ಕೊಡಗಿನ ಸಾಂಸ್ಕöÈತಿಕ ಮತ್ತು ಐತಿಹಾಸಿಕ ಭೂಪಟದಲ್ಲಿ ವೀರರಾಜೇಂದ್ರಪೇಟೆ (ಇಂದಿನ ವೀರಾಜಪೇಟೆ) ನಗರಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ.

ಈ ನಗರದ ಹೃದಯಭಾಗದಲ್ಲಿರುವ ಶ್ರೀ ಬಸವೇಶ್ವರ ದೇವಾಲಯ (ಬಸವನಗುಡಿ) ಧಾರ್ಮಿಕ ಕೇಂದ್ರ ಮಾತ್ರವಲ್ಲ; ಕೊಡಗಿನ ರಾಜರ ಪರಾಕ್ರಮ, ಸಮುದಾಯಗಳ ಒಗ್ಗಟ್ಟು ಮತ್ತು ಶತಮಾನಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಗೌರಿ-ಗಣೇಶೋತ್ಸವ ಪರಂಪರೆಯ ಜೀವಂತ ಸಾಕ್ಷಿಯಾಗಿದೆ. ಬಸವನಗುಡಿ ಸ್ಥಾಪನೆಯು ಕೊಡಗಿನ ರಾಜರ, ಬ್ರಿಟಿಷರ ಐತಿಹಾಸಿಕ ಭೇಟಿಯೊಂದಿಗೆ ಬೆಸೆದುಕೊಂಡಿದೆ.

ಟಿಪುö್ಪ ಸುಲ್ತಾನ್‌ನ ಆಕ್ರಮಣದ ವಿರುದ್ಧ ಹೋರಾಡಲು ಕೊಡಗಿನ ರಾಜ ವೀರರಾಜೇಂದ್ರ ಒಡೆಯರ್ ಬ್ರಿಟಿಷ್ ಸೇನಾಧಿಕಾರಿ ಜನರಲ್ ಅಬರ್ ಕ್ರಾಂಬಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ೧೭೯೧ರಲ್ಲಿ ಜನರಲ್ ಅಬರ್ ಕ್ರಾಂಬಿ ಕೊಡಗಿಗೆ ಬಂದಾಗ ರಾಜರನ್ನು ಭೇಟಿಯಾದ ಐತಿಹಾಸಿಕ ಸ್ಥಳವೇ ಪ್ರಸ್ತುತ ಬಸವನಗುಡಿ ಇರುವ ಜಾಗ. ಈ ಮಹತ್ವದ ಭೇಟಿಯ ನೆನಪಿಗಾಗಿ ಮತ್ತು ಕೊಡಗನ್ನು ಆಳಿದ ಲಿಂಗಾಯತ ರಾಜರ ಧಾರ್ಮಿಕ ಸಂಕೇತವಾಗಿ ರಾಜ ವೀರರಾಜೇಂದ್ರ ಒಡೆಯರು ೧೭೯೨ರಲ್ಲಿ ಈ ಸ್ಥಳದಲ್ಲಿ ಬಸವನಗುಡಿಯನ್ನು ಸ್ಥಾಪಿಸಿದರು.

ಈ ನಗರಕ್ಕೆ 'ವೀರರಾಜೇಂದ್ರಪೇಟೆ' ಎಂದು ಹೆಸರಿಟ್ಟು ವಿವಿಧ ಪ್ರದೇಶಗಳಿಂದ ವ್ಯಾಪಾರಿಗಳು ಮತ್ತು ವೃತ್ತಿಪರರನ್ನು ಕರೆತಂದು ನೆಲೆನಿಲ್ಲುವಂತೆ ಮಾಡಿದರು.

೧೭೯೨ರ ನಂತರ ರಾಜರು ದೇವಾಲಯದ ಉಸ್ತುವಾರಿಯನ್ನು ಜೈನರ ಬೀದಿಯ ಐದು ಪ್ರಮುಖ ಕುಟುಂಬಗಳಿಗೆ (ಕಾಮತ್, ನೇಮಿರಾಜಯ್ಯ, ಅಡಿಕೆ ನಂಜಪ್ಪ, ಪರ್ವತ್ತಯ್ಯ ಮತ್ತು ಪಾಂಡುರAಗ ರಾವ್ ಕುಟುಂಬಗಳು) ವಹಿಸಿಕೊಟ್ಟರು.

ದೇವಾಲಯದ ಶಿಥಿಲಾವಸ್ಥೆಯನ್ನು ಕಂಡು ಈ ಐದು ಕುಟುಂಬಗಳು ಒಗ್ಗೂಡಿ ೧೯೩೫ರಲ್ಲಿ ಪ್ರಸ್ತುತ ಕಾಣುವ ಭವ್ಯವಾದ ಶ್ರೀ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದರು.

ವೀರಾಜಪೇಟೆಯ ಗೌರಿ ಉತ್ಸವವು ಜಗತ್ತಿ ನಲ್ಲೇ ಅತ್ಯಂತ ಅಪರೂಪದ ಹಾಗೂ ಸುಂದರ ಸಂಪ್ರದಾಯವನ್ನು ಹೊಂದಿದೆ. ೧೯೫೧ರಲ್ಲಿ ವೀರಾಜಪೇಟೆಯ ಜೈನ ಮಹಿಳೆ ಜಿನ್ನಮ್ಮನವರು ತೀರಿಕೊಂಡಾಗ, ಅವರು ಬಳಸುತ್ತಿದ್ದ ಪಲ್ಲಕ್ಕಿಯನ್ನು ಬಸವೇಶ್ವರ ದೇವಾಲಯಕ್ಕೆ ನೀಡಲಾಯಿತು.

ಆಗಿನ ಯುವಕರಾಗಿದ್ದ ಎನ್. ವೆಂಕಟೇಶ್ ಕಾಮತ್ ಅವರ ನೇತೃತ್ವದಲ್ಲಿ, ಈ ಪಲ್ಲಕ್ಕಿಯಲ್ಲಿ ಗೌರಿದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರದಾದ್ಯಂತ ಮೆರವಣಿಗೆ ಮಾಡುವ ಸಂಪ್ರದಾಯವನ್ನು ಆರಂಭಿಸಲಾಯಿತು.

ಅAದಿನಿAದ ಪ್ರತಿ ವರ್ಷ ಗೌರಿ ಹಬ್ಬದ ಸಂದರ್ಭದಲ್ಲಿ ಶ್ರೀ ಗೌರಿದೇವಿಯನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ, ಮಂಗಳವಾದ್ಯಗಳೊAದಿಗೆ ವೀರಾಜಪೇಟೆಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಗೌರಿದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಈ ವೈಭವ ಇಡೀ ವಿಶ್ವದಲ್ಲೇ ವಿರಾಜಪೇಟೆಯಲ್ಲಿ ಮಾತ್ರ ಕಂಡುಬರುವ ವಿಶೇಷ ಸಂಪ್ರದಾಯವಾಗಿದೆ.

ಗೌರಿ ಹಬ್ಬದ ಮರುದಿನ ಬಸವನಗುಡಿ ಹಾಗೂ ಪಕ್ಕದ ಶ್ರೀ ಗಣಪತಿ ದೇವಾಲಯ ಸೇರಿದಂತೆ ವೀರಾಜಪೇಟೆಯ ವಿವಿಧ ಬೀದಿಗಳ ೨೨ಕ್ಕೂ ಹೆಚ್ಚು ಮಂಟಪಗಳಲ್ಲಿ ಗಣೇಶ ಮೂರ್ತಿಗಳನ್ನು ವಿಜೃಂಭಣೆಯಿAದ ಪ್ರತಿಷ್ಠಾಪಿಸಲಾಗುತ್ತದೆ.

೧೧ನೇ ದಿನದಂದು ಎಲ್ಲಾ ಗಣಪತಿ ಮೂರ್ತಿಗಳು ಹಾಗೂ ಬಸವನಗುಡಿಯ ಗೌರಿ ಪಲ್ಲಕ್ಕಿಯು ಒಂದೆಡೆ ಸೇರಿ, ಶೋಭಾಯಾತ್ರೆಯ ಮೂಲಕ ಸಾಗಿ ರಾಜರ ಕಾಲದಲ್ಲಿ ನಿರ್ಮಿಸಲಾದ ಗೌರಿ ಕೆರೆಯಲ್ಲಿ ವಿಸರ್ಜನೆಗೊಳ್ಳುತ್ತವೆ.

ಪ್ರಸ್ತುತ ಹೈಕೋರ್ಟ್ ವಕೀಲರಾದ ರವೀಂದ್ರನಾಥ್ ಕಾಮತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

೧೭೯೨ರಲ್ಲಿ ಬಸವನಗುಡಿಯಾಗಿ ಸ್ಥಾಪನೆಯಾದ ಈ ಪುಣ್ಯಕ್ಷೇತ್ರದಲ್ಲಿ ೧೯೫೧ರಿಂದ ಆರಂಭವಾದ ಗೌರಿ ಪಲ್ಲಕ್ಕಿ ಉತ್ಸವ ಮತ್ತು ವೈಭವದ ಗಣೇಶೋತ್ಸವದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದೆ. ವೀರಾಜಪೇಟೆಯ ಸಕಲ ನಾಗರಿಕರು ಒಂದಾಗಿ ಆಚರಿಸುವ ಈ ಗೌರಿಗಣೇಶ ಉತ್ಸವ ಇಂದಿನವರೆಗೂ ತನ್ನ ಸಾಂಸ್ಕöÈತಿಕ ಮೌಲ್ಯ, ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ.