ನೆದರ್ಲ್ಯಾಂಡ್, ಆ. ೨೦: ನೆದರ್ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡವು ಇಂಗ್ಲೆAಡ್ ವಿರುದ್ಧ ರೋಚಕ ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಮುಂದಿನ ಹಂತಕ್ಕೆ ಕಾಲಿಟ್ಟಿದೆ. ಗ್ರೂಪ್ ಡಿ ನಲ್ಲಿ ಭಾರತವು ಚೀನಾದೊಂದಿಗೆ ಡ್ರಾ ಮಾಡಿಕೊಂಡು ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದು ೪ ಅಂಕಗಳನ್ನು ಪಡೆದಿತ್ತು. ಇಂಗ್ಲೆAಡ್, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಚೀನಾದೊಂದಿಗೆ ಸೋತು ೩ ಅಂಕಗಳನ್ನು ಪಡೆದಿತ್ತು. ಚೀನಾ ಮೊದಲ ಸ್ಥಾನ ಪಡೆದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿತ್ತು.

ಇಂದಿನ ಪಂದ್ಯದಲ್ಲಿ ಇಂಗ್ಲೆAಡ್ ಮುಂದಿನ ಹಂತ ತಲುಪಲು ಗೆಲುವು ಅಗತ್ಯವಿತ್ತು, ಭಾರತಕ್ಕೆ ಡ್ರಾ ಅಷ್ಟೇ ಸಾಕಾಗಿತ್ತು. ಈ ಕಾರಣದಿಂದಾಗಿ ರಕ್ಷಣಾತ್ಮಕ ಆಟವಾಡಿದ ಭಾರತ, ಇಂಗ್ಲೆAಡ್‌ಗೆ ದೊರೆತ ೧೨ ಪೆನಾಲ್ಟಿ ಕಾರ್ನರ್‌ಗಳ ಪೈಕಿ ಒಂದೂ ಗೋಲಾಗಿ ಪರಿವರ್ತನೆಯಾಗದಂತೆ ಆಡಿ ಗೋಲ್ ಕೀಪರ್ ಸವಿತಾ ಅವರ ಉತ್ತಮ ಆಟದಿಂದಾಗಿ ೦-೦ ಡ್ರಾ ಮೂಲಕ ೨ನೇ ಹಂತಕ್ಕೆ ಕಾಲಿಟ್ಟಿತು.