು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯುಷ್ ವೈದ್ಯಾಧಿಕಾರಿ ಶುಭಾ ಕೆ.ಜಿ ವಹಿಸಿದರು. ಹಿರಿಯರಾದ ಶಾರದಾ ಕೆ.ಜೆ ಅಬ್ದುಲ್ಲಾ ಎಂ. ಎ., ಕೋಡಿರ ಪ್ರಕಾಶ್ ಈರಪ್ಪ ಅವರುಗಳನ್ನು ಸನ್ಮಾನಿಸಲಾಯಿತು ಸನ್ಮಾನಿತರು ಮಾತನಾಡಿ, ತಮ್ಮ ಬಾಲ್ಯ ಮತ್ತು ಹಿಂದಿನ ದಿನಗಳ ನೆನಪುಗಳು - ಆಗಿನ ಜೀವನಶೈಲಿ, ಸಂಪ್ರದಾಯಗಳು, ಸಂಬAಧಗಳ ಆತ್ಮೀಯತೆ. ನಮ್ಮ ಆಚರಣೆ, ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕೆಂಬ ಆಶಯ ವ್ಯಕ್ತಪಡಿಸಿದರು.

ನಿಮ್ಮ ಬದುಕು ಸದಾ ಆರೋಗ್ಯದಿಂದ, ಸಂತೋಷದಿAದ ಇರಲಿ ಎಂದು ಹಾರೈಸುತ್ತೇವೆ. ಎಂದು ಮಕ್ಕಳು ಹಾಗೂ ಶಿಕ್ಷಕರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶುಭ ಕೆ.ಜಿ. ರೋಟರಿ ಮಿಸ್ಟಿ ಹಿಲ್ಸ್ ನಡೆದು ಬಂದ ದಾರಿ, ಸಂಸ್ಥೆಯ ಕೆಲಸ ಕಾರ್ಯಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೋಹಿತ್ ಪೂಣಚ್ಚ (ಶಾಲಾ ಸ್ಥಳದಾನಿಗಳ ಕುಟುಂಬ) ಶಾಲಾ ಎಸ್ ಡಿ ಎಮ್ ಸಿ ಸದಸ್ಯರು ಕಾವೇರಮ್ಮ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ಹೇಮಾವತಿ ಎಚ್ ಎ ಸ್ವಾಗತ ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ವತ್ಸಲಾ ಶ್ರೀಶ , ಕವಿಗಳು, ಲೇಖಕರು ಆದ ಶಿಕ್ಷಕಿ ಮತ್ತು ವಂದನಾರ್ಪಣೆಯನ್ನು ಶಿಕ್ಷಕಿ ಶೋಭಾ ಎಂ ಬಿ ನಿರ್ವಹಿಸಿದರು.