ಕುಶಾಲನಗರ, ಆ. ೨೨: ಈ ವರ್ಷ ಡಿಸೆಂಬರ್ ೨೫ ರಿಂದ ಮೂರು ದಿನಗಳ ಕಾಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಅಂತರರಾಷ್ಟಿçÃಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ ಆರ್ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ. ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಆವರಣದ ಸಭಾಂಗಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ ಯುವ ಪೀಳಿಗೆಯನ್ನು ಅಂತರರಾಷ್ಟಿçÃಯ ಮಟ್ಟದ ಉದ್ಯಮಿಗಳಾಗಿ ತಯಾರಿಸುವ ಸಂಬAಧ ಗುಣಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಉದ್ಯೋಗದಿಂದ ಉದ್ಯಮಿಗಳ ನವೋದ್ಯಮಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇರುವ ಅವಕಾಶಗಳು ಅನುಕೂಲಗಳು ಅಡೆತಡೆಗಳಿಗೆ ಪರಿಹಾರಗಳು ಸೇರಿದಂತೆ ಯುವ ಪೀಳಿಗೆಯ ಕನಸನ್ನು ನನಸು ಮಾಡಿಕೊಳ್ಳಲು ಉನ್ನತ ತಂತ್ರಜ್ಞಾನದ ಸಹಿತ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶ್ವದ ಪ್ರತಿಷ್ಠಿತ ಪ್ರೇರಣಾರ್ಥಕ ಸ್ಫೂರ್ತಿದಾಯಕ ಭಾಷಣಕಾರದಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ತಿಳಿಸಿದರು. ದಕ್ಷಿಣ ಭಾರತದ ಬಹುತೇಕ ಐದು ರಾಜ್ಯಗಳ ಸಮುದಾಯದ ಗಣ್ಯರು ಪ್ರತಿನಿಧಿಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಸಚಿವರುಗಳು, ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು. ಅಂದಾಜು ರೂ. ೧೫ ಕೋಟಿ ವೆಚ್ಚದಲ್ಲಿ ಈ ಸಮಾವೇಶ ಮೂರು ದಿನಗಳ ಕಾಲ ನಡೆಯಲಿದ್ದು ಸುಮಾರು ೧.೫ ಲಕ್ಷ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೇವಲ ಒಂದು ಸಂಘಟನೆಯಾಗಿ ಮಾತ್ರ ಉಳಿಯದೆ, ಸಂಕಷ್ಟದಲ್ಲಿರುವವರ ಕಲ್ಪ ವೃಕ್ಷದಂತೆ ಕೆಲಸ ಮಾಡುತ್ತಿದೆ. ಕಳೆದ ೮ ವರ್ಷಗಳಲ್ಲಿ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು ೪೦ ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಮೊತ್ತವನ್ನು ಅಶಕ್ತರ, ಅಬಲರ ಅವಶ್ಯಕತೆ ಇರುವವರಿಗೆ ಕಾಮಧೇನುವಾಗಿ ನೀಡುತ್ತಾ ಬಂದಿದೆ ಎಂದ ನಾಗೇಂದ್ರ ಪ್ರಸಾದ್, ಆರ್ಯವೈಶ್ಯರು ವ್ಯಾಪಾರ- ವ್ಯವಹಾರ, ಕೈಗಾರಿಕಾ ಉದ್ಯಮಿಗಳೆಂದು ಉದ್ಯೋಗ ಅರಸಿ ಹೋಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿದ್ದಾರೆ ಎಂದು ಹೇಳಿದರು.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಲು ಉದ್ದೇಶಿಸಿರುವ ಈ ರೀತಿಯ ಸಮಾವೇಶ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸುಮಾರು ೫ ಸಾವಿರ ನವೋದ್ಯಮಗಳ ಸ್ಥಾಪನೆ ತನ್ಮೂಲಕ ೫ ಲಕ್ಷ ಉದ್ಯೋಗಗಳ ಸೃಷ್ಟಿ ಮಾಡುವುದು ಗುರಿಯಾಗಿದೆ ಎಂದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷರಾದ ಆರ್ ಪಿ ರವಿಶಂಕರ್ ಮತ್ತು ಗೌರವಾಧ್ಯಕ್ಷರಾದ ಟಿ ಜಿ ಭರತ್ ಅವರ ನೇತೃತ್ವದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪಿ ಎಸ್ ಪ್ರಶಾಂತ್, ಕನ್ನಿಕಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರಾಜ್, ವಾಸವಿ ಸಮಾಜದ ನಿರ್ದೇಶಕ ಕೆ.ಜೆ. ಸತೀಶ್ ಇದ್ದರು.