ಮಡಿಕೇರಿ: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ವತಿಯಿಂದ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಯೋಧ, ಯುವ ಸಂಘದ ಸದಸ್ಯರೂ ಆದಂತಹ ಪಿ.ಎಂ ರಾಮಚಂದ್ರ ಅವರು ನೆರವೇರಿಸಿದರು. ಹಿರಿಯ ಸದಸ್ಯರಾದ ಬಿ.ಕೆ ಮೋಣಪ್ಪ ಸಾಥ್ ನೀಡಿದರು.
ನಂತರ ರಾಷ್ಟçಗೀತೆ ಮತ್ತು ವಂದೇ ಮಾತರಂ ಮೊಳಗಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಂಘದ ಅಧ್ಯಕ್ಷರಾದ ಎಂ.ಎನ್ ಹರೀಶ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಪಿ.ಎಂ ರಾಮಚಂದ್ರ. ಬಿ.ಕೆ ಮೋಣಪ್ಪ, ಬಿ.ಐ ಪುಷ್ಪ ಉಪಸ್ಥಿತರಿದ್ದರು.
ಪ್ರಜ್ವಲ್ ಜಯಪ್ಪ ದಿನದ ಕುರಿತು ಭಾಷಣ ಮಾಡಿದರು. ನಂತರ ಅತಿಥಿಗಳಿಂದ ದಿನದ ಕುರಿತು ಭಾಷಣ ನಡೆಯಿತು. ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ವಾತಂತ್ರ‍್ಯ ದಿನಾಚರಣೆಯ ಬಗ್ಗೆ ನಡೆದ ಸ್ಪರ್ಧಾ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ನಿಕೇಶ್ ಸ್ವಾಗತಿಸಿದರು, ಮಂಗಳಾ ವಂದಿಸಿದರು, ಅವಿನಾಶ್ ಬೊಟ್ಲಪ್ಪ ಕಾರ್ಯಕ್ರಮ ನಿರೂಪಿಸಿದರು. ನಂತರ ಸರ್ವರಿಗೂ ಸಿಹಿ ವಿತರಿಸಲಾಯಿತು.
೮೦ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಿಸಿದಂತೆ ಯುವ ಸಂಘದ ಆವರಣದಲ್ಲಿ ಆಗಮಿಸಿದ ಯುವ ಸಂಘದ ಎಲ್ಲಾ ಸದಸ್ಯರುಗಳು ಸೇರಿ ಗಿಡ ನೆಡುವುದರ ಮುಖಾಂತರ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.
ನಂತರ ಕಡಗದಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಯುವ ಸಂಘದ ವತಿಯಿಂದ ಬಹುಮಾನ ವಿತರಣಾ ಕಾರ್ಯಕ್ರಮ ಯುವ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಿತು.