ಗೋಣಿಕೊಪ್ಪ ವರದಿ, ಆ. ೨೧ ; ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭಗೊAಡಿರುವ ಎ ಡಿವಿಜನ್ ಹಾಕಿ ಲೀಗ್ ಟೂರ್ನಿಯಲ್ಲಿ ಕುಂದ, ಕೋಣನಕಟ್ಟೆ, ಎಲ್ಬೋ, ಮಲ್ಮ ತಂಡಗಳು ಗೆಲುವಿನ ನಗೆ ಬೀರಿದವು.

ಕ್‌ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋ ತಂಡವು ವೀರಾಜಪೇಟೆ ಟವರ್ಸ್ ವಿರುದ್ಧ ೪-೨ ಗೋಲುಗಳಿಂದ ಜಯಿಸಿತು. ಕ್‌ಗ್ಗಟ್ನಾಡ್ ಪರ ಭವನ್, ಕೌಶಿಕ್, ತಿಮ್ಮಣ್ಣ, ಸಂದೇಶ್, ಟವರ್ಸ್ ಪರ ಬೋಪಣ್ಣ ತಲಾ ಒಂದೊAದು ಗೋಲು ಹೊಡೆದರು.

ಕೋಣನಕಟ್ಟೆ ಇಲೆವೆನ್ ತಂಡವು ಗೋಣಿಕೊಪ್ಪ ಬಿಬಿಸಿ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿತು. ಕೋಣನಕಟ್ಟೆ ಪರ ಯಶ್ವಿನ್ ೨, ನಾಚಪ್ಪ, ಪಿ. ಸೋಮಣ್ಣ, ಬಿಬಿಸಿ ಪರ ಧ್ಯಾನ್ ಒಂದೊAದು ಗೋಲು ಹೊಡೆದರು.

ಬೊಟ್ಟಿಯತ್ನಾಡ್ ಕುಂದ ತಂಡವು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ವಿರುದ್ದ ೫-೧ ಗೋಲುಗಳ ಜಯ ಪಡೆಯಿತು. ಕುಂದ ಪರ ಪಿಯು. ಸೋಮಣ್ಣ ೩, ಬೋಪಣ್ಣ, ಭೀಮಯ್ಯ, ಕೂಡಿಗೆ ಪರ ಲಿಕಿತ್ ಒಂದೊAದು ಗೋಲು ಬಾರಿಸಿದರು.

ಕಡಿಯತ್ನಾಡ್ ಹಾಗೂ ಡಾಲ್ಫಿನ್ಸ್ ನಡುವಿನ ಪಂದ್ಯ. ೨-೨ ಗೋಲುಗಳ ಡ್ರಾ ಫಲಿತಾಂಶ ನೀಡಿತು. ಕಡಿಯತ್ನಾಡ್ ಆಟಗಾರ ಮಧು, ಸುಜನ್, ಡಾಲ್ಪಿನ್ಸ್ ಪರ ಗುರು ಪ್ರಧ, ಅಯ್ಯಪ್ಪ ಗೋಲು ಹೊಡೆದರು.

ಮಲ್ಮ ತಂಡ ಅಂಜಿಗೇರಿ ನಾಡ್ ತಂಡವನ್ನು ೩- ೨ ಗೋಲುಗಳಿಂದ ಮಣಿಸಿತು. ಮಲ್ಮ ಪರ ಪ್ರಜ್ವಲ್, ಚೆಸ್ವಿನ್, ಉತ್ತಪ್ಪ, ಅಂಜಿಗೇರಿ ಪರ ಚೆಕ್ಕೇರ ಆದರ್ಶ್ ೨ ಗೋಲು ಸಿಡಿಸಿದರು. ಎಎಸ್ಸಿ ಅಮ್ಮತ್ತಿ ಹಾಗೂ ಕೂರ್ಗ್ ಚಾಲೆಂಜರ್ಸ್ ತಂಡಗಳ ನಡುವಿನ ಪಂದ್ಯ ೨-೨ ಗೋಲುಗಳ ಟೈ ಫಲಿತಾಂಶ ನೀಡಿತು. ಅಮ್ನತ್ತಿ ಪರ ಪವನ್, ರಿವಿನ್ ಭೀಮಯ್ಯ, ಕೂರ್ಗ್ ಪರ ಅಯ್ಯಣ್ಣ, ಬೋಪಣ್ಣ ಗೋಲು ದಾಖಲಿಸಿದರು.