ಸುಂಟಿಕೊಪ್ಪ, ಆ.೨೧ : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯು ೨೦೨೫-೨೬ನೇ ಸಾಲಿನಲ್ಲಿ ರೂ. ೫೧.೭೦ ಕೋಟಿ ಠೇವಣಿ ಸಂಗ್ರಹಿಸಿ ರೂ.೪೨.೦೧ಕೋಟಿ ಸಾಲ ವಿತರಿಸಿ,ರೂ. ೧.೨೯ ಕೋಟಿ ಲಾಭಗಳಿಸಿರುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ.ಪಿ.ಗಣಪತಿ ಸುಂಟಿಕೊಪ್ಪ ಶಾಖೆಯ ಗ್ರಾಹಕರ ಸಭೆಯಲ್ಲಿ ಹೇಳಿದರು.

ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯ ಗ್ರಾಹಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಬ್ಯಾಂಕ್ ಜಿಲ್ಲೆಯಲ್ಲಿ ೨೫ ಶಾಖೆಗಳನ್ನು ಹೊಂದಿದ್ದು, ೨೫ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ೨೦೨೫-೨೬ನೇ ಸಾಲಿನಲ್ಲಿ ರೂ. ೨,೦೪೩ ಕೋಟಿ ವಿವಿಧ ರೀತಿಯ ಠೇವಣಿ ಸಂಗ್ರಹಣೆ ಮಾಡಿ ಸದಸ್ಯರುಗಳಿಗೆ ರೂ.೧೭೭೨ ಕೋಟಿ ವಿವಿಧ ರೀತಿಯ ಸಾಲಗಳನ್ನು ವಿತರಿಸಿ ರೂ.೨೨.೩೯ ಕೋಟಿ ನಿವ್ವಳ ಲಾಭಗಳಿಸಿರುತ್ತದೆ ಎಂದು ಅವರು ತಿಳಿಸಿದರು. ಸಾಲ ವಸೂಲಾತಿಯಲ್ಲಿ ಶೇ.೯೮. ರಷ್ಟು ಪ್ರಗತಿ ಸಾಧಿಸಿರುತ್ತೇವೆ. ಬ್ಯಾಂಕಿನ ಒಟ್ಟು ಎನ್ ಪಿ ಎ ಪ್ರಮಾಣ ಶೇ.೧.೧೨ ರಷ್ಟು ಎಂದು ತಿಳಿಸಿದರು.

ಬ್ಯಾಂಕ್ ಈ ಬಾರಿ ಅತಿ ಹೆಚ್ಚು ಲಾಭಗಳಿಸಿರುವುದರಿಂದ ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳಿಗಿAತ ಅತೀ ಹೆಚ್ಚು ಅಂದರೆ ಶೇ.೨೦ ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದ್ದು, ತನ್ಮೂಲಕ ಹೆಚ್ಚು ಲಾಭವನ್ನು ಸದಸ್ಯ ಸಹಕಾರ ಸಂಘಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸುಂಟಿಕೊಪ್ಪ ಪಾ.ಕೃ.ಪ.ಸ.ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ನಿರ್ದೇಶಕರುಗಳಾದ ಕ್ಲೆöÊವ್ ಪೊನ್ನಪ್ಪ, ಕೆ.ಎಸ್.ಮಂಜುನಾಥ್, ರಮೇಶ್ ಚಂಗಪ್ಪ, ಚೆಟ್ಟಳ್ಳಿ ಪಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಪಿ.ಪಿ. ಲೀಲಾವತಿ, ಎನ್.ಸಿ. ದಿವಾಕರ, ಮಾದಾಪುರ ಪಾ.ಕೃ.ಪ.ಸ. ಸಂಘದ ಅಧ್ಯಕ್ಷ ನಾಪಂಡ.ಎA.ಉತ್ತಪ್ಪ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬಿ.ಬೆಳ್ಳಿಯಪ್ಪ ಹಾಗೂ ಅಧ್ಯಕ್ಷರ ಅಪ್ತ ಸಹಾಯಕರಾದ ಸಿ.ಎಸ್.ಗಣಪತಿ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯ ವ್ಯವಸ್ಥಾಪಕರದ ಸತೀಶ್ ಸ್ವಾಗತಿಸಿ, ವಾರ್ಷಿಕ ವರದಿಯನ್ನು ವಾಚಿಸಿ, ಸ.ಶಾ.ವ್ಯವಸ್ಥಾಪಕರಾದ ಎಂ.ಮಮತ ವಂದಿಸಿದರು.