ಅಡಿಕೆ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು, ರೈತರಿಗೆ ಉತ್ತಮ ಹಾಗೂ ಸ್ಥಿರವಾದ ಆದಾಯವನ್ನು ತಂದುಕೊಡುತ್ತದೆ. ಆಯುರ್ವೇದ ಮತ್ತು ಆಯುರ್ವೇದದಲ್ಲಿ ಅಡಿಕೆಯನ್ನು ಜೀರ್ಣಕ್ರಿಯೆ ಹೆಚ್ಚಿಸಲು, ಬಾಯಿಯ ದುರ್ನಾತ ತಡೆಯಲು ಮತ್ತು ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳು, ಪೂಜೆಗಳು ಹಾಗೂ ಶುಭ ಸಮಾರಂಭಗಳಲ್ಲಿ ಅಡಿಕೆಗೆ ಉನ್ನತ ಸ್ಥಾನವಿದೆ. ಅಡಿಕೆ ಗಿಡದ ಒಣಗಿದ ಹಾಳೆಗಳಿಂದ ಪರಿಸರ ಸ್ನೇಹಿ ಹಾಗೂ ಮರುಬಳಕೆ ಮಾಡಬಹುದಾದ ತಟ್ಟೆ, ಬಟ್ಟಲು ಮತ್ತು ಡಬ್ಬಿಗಳನ್ನು ತಯಾರಿಸಲಾಗುತ್ತದೆ. ಅಡಿಕೆ ಮರದ ದಿಮ್ಮಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ, ಬೇಲಿ ಕಟ್ಟಲು ಹಾಗೂ ತಾತ್ಕಾಲಿಕ ಚಪ್ಪರಗಳನ್ನು ಹಾಕಲು ಉಪಯೋಗಿಸುತ್ತಾರೆ. ಇತ್ತೀಚೆಗೆ ಅಡಿಕೆಯಿಂದ ಸೋಪ್, ಶ್ಯಾಂಪೂ, ನೈಸರ್ಗಿಕ ಬಣ್ಣ (ಆಥಿe) ಮತ್ತು ವಿವಿಧ ಮುಖಲೇಪನ ಗಳನ್ನು ತಯಾರಿಸುವ ಸಂಶೋಧನೆಗಳು ಯಶಸ್ವಿಯಾಗಿವೆ.

-ವೀಣಾ ಕುಶಾಲಪ್ಪ ನಂಗಾರು.

ಗುಡ್ಡೆಹೊಸೂರು, ಕುಶಾಲನಗರ.

ಖರ್ಜೂರದ ಹಣ್ಣಿನಲ್ಲಿ ಐರನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ನಾರಿನಂಶ ಸಮೃದ್ಧವಾಗಿದ್ದು, ತಕ್ಷಣದ ಶಕ್ತಿ ನೀಡುತ್ತದೆ. ನಿತ್ಯ ಖರ್ಜೂರ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಇದು ಕಡಿಮೆ ನೀರು ಮತ್ತು ಹೆಚ್ಚಿನ ತಾಪಮಾನವಿರುವ ಒಣ ಅಥವಾ ಮರುಭೂಮಿ ಪ್ರದೇಶಗಳಲ್ಲೂ ಉತ್ತಮವಾಗಿ ಬೆಳೆಯುವ ಗಿಡವಾಗಿದೆ.

ಖರ್ಜೂರದಿಂದ ನೈಸರ್ಗಿಕ ಸಿಹಿ (ಆಚಿಣe sugಚಿಡಿ), ಪಾಕ (Sಥಿಡಿuಠಿ), ಜ್ಯಾಮ್ ಹಾಗೂ ವಿವಿಧ ತರಹದ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ.ಒಣಗಿದ ಖರ್ಜೂರದ ಗರಿಗಳಿಂದ ಬುಟ್ಟಿಗಳು, ಚಾಪೆಗಳು ಹಾಗೂ ಮನೆಗೆ ಮೇಲ್ಚಾವಣಿ ಮಾಡಲು ಉಪಯೋಗಿಸುತ್ತಾರೆ. ಶುಷ್ಕ ಪ್ರದೇಶದ ರೈತರಿಗೆ ಇದು ಅತ್ಯುತ್ತಮ ವಾಣಿಜ್ಯ ಬೆಳೆಯಾಗಿದ್ದು, ದೀರ್ಘಕಾಲದವರೆಗೆ ಆದಾಯ ನೀಡುತ್ತದೆ.

- ರಿತ್ವಿಕ್ ಜೆ. ಪಿ. ನಂಗಾರು.

ಗುಡ್ಡೆಹೊಸೂರು, ಕುಶಾಲನಗರ

ನಾನು ಅಡಿಕೆ ಗಿಡ ನೆಡುತ್ತಿದ್ದೇನೆ.

ಅಡಿಕೆ ಪೂಜೆ ಹಾಗೂ ತಾಂಬೂಲ ಸೇವನೆಗೆ ಉಪಯುಕ್ತವಾಗಿದೆ. ಆಯುರ್ವೇದ ಉಪಯೋಗಗಳು ಅಡಿಕೆಯನ್ನು ಪುಡಿಮಾಡಿ ಹಲ್ಲು ಉಜ್ಜಿದರೆ ಹಲ್ಲಿನ ನೋವು ಮತ್ತು ಒಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ. ಅಡಿಕೆ ಸೇವನೆಯಿಂದ ಜಂತುಹುಳು ನಿವಾರಣೆಯಾಗುತ್ತದೆ. ಬಾಯಿಯ ದುರ್ಗಂಧ ಕಡಿಮೆಯಾಗಲು ಇದು ಸಹಕಾರಿ.

-ಮುಕ್ಕಾಟಿ ಗವಿನ್ ತಿಮ್ಮಯ್ಯ, ಯು.ಕೆ.ಜಿ.

ಅಮ್ಮಣ್ಣ ಮೇಮೊರಿಯಲ್ ಸ್ಕೂಲ್, ಮರಗೋಡು.ಹಸಿರಾಗಿ ಬೆಳೆದು ಮನೆ ಕಾಪಾಡು,

ಸಂತೋಷದ ಹೂವು ಮನದಲಿ ಅರಳಿಸು;

ತುಳಸಿ ನೀನು ಸಸಿಯಲ್ಲ

ಭಾರತೀಯ ಸಂಸ್ಕೃತಿಯ ಪವಿತ್ರ ಉಸಿರು.

-ತೃಪ್ತಿ ತಂಗಮ್ಮ,

ಕೈಕೇರಿ-ಗೋಣಿಕೊಪ್ಪಲು

ಇAದು ನಾವು ನೆಡುವ ಗಿಡಗಳು ನಾಳೆ ಶುದ್ಧ ಗಾಳಿ, ನೆರಳು, ಹಕ್ಕಿಗಳಿಗೆ ಆಶ್ರಯ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಬದುಕನ್ನು ನೀಡುತ್ತವೆ.

ಬನ್ನಿ ಎಲ್ಲರೂ ಸೇರಿ ಹಸಿರು ಭಾರತವನ್ನು ನಿರ್ಮಿಸೋಣ.

-ಪೊನ್ನಣ್ಣ ಸಿ. ಎಸ್.,

೨ನೇ ತರಗತಿ

ಲಯನ್ಸ್ ಶಾಲೆ,

ಗೋಣಿಕೊಪ್ಪಲು.ನಾನು ಕಾಫಿ ನೆಡುತ್ತಿದ್ದೇನೆ.

ಕಾಫಿ ಕುಡಿಯುವುದರಿಂದ ಮೆದುಳಿನ ಕಾರ್ಯಕ್ಷಮತೆ ಸುಧಾರಿಸಿ, ಮದುಮೇಹದ ಅಪಾಯ ಕಡಿಮೆ ಆಗುತ್ತದೆ.

ಆರೋಗ್ಯದ ಪ್ರಯೋಜನಗಳು : ಕಾಫಿಯಲ್ಲಿನ ಕೆಫೀನ್ ಅಂಶವು ದೈಹಿಕ ಮತ್ತು ಮಾನಸಿಕ ಆಯಾಸವನ್ನು ಹೋಗಲಾಡಿಸುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ನಿಯಮಿತ ಕಾಫಿ ಸೇವನೆಯಿಂದ ಟೈಪ್-೨ ಮಧುಮೇಹ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.

ಕಾಫಿ ಕುಡಿಯುವುದರಿಂದ ಮನಸ್ಸು ಉಲ್ಲಾಸಗೊಂಡು ಖಿನ್ನತೆ, ಆತಂಕ ಕಡಿಮೆಯಾಗುತ್ತದೆ.

-ಮುಕ್ಕಾಟಿ ಜಶ್ವಿನ್ ತಿಮ್ಮಯ್ಯ

೩ನೇ ತರಗತಿ, ಸಂತ ಜೋಸೆಫರ ಶಾಲೆ

ಮಡಿಕೇರಿ.ಎಲ್ಲರಿಗೂ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು.

ನಾನು ನಮ್ಮ ಮನೆಯ ರಸ್ತೆಯ ಹತ್ತಿರ ನೇರಳೆ ಹಣ್ಣಿನ ಗಿಡವನ್ನು ನೆಟ್ಟಿರುತ್ತೇನೆ.

ಇದು ಬೆಳೆದು ಭೂಮಿಗೆ ಫಲವತೆಯನ್ನು ಕೊಡುತ್ತದೆ.

ಪ್ರಾಣಿ ಪಕ್ಷಿಗಳಿಗೆ ಹಣ್ಣುಗಳನ್ನು ಕೊಡುತ್ತದೆ. ಪ್ರತಿಯೊಬ್ಬರಿಗೂ ಆಮ್ಲಜನಕವನ್ನು ಒದಗಿಸುತ್ತದೆ. ಇದು ಹೆಮ್ಮರವಾಗಿ ಬೆಳೆಯಲಿ ಎಂದು ನಾನು ನೆಟ್ಟಿರುತ್ತೇನೆ.

-ಗಾನ್ವಿತಾ. ಪಿ.ಎಸ್.

೫ನೇ ತರಗತಿ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಗದಾಳು.