ವೀರಾಜಪೇಟೆ, ಆ. ೨೧: ವಿಶ್ವ ಛಾಯಾಚಿತ್ರ ದಿನಾಚರಣೆಯ ಅಂಗವಾಗಿ ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘ (ವೀರಾಜಪೇಟೆ-ಪೊನ್ನಂಪೇಟೆ) ವತಿಯಿಂದ ಪಾಲಿಬೆಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷ ಡಿ.ಸಿ. ರವೀಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪದಾಧಿಕಾರಿಗಳು ಮೊದಲು ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದರು.

ಶಾಲೆಯ ಮುಖ್ಯಸ್ಥೆ ಗೀತಾ ಮುತ್ತಪ್ಪ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ೨೦೦೦ನೇ ಇಸವಿಯಲ್ಲಿ ಕೇವಲ ೬ ಮಕ್ಕಳಿಂದ ಆರಂಭವಾದ ಈ ಸಂಸ್ಥೆ, ಇಂದು ೬೦ ಮಕ್ಕಳಿಗೆ ಆರೈಕೆ ನೀಡುತ್ತಿದ್ದು, ೧೭ ಶಿಕ್ಷಕರಿದ್ದಾರೆ ಎಂದು ಶಾಲೆಯ ಬೆಳವಣಿಗೆಯನ್ನು ಸ್ಮರಿಸಿದರು. ಶಿಕ್ಷಕ ಶಿವರಾಮ ಮಾತನಾಡಿ, ಮೊಬೈಲ್‌ನಲ್ಲಿ ಚಿತ್ರಗಳನ್ನು ತೆಗೆಯಬಹುದಾದರೂ ವೃತ್ತಿಪರ ಛಾಯಾಗ್ರಾಹಕರು ತೆಗೆಯುವ ಫೋಟೋಗಳು ಶಾಶ್ವತ ನೆನಪಾಗಿ ಉಳಿಯುತ್ತವೆ ಎಂದರು.

ಸಂಘದ ಅಧ್ಯಕ್ಷ ಡಿ.ಸಿ. ರವೀಂದ್ರ ಅವರು ಸಂಸ್ಥೆಯ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಂಘದಿAದ ನೆರವು ನೀಡುವ ಭರವಸೆ ನೀಡಿದರು. ಶಾಲಾ ಮಕ್ಕಳಿಂದ ನೃತ್ಯ ಮತ್ತು ಯೋಗಾಸನ ಪ್ರದರ್ಶನ ಜರುಗಿತು.

ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ:

ಪಾಲಿಬೆಟ್ಟದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಪೂರ್ಣಕುಂಭ ಹಾಗೂ ಬ್ಯಾಂಡ್‌ಸೆಟ್ ಮೂಲಕ ಸಂಘದ ಸದಸ್ಯರನ್ನು ಸಡಗರದಿಂದ ಸ್ವಾಗತಿಸಿದರು. ಪ್ರಾಂಶುಪಾಲೆ ಶೈನಾ ಅವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಡಿ.ಸಿ. ರವೀಂದ್ರ ಮಾತನಾಡಿ, ಪ್ರತಿವರ್ಷ ವಿಶ್ವ ಛಾಯಾಚಿತ್ರ ದಿನದಂದು ಸಂಘದಿAದ ವಿಭಿನ್ನ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಬಾರಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಈ ಕಾಲೇಜಿನ ವಿದ್ಯಾರ್ಥಿಗಳ ವಿನಂತಿಯAತೆ ಕ್ರೀಡಾ ಸಾಮಗ್ರಿ ವಿತರಿಸಲಾಗಿದೆ ಎಂದರು. ಸಂಘದ ಸದಸ್ಯ ವಿಜಯ್ ಕುಮಾರ್, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಲು ಕರೆ ನೀಡಿದರೆ, ಕಾಲೇಜು ಮಂಡಳಿ ಸದಸ್ಯ ರಾಮದಾಸ್ ಸಂಘದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್‌ಗಳಾದ ಶಿವದಾಸ್, ಪಾರ್ವತಿ, ಸುನಿತಾ, ಸವಿತಾ, ಶ್ರುತಿಕ್ಷ, ಪ್ರಿಯಾಂಕಾ, ಕಿರಣ್, ಶಾಲಿನಿ ಹಾಗೂ ಸಂಘದ ಉಪಾಧ್ಯಕ್ಷ ಶರತ್, ರಾಜ್ಯ ಕಾರ್ಯದರ್ಶಿ ದೀಪಕ್, ಮೈಕೆಲ್, ಲೂಯಿಸ್, ಸತ್ತಾರ್, ರಂಜಿತ್, ದಿವ್ಯಾ, ರವಿಕುಮಾರ್, ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.