ಮಡಿಕೇರಿ. ಆ. ೨೧: ಕೆನೆಲ್ ಕ್ಲಬ್ ಕೊಡಗು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮತ್ತು ಕರ್ನಾಟಕ ಪಶು ವೈದ್ಯಕೀಯ ಸಂಘ-ಕೊಡಗು ಇವರ ಸಹಕಾರದಲ್ಲಿ ಪೊನ್ನಂಪೇಟೆ ತಾಲೂಕಿನ ವಿವಿಧ ಸ್ಥಳಗಳಲ್ಲಿ ರೇಬಿಸ್ (ನಾಯಿ ಹುಚ್ಚು ರೋಗ) ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತಾ.೨೫ ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಆವರಣ, ಸೆ.೭ ರಂದು ಪೊನ್ನಂಪೇಟೆ ಪಶು ಆಸ್ಪತ್ರೆ, ಸೆ.೮ ರಂದು ಬಾಳೆಲೆ ಪಶು ಆಸ್ಪತ್ರೆ, ಸೆ.೧೦ ರಂದು ಶ್ರೀಮಂಗಲ ಪಶು ಆಸ್ಪತ್ರೆ ಆವರಣದಲ್ಲಿ ಶೀಬಿರ ನಡೆಯಲಿದೆ. ಶಿಬಿರಗಳು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ರ ತನಕ ನಡೆಯಲಿವೆ.

ಸಾಕು ಪ್ರಾಣಿ (ನಾಯಿ ಹಾಗು ಬೆಕ್ಕು) ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹಕರಿಸಬೇಕಾಗಿ ಕೊಡಗು ಕೆನೆಲ್ ಕ್ಲಬ್ ಅಧ್ಯಕ್ಷ ಅಳಮೇಂಗಡ ಪಿ ರಮೇಶ್ ಅವರು ಮನವಿ ಮಾಡಿದ್ದಾರೆ.