ಕೊಡಗಿನಲ್ಲಿ ಇದು ಈಗ ಕೇವಲ ಒಂದು ಸುದ್ದಿಯಲ್ಲ. ಹಲವು ವರ್ಷಗಳಿಂದ ಮರುಕಳಿಸುತ್ತಿರುವ ಆತಂಕ. ಆನೆ ಬಂದರೆ ಜನ ಭಯಪಡುತ್ತಾರೆ. ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿಯುತ್ತದೆ. ಆನೆಯನ್ನು ಕಾಡಿಗಟ್ಟುವ ಪ್ರಯತ್ನ ನಡೆಯುತ್ತದೆ. ಘಟನೆ ನಡೆದ ಮೇಲೆ ಪರಿಹಾರದ ಮಾತು ಬರುತ್ತದೆ. ಕೆಲ ದಿನಗಳ ನಂತರ ಪರಿಸ್ಥಿತಿ ಸಹಜವಾಗುತ್ತದೆ. ಆದರೆ ಮುಂದಿನ ಬಾರಿ ಮತ್ತೊಂದು ಆನೆ ಬರುತ್ತದೆ. ಮತ್ತೊಬ್ಬ ಮನುಷ್ಯ ಸಾಯುತ್ತಾನೆ. ಮತ್ತೆ ಅದೇ ಚರ್ಚೆ.

ಹಾಗಾದರೆ ಸಮಸ್ಯೆ ಎಲ್ಲಿದೆ?

ಆನೆಗಳಲ್ಲೇ? ಆನೆಗಳ ಸಂಖ್ಯೆ ಹೆಚ್ಚಾಗಿರುವುದಲ್ಲೇ? ಅಥವಾ ಆನೆಗಳು ಬದುಕಬೇಕಾದ ಕಾಡು, ಅವುಗಳ ಸಂಚಾರದ ದಾರಿ ಮತ್ತು ಅವುಗಳ ಸಹಜ ಬದುಕಿನ ಪರಿಸರದಲ್ಲಿ ನಾವು ಮಾಡಿರುವ ಬದಲಾವಣೆಗಳಲ್ಲೇ?

ಈ ಪ್ರಶ್ನೆಗಳನ್ನು ಕೇಳದೆ ಕೇವಲ “ಆನೆ ದಾಳಿ” ಎಂದು ಸುದ್ದಿಯನ್ನು ಮುಗಿಸಿದರೆ, ನಾವು ಸಮಸ್ಯೆಯ ಅರ್ಧ ಭಾಗವನ್ನಷ್ಟೇ ನೋಡಿದಂತಾಗುತ್ತದೆ.

ಐದು ವರ್ಷಗಳಲ್ಲಿ ೪೪ ಸಾವು

ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ನಿನ್ನೆಯ ಸಮಸ್ಯೆಯಲ್ಲ. ಅರಣ್ಯ ಇಲಾಖೆಯ ಆರ್‌ಟಿಐ ಉತ್ತರ ಆಧರಿಸಿದ ವರದಿ ಪ್ರಕಾರ, ೨೦೧೯-೨೦ರಿಂದ ೨೦೨೩-೨೪ರವರೆಗೆ ಐದು ವರ್ಷಗಳಲ್ಲಿ ಆನೆ ದಾಳಿಗೆ ೪೪ ಮಂದಿ ಮೃತಪಟ್ಟಿದ್ದಾರೆ.

೨೦೧೯-೨೦ - ೫ | ೨೦೨೦-೨೧ - ೮ | ೨೦೨೧-೨೨ - ೧೨ | ೨೦೨೨-೨೩ - ೬ | ೨೦೨೩-೨೪ - ೧೩ ವರ್ಷದಿಂದ ವರ್ಷಕ್ಕೆ ಸಾವುಗಳು ಮುಂದುವರಿದಿರುವುದು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ. ಇದರ ನಡುವೆಯೇ ೨೦೨೬ರ ಆಗಸ್ಟ್ ೧೭ರವರೆಗೆ ಕೊಡಗಿನಲ್ಲಿ ಆನೆ ದಾಳಿಗೆ ೮ ಮಂದಿ ಮೃತಪಟ್ಟಿದ್ದಾರೆ ಎಂಬ ವರದಿ ಮತ್ತೊಮ್ಮೆ ಆತಂಕ ಮೂಡಿಸಿದೆ. ಅಂಕಿಅAಶಗಳು ಹೇಳುತ್ತಿರುವುದು ಒಂದೇ. ಇದು ಆನೆಗಳ ಸಮಸ್ಯೆಯಷ್ಟೇ ಅಲ್ಲ; ವರ್ಷಗಳಿಂದ ಪರಿಹಾರ ಕಾಣದ ಮಾನವ-ಆನೆ ಸಂಘರ್ಷದ ಪ್ರಶ್ನೆ. ಪ್ರತಿ ಸಂಖ್ಯೆಯ ಹಿಂದೆ ಒಂದು ಕುಟುಂಬವಿದೆ. ಒಬ್ಬ ತಂದೆ. ಒಬ್ಬ ತಾಯಿ. ಒಬ್ಬ ಮಗ. ಒಬ್ಬ ಮಗಳು. ಒಂದು ಕುಟುಂಬದ ಬದುಕನ್ನೇ ಬದಲಿಸುವ ಒಂದು ಸಾವು.

ಹೀಗಾಗಿ ಇದನ್ನು ಕೇವಲ ವನ್ಯಜೀವಿ ಸಂರಕ್ಷಣೆಯ ವಿಷಯವಾಗಿ ನೋಡಲು ಸಾಧ್ಯವಿಲ್ಲ. ಇದು ಮನುಷ್ಯರ ಜೀವದ ಪ್ರಶ್ನೆಯೂ ಹೌದು. ಆದರೆ... ಆನೆ ಯಾಕೆ ಬರುತ್ತಿದೆ? ಇಲ್ಲಿ ನಾವು ಸ್ವಲ್ಪ ಹಿಂದೆ ಹೋಗಬೇಕಾಗಿದೆ. ಆನೆ ಮನುಷ್ಯನನ್ನು ಕೊಲ್ಲಲು ಗ್ರಾಮಕ್ಕೆ ಬರುವುದಿಲ್ಲ. ಅದು ತನ್ನ ಬದುಕಿಗಾಗಿ ಆಹಾರ ಹುಡುಕುತ್ತದೆ. ನೀರು ಹುಡುಕುತ್ತದೆ. ಸುರಕ್ಷಿತ ದಾರಿ ಹುಡುಕುತ್ತದೆ.

ಆನೆಗಳು ದೊಡ್ಡ ಪ್ರದೇಶದಲ್ಲಿ ಸಂಚರಿಸುವ ಜೀವಿಗಳು. ಒಂದೇ ಸ್ಥಳದಲ್ಲಿ ಕುಳಿತು ಬದುಕುವ ಪ್ರಾಣಿಗಳಲ್ಲ. ಅವುಗಳ ಬದುಕಿನಲ್ಲಿ ಕೆಲವು ದಾರಿಗಳು ಪೀಳಿಗೆಗಳಿಂದ ಬಳಕೆಯಾಗುತ್ತವೆ. ಹಿರಿಯ ಆನೆಗಳಿಗೆ ನೀರಿನ ಮೂಲಗಳೂ, ಆಹಾರದ ಪ್ರದೇಶಗಳೂ, ಸುರಕ್ಷಿತ ಸಂಚಾರ ಮಾರ್ಗಗಳೂ ನೆನಪಿರುತ್ತವೆ.

ಆದರೆ ಆ ದಾರಿಯಲ್ಲಿ ಒಂದು ದಿನ ರಸ್ತೆ ಬರುತ್ತದೆ. ಮತ್ತೊಂದು ಕಡೆ ಮನೆ ಬರುತ್ತದೆ. ಇನ್ನೊಂದು ಕಡೆ ಕೃಷಿ. ಮತ್ತೊಂದು ಕಡೆ ತೋಟ.

ಹಾಗಾದರೆ ಆನೆ ಏನು ಮಾಡಬೇಕು?

ದಾರಿ ಬದಲಾಗುತ್ತದೆ. ಆ ದಾರಿ ಕೆಲವೊಮ್ಮೆ ಮನುಷ್ಯನ ಮನೆಯ ಬಳಿಯಿಂದ ಹೋಗುತ್ತದೆ. ಅಲ್ಲಿಂದ ಸಂಘರ್ಷ ಆರಂಭವಾಗುತ್ತದೆ. ಕಾಡು ಎಂದರೆ ಮರಗಳ ಸಂಖ್ಯೆ ಮಾತ್ರವಲ್ಲ ನಾವು ಕಾಡು ಎಂದರೆ ಮರಗಳನ್ನು ಮಾತ್ರ ಎಣಿಸುತ್ತೇವೆ. ಆದರೆ ಆನೆಗೆ ಕಾಡು ಎಂದರೆ ಮರಗಳ ಸಂಖ್ಯೆ ಮಾತ್ರವಲ್ಲ. ಆಹಾರ... ನೀರು... ನೆರಳು... ಸಂಚಾರದ ದಾರಿ... ಸಂತಾನೋತ್ಪತ್ತಿಯ ಸ್ಥಳ... ಸುರಕ್ಷತೆ. ಇವೆಲ್ಲ ಸೇರಿ ಅದರ hಚಿbiಣಚಿಣ. ಕಾಡು ದೊಡ್ಡದಾಗಿದ್ದರೂ ಅದರೊಳಗಿನ ಪ್ರಮುಖ ಸಂಚಾರ ಮಾರ್ಗಗಳು ತುಂಡಾದರೆ ಆನೆಗೆ ಸಮಸ್ಯೆ. ಇದನ್ನೇ ವಿಜ್ಞಾನಿಗಳು hಚಿbiಣಚಿಣ ಜಿಡಿಚಿgmeಟಿಣಚಿಣioಟಿ ಎಂದು ಕರೆಯುತ್ತಾರೆ.

ಕೇಂದ್ರ ಪರಿಸರ ಸಚಿವಾಲಯದ ಊಚಿssಚಿಟಿ–ಏoಜಚಿgu ಐಚಿಟಿಜsಛಿಚಿಠಿe ಕುರಿತ ದಾಖಲೆಗಳಲ್ಲೂ ಭೂಬಳಕೆಯ ಬದಲಾವಣೆ, ಸರ್ಕಾರಿ ಭೂಮಿ ಮತ್ತು ಅರಣ್ಯದ ಒತ್ತುವರಿ ಹಾಗೂ ಆನೆಗಳ ಸಂಚಾರ ಮಾರ್ಗಗಳ ವಿಭಜನೆಯಂತಹ ಅಂಶಗಳನ್ನು ಮಾನವ-ಆನೆ ಸಂಘರ್ಷದ ಹಿನ್ನೆಲೆಯೊಂದಿಗೆ ದಾಖಲಿಸಲಾಗಿದೆ.

ಅಂದರೆ... ಆನೆಗಳ ಸಂಖ್ಯೆಯನ್ನು ಮಾತ್ರ ಎಣಿಸಿದರೆ ಕಥೆ ಪೂರ್ಣವಾಗುವುದಿಲ್ಲ. ಕಾಡಿನ ಒತ್ತುವರಿ-ಮಾತನಾಡಲೇಬೇಕಾದ ಪ್ರಶ್ನೆ ಇಲ್ಲಿ ಮತ್ತೊಂದು ಅಸಹಜ ಪ್ರಶ್ನೆ ಇದೆ. ಕಾಡಿನ ಜಾಗಕ್ಕೆ ನಾವು ಏನು ಮಾಡಿದ್ದೇವೆ? ಕರ್ನಾಟಕದ ಇಟeಠಿhಚಿಟಿಣ ಖಿಚಿsಞ ಈoಡಿಛಿe ಕೂಡ ಆನೆಗಳ hಚಿbiಣಚಿಣ ಮತ್ತು ಛಿoಡಿಡಿiಜoಡಿs ಸಂರಕ್ಷಣೆಯ ಸಂದರ್ಭದಲ್ಲಿ ಅರಣ್ಯ ಪ್ರದೇಶದೊಳಗೆ ಅಥವಾ ಅಂಚಿನಲ್ಲಿರುವ ಅನಧಿಕೃತ ಒತ್ತುವರಿ ಭೂಮಿಯನ್ನು ಮರಳಿ ಪಡೆಯುವ ಸಾಧ್ಯತೆಯನ್ನು ಪರಿಗಣಿಸುವಂತೆ ಸೂಚಿಸಿತ್ತು.

ಅಂದರೆ ಕಾಡಿನ ಒತ್ತುವರಿ ಎಂಬ ಪ್ರಶ್ನೆ ಇಂದಿನ ಚರ್ಚೆಯಲ್ಲಿ ಹೊಸದಾಗಿ ಹುಟ್ಟಿಕೊಂಡದ್ದಲ್ಲ. ಇದು ವರ್ಷಗಳ ಹಿಂದೆಯೇ ಸರ್ಕಾರದ ತಜ್ಞರ ಮುಂದೆ ಬಂದಿದ್ದ ವಿಷಯ.

ಕರ್ನಾಟಕ ಹೈಕೋರ್ಟ್ ದಾಖಲೆಯಲ್ಲಿ ಉಲ್ಲೇಖವಾಗಿರುವ ಹಳೆಯ ಅಧ್ಯಯನವೊಂದರ ಪ್ರಕಾರ, ಕೊಡಗಿನ ಅರಣ್ಯ ಪ್ರದೇಶವು ೧೯೭೭ರಲ್ಲಿ ೨,೫೬೬ ಚದರ ಕಿಲೋಮೀಟರ್ ಇದ್ದದ್ದು ೧೯೯೭ರಲ್ಲಿ ೧,೮೪೧ ಚದರ ಕಿಲೋಮೀಟರ್‌ಗೆ ಇಳಿದಿತ್ತು. ಇದು ಹಳೆಯ ಅಧ್ಯಯನದ ಅಂಕಿ. ಇಂದಿನ ಕೊಡಗಿನ ಅರಣ್ಯ ವಿಸ್ತೀರ್ಣ ಎಂದು ಇದನ್ನು ಪರಿಗಣಿಸಬಾರದು. ಆದರೆ ಸುಮಾರು ಎರಡು ದಶಕಗಳ ಅವಧಿಯಲ್ಲೇ ಇಷ್ಟು ಬದಲಾವಣೆ ದಾಖಲಾಗಿದ್ದರೆ, ಒಂದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ೧೯೯೭ರಿಂದ ಇಂದಿನವರೆಗೆ ಕೊಡಗಿನ ಕಾಡು ಮತ್ತು ಅದರ ಸುತ್ತಲಿನ ಭೂಬಳಕೆಯಲ್ಲಿ ಏನೇನು ಬದಲಾವಣೆಗಳಾಗಿರಬಹುದು?

ಇಂದಿನ ಸ್ಥಿತಿ ಎಷ್ಟು ಬದಲಾಗಿದೆ? ಎಷ್ಟು ಅರಣ್ಯ ಪ್ರದೇಶ ಅಕ್ಷುಣ್ಣವಾಗಿದೆ? ಎಷ್ಟು ಪ್ರದೇಶ ತುಂಡಾಗಿದೆ? ಎಷ್ಟು ಸಂಚಾರ ಮಾರ್ಗಗಳು ಬದಲಾಗಿವೆ? ಎಷ್ಟು ಪ್ರದೇಶದಲ್ಲಿ ಮಾನವ ಚಟುವಟಿಕೆ ವಿಸ್ತರಿಸಿದೆ? ಇದಕ್ಕೆ ಇಂದಿನ ಅಧಿಕೃತ ಅಂಕಿಅAಶ ಬೇಕು. ಊಹೆ ಅಲ್ಲ. ಆದರೆ ಹಳೆಯ ಅಂಕಿ ಮಾತ್ರವೇ ಸಾಕಷ್ಟು ಪ್ರಶ್ನೆ ಹುಟ್ಟಿಸುತ್ತದೆ. ಏಕೆಂದರೆ ಇದು ಕೇವಲ ಮರಗಳ ಸಂಖ್ಯೆ ಕಡಿಮೆಯಾದ ಕಥೆಯಲ್ಲ. ಆನೆಗಳ ಬದುಕಿನ ದಾರಿ ಎಷ್ಟು ಕಿರಿದಾಗಿದೆ ಎಂಬ ಪ್ರಶ್ನೆಯೂ ಹೌದು. ಇಲ್ಲಿ ಮತ್ತೊಂದು ಎಚ್ಚರಿಕೆ ಅಗತ್ಯ. ಪ್ರತಿ ಕಾಫಿ ತೋಟವನ್ನೂ ಕಾಡಿನ ಒತ್ತುವರಿ ಎಂದು ಹೇಳಲಾಗುವುದಿಲ್ಲ. ಕೊಡಗಿನ ಕಾಫಿ ತೋಟಗಳು ಕೂಡ ಈ ಭೂದೃಶ್ಯದ ಒಂದು ಭಾಗ. ವೈಜ್ಞಾನಿಕ ಅಧ್ಯಯನಗಳು ಆನೆಗಳು ಛಿoಜಿಜಿee ಟಚಿಟಿಜsಛಿಚಿಠಿeಗಳ ಮೂಲಕವೂ ಸಂಚರಿಸುತ್ತವೆ ಎಂದು ತೋರಿಸಿವೆ.

ಹೀಗಾಗಿ ವಿಷಯವನ್ನು ಕಪ್ಪು-ಬಿಳುಪಾಗಿ ನೋಡುವುದಕ್ಕಿಂತ, ಯಾವ ಭೂಮಿ ಕಾನೂನುಬದ್ಧವಾಗಿದೆ, ಯಾವುದು ಅಕ್ರಮ, ಯಾವ ಪ್ರದೇಶ ಆನೆಯ ಛಿoಡಿಡಿiಜoಡಿ ಯಾವ ಭೂಬಳಕೆ ಬದಲಾವಣೆ ಆನೆಗಳ ಚಲನವಲನಕ್ಕೆ ಅಡ್ಡಿಯಾಗಿದೆ ಎಂಬುದನ್ನು ದಾಖಲೆಗಳ ಆಧಾರದಲ್ಲಿ ನೋಡಬೇಕಾಗಿದೆ.

ಆನೆ ತಡೆಯಲು ನಾವು ಮಾಡಿದ್ದೇನು?

ಆನೆ-ಮನುಷ್ಯ ಸಂಘರ್ಷ ಹೊಸದಲ್ಲ. ಆನೆಗಳು ನಾಡಿಗೆ ಬರುವುದನ್ನು ತಡೆಯಲು ಹಲವು ವರ್ಷಗಳಿಂದ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಹಲವು ವಿಧಾನಗಳನ್ನು ಪ್ರಯೋಗಿಸಲಾಗುತ್ತಿದೆ. ವಿದ್ಯುತ್ ಮತ್ತು ಸೌರ ವಿದ್ಯುತ್ ಬೇಲಿ, ಆನೆ ಕಂದಕ, ರೈಲು ಹಳಿಗಳ ಬಳಿ ತಡೆಗೋಡೆ ಅಥವಾ ಬ್ಯಾರಿಕೇಡ್, ಜೇನುಗೂಡು ಆಧಾರಿತ ತಡೆ, ಮೆಣಸಿನಕಾಯಿ ಆಧಾರಿತ ತಡೆ ಕ್ರಮಗಳು, ಕಾವಲು ತಂಡಗಳು, ಮುಂಚಿತ ಎಚ್ಚರಿಕೆ ವ್ಯವಸ್ಥೆ, ಆನೆಗಳನ್ನು ಓಡಿಸುವ ಕಾರ್ಯಾಚರಣೆಗಳು-ಹೀಗೆ ಹಲವು ಪ್ರಯತ್ನಗಳು ನಡೆದಿವೆ.

ಇವುಗಳಲ್ಲಿ ಕೆಲವು ಸ್ಥಳೀಯವಾಗಿ ಪರಿಣಾಮಕಾರಿ. ಆದರೆ ಯಾವುದೂ ಎಲ್ಲೆಡೆ ಶಾಶ್ವತ ಪರಿಹಾರವಾಗಿಲ್ಲ. ವಿದ್ಯುತ್ ಬೇಲಿ ಹಾಕಿದರೆ ಆನೆ ಮತ್ತೊಂದು ದಾರಿಯನ್ನು ಹುಡುಕಬಹುದು. ಕಂದಕ ನಿರ್ಮಿಸಿದರೆ ಅದರ ನಿರ್ವಹಣೆ ಮತ್ತು ಮಳೆಗಾಲದ ಸಮಸ್ಯೆಗಳು ಎದುರಾಗಬಹುದು. ರೈಲು ಹಳಿ ಅಥವಾ ಬ್ಯಾರಿಕೇಡ್ ಒಂದು ಕಡೆ ಆನೆಯ ಪ್ರವೇಶವನ್ನು ತಡೆಯಬಹುದು; ಆದರೆ ಅದರ ಸಹಜ ಸಂಚಾರದ ದಾರಿ ಸಂಪೂರ್ಣವಾಗಿ ಮುಚ್ಚಿದರೆ, ಆನೆ ಬೇರೆ ಮಾರ್ಗ ಹುಡುಕುವ ಸಾಧ್ಯತೆಯೂ ಇದೆ. ಆನೆಗಳನ್ನು ಪದೇಪದೇ ಕಾಡಿಗಟ್ಟುವುದೂ ಶಾಶ್ವತ ಪರಿಹಾರವಲ್ಲ.

ಒಂದೇ ಪ್ರದೇಶಕ್ಕೆ ಅವು ಮತ್ತೆ ಮತ್ತೆ ಬರುತ್ತಿದ್ದರೆ, ಅವು ಯಾಕೆ ಆ ಪ್ರದೇಶವನ್ನೇ ಆರಿಸುತ್ತಿವೆ? ಎಂಬ ಪ್ರಶ್ನೆ ಕೇಳಬೇಕು.

ಅದರರ್ಥ ಈ ಕ್ರಮಗಳು ಪ್ರಯೋಜನವಿಲ್ಲ ಎಂದಲ್ಲ. ಜನರ ಜೀವ ರಕ್ಷಿಸಲು ತಕ್ಷಣದ ಹಂತದಲ್ಲಿ ಇವು ಬಹಳ ಅಗತ್ಯ. ಆದರೆ ಸಮಸ್ಯೆ ಇರುವ ಪ್ರತಿಯೊಂದು ಪ್ರದೇಶಕ್ಕೂ ಒಂದೇ ಮಾದರಿಯ ಪರಿಹಾರವನ್ನು ಅಳವಡಿಸುವ ಬದಲು, ಆನೆಯ ಚಲನೆಯ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸ್ಥಳೀಯ ಪರಿಹಾರ ರೂಪಿಸಬೇಕಾಗಿದೆ.

ಎಲ್ಲಿ ವಿದ್ಯುತ್ ಬೇಲಿ ಬೇಕು? ಎಲ್ಲಿ ರೈಲು ಹಳಿ ಅಥವಾ ಬ್ಯಾರಿಕೇಡ್ ಅಗತ್ಯ? ಎಲ್ಲಿ ಕಂದಕ ಪರಿಣಾಮಕಾರಿ? ಎಲ್ಲಿ ಛಿoಡಿಡಿiಜoಡಿ ಅನ್ನು ಮುಕ್ತವಾಗಿಡಬೇಕು? ಎಲ್ಲಿ ಮುಂಚಿತ ಎಚ್ಚರಿಕೆ ವ್ಯವಸ್ಥೆ ಬೇಕು?

ಇದನ್ನು ಪ್ರತಿ ಪ್ರದೇಶದ ಭೌಗೋಳಿಕ ಸ್ಥಿತಿ ಮತ್ತು ಆನೆಗಳ ಚಲನೆಯ ಆಧಾರದ ಮೇಲೆ ನಿರ್ಧರಿಸಬೇಕು.

ಇಲ್ಲದಿದ್ದರೆ ನಾವು ವರ್ಷಗಳಿಂದ ಮಾಡುತ್ತಿರುವ ಕೆಲಸ ಒಂದೇ ಆಗುತ್ತದೆ. ಆನೆ ಬಂದಾಗ ತಡೆಯುವುದು... ಹೋದಾಗ ಮರೆತುಬಿಡುವುದು... ಮತ್ತೆ ಬಂದಾಗ ಅದೇ ಕ್ರಮವನ್ನು ಪುನರಾವರ್ತಿಸುವುದು. ಆದರೆ ಸಂಘರ್ಷದ ಮೂಲ ಕಾರಣವನ್ನು ಬದಲಾಯಿಸದಿದ್ದರೆ, ತಡೆಗೋಡೆಗಳು ಬದಲಾಗಬಹುದು; ಸಂಘರ್ಷ ಮಾತ್ರ ಬದಲಾಗುವುದಿಲ್ಲ.

ಆನೆಗಳ ಸಂಖ್ಯೆ ಹೆಚ್ಚಾಗಿದೆ... ಸರಿ. ಆದರೆ?

ಆನೆಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಿರಾಕರಿಸುವ ಅಗತ್ಯವಿಲ್ಲ. ಆನೆಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಪ್ರಶ್ನೆಯೂ ಇರಬೇಕು. ಆದರೆ ಅದನ್ನು ಮಾತ್ರ ಪರಿಹಾರ ಎಂದು ಹೇಳುವುದೂ ಸರಿಯಲ್ಲ. ಏಕೆಂದರೆ ಆನೆಗಳ ಸಂಖ್ಯೆ ಕಡಿಮೆ ಮಾಡಿದರೂ ಅವುಗಳ ಕಾಡಿನ ದಾರಿ ಮುಚ್ಚಿದ್ದರೆ? ಆನೆಗಳ hಚಿbiಣಚಿಣ ತುಂಡಾಗಿದ್ದರೆ? ಆಹಾರ ಮತ್ತು ನೀರು ಸಿಗದಿದ್ದರೆ? ಆಗ ಸಮಸ್ಯೆ ಮತ್ತೆ ಬರುತ್ತದೆ.

ಹಾಗಾಗಿ ಮೊದಲು ಕೇಳಬೇಕಾದ ಪ್ರಶ್ನೆ. ಆನೆಗಳ ಸಂಖ್ಯೆ ಎಷ್ಟು? ಅದಾದ ನಂತರ ಕೇಳಬೇಕಾದ ಪ್ರಶ್ನೆ. ಆನೆಗಳಿಗೆ ಬೇಕಾದಷ್ಟು ನಿರಂತರ hಚಿbiಣಚಿಣ ಎಷ್ಟು? ಸಂತಾನೋತ್ಪತ್ತಿ ನಿಯಂತ್ರಣದ ಪ್ರಶ್ನೆಯೂ ಬರಲಿ ಇಲ್ಲಿ ಒಂದು ವೈಜ್ಞಾನಿಕ ಪ್ರಶ್ನೆ ಎತ್ತಬಹುದು. ಆನೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸಬಹುದೇ?

ಜಗತ್ತಿನ ವಿವಿಧ ಭಾಗಗಳಲ್ಲಿ eಟeಠಿhಚಿಟಿಣ ಜಿeಡಿಣiಟiಣಥಿ ಛಿoಟಿಣಡಿoಟ ಕುರಿತು ಅಧ್ಯಯನಗಳು ನಡೆದಿವೆ. Immuಟಿoಛಿoಟಿಣಡಿಚಿಛಿeಠಿಣioಟಿನಂತಹ ವಿಧಾನಗಳೂ ಸಂಶೋಧನೆಗೆ ಒಳಪಟ್ಟಿವೆ. ಆದರೆ ಕಾಡಿನಲ್ಲಿ ಮುಕ್ತವಾಗಿ ಸಂಚರಿಸುವ ದೊಡ್ಡ ಸಂಖ್ಯೆಯ ಆನೆಗಳಿಗೆ ಇದನ್ನು ಅನುಷ್ಠಾನಗೊಳಿಸುವುದು ಸುಲಭದ ಕೆಲಸವಲ್ಲ. ಯಾವ ಆನೆಗೆ ಚಿಕಿತ್ಸೆ? ಎಷ್ಟು ಪ್ರಮಾಣದಲ್ಲಿ? ಎಷ್ಟು ವರ್ಷ? ಅದರ ಪರಿಸರ ಪರಿಣಾಮ ಏನು? ಆನೆಯ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮವೇನು?

ಇವೆಲ್ಲ ಅಧ್ಯಯನ ಮಾಡಬೇಕು.

ಮತ್ತೊಂದು ಮುಖ್ಯ ಸಂಗತಿ-ಆನೆಗಳು ನಿಧಾನವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳು. ಹೀಗಾಗಿ ಇಂದು ಸಂತಾನೋತ್ಪತ್ತಿ ನಿಯಂತ್ರಿಸಿದರೆ ನಾಳೆ ಆನೆಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಅದನ್ನು ದೀರ್ಘಾವಧಿಯ ನಿರ್ವಹಣಾ ಆಯ್ಕೆಯಾಗಿ ಮಾತ್ರ ನೋಡಬೇಕಾಗುತ್ತದೆ. ಆದರೆ ಈ ಪ್ರಶ್ನೆಯನ್ನೇ ಚರ್ಚಿಸಬಾರದೆಂದು ಹೇಳುವುದೂ ಸರಿಯಲ್ಲ.

ತಜ್ಞರು, ಅರಣ್ಯ ಇಲಾಖೆ, ವಿಜ್ಞಾನಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸೇರಿ ಇದರ ಸಾಧ್ಯತೆ-ಅಸಾಧ್ಯತೆ ಕುರಿತು ಮುಕ್ತವಾಗಿ ಚರ್ಚಿಸಬೇಕಾದ ಸಮಯ ಬಂದಿದೆ.

ಹಾಗಾದರೆ ಮನುಷ್ಯನ ಜೀವ?

ಇಲ್ಲಿ ಮತ್ತೊಂದು ವಿಷಯ ಸ್ಪಷ್ಟವಾಗಬೇಕು. ವನ್ಯಜೀವಿ ಸಂರಕ್ಷಣೆ ಎಂಬ ಹೆಸರಿನಲ್ಲಿ ಮನುಷ್ಯನ ಜೀವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕಾಡಿನ ಅಂಚಿನಲ್ಲಿ ಬದುಕುತ್ತಿರುವ ರೈತ, ಕಾರ್ಮಿಕ, ಕೂಲಿ ಕಾರ್ಮಿಕ, ಕಾಫಿ ತೋಟದ ಕೆಲಸಗಾರ, ಕಾಫಿ ಬೆಳೆಗಾರರು, ಅವನಿಗೆ ಪ್ರತಿದಿನ ಕಾಡಿನ ಸಿದ್ಧಾಂತಗಳಿಗಿAತ ತನ್ನ ಜೀವ ಮುಖ್ಯ.

ಅವನಿಗೆ ರಾತ್ರಿ ಮನೆಗೆ ಸುರಕ್ಷಿತವಾಗಿ ತಲುಪುವುದು ಮುಖ್ಯ. ಅವನ ಹೊಲಕ್ಕೆ, ತೋಟಕ್ಕೆ ಹೋಗಿ ಮರಳಿ ಬರುವುದು ಮುಖ್ಯ. ಅವನ ಕುಟುಂಬದ ಭವಿಷ್ಯ ಮುಖ್ಯ.

ಅದೇ ಸಮಯದಲ್ಲಿ ಆನೆಯ ಬದುಕನ್ನೂ ನಿರ್ಲಕ್ಷಿಸಲಾಗದು. ಆನೆ ಕೂಡ ಈ ಪರಿಸರ ವ್ಯವಸ್ಥೆಯ ಒಂದು ಭಾಗ. ಹೀಗಾಗಿ ಪರಿಹಾರ “ಆನೆ ಉಳಿಸೋಣ” ಅಥವಾ “ಮನುಷ್ಯ ಉಳಿಸೋಣ” ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸುವುದಲ್ಲ. ಇಬ್ಬರೂ ಉಳಿಯುವ ವ್ಯವಸ್ಥೆ ನಿರ್ಮಿಸುವುದು.

ಪ್ರತಿ ಸಾವು ನಂತರದ ಕ್ರಮ ಸಾಕಾಗುವುದಿಲ್ಲ ಇಂದು ಒಂದು ಸಾವು. ನಾಳೆ ಕಾರ್ಯಾಚರಣೆ. ಮತ್ತೆ ಆನೆಯನ್ನು ಕಾಡಿಗಟ್ಟುವುದು. ಪರಿಹಾರಧನ. ಕೆಲ ದಿನಗಳ ನಂತರ ಮತ್ತೆ ಅದೇ ಕಥೆ.

ಇದು ಸಮಸ್ಯೆಯ ನಿರ್ವಹಣೆ ಅಲ್ಲ. ಇದು ಸಮಸ್ಯೆಯ ಪರಿಣಾಮವನ್ನು ನಿರ್ವಹಿಸುವುದು. ನಿಜವಾದ ಪ್ರಶ್ನೆ ಬೇರೆ.

ಯಾವ ಪ್ರದೇಶದಲ್ಲಿ ಆನೆಗಳು ಪದೇಪದೇ ಬರುತ್ತಿವೆ? ಯಾವ ದಾರಿಯಲ್ಲಿ ಬರುತ್ತಿವೆ? ಆ ದಾರಿ ಎಲ್ಲಿ ಆರಂಭವಾಗುತ್ತದೆ? ಎಲ್ಲಿ ಮುಗಿಯುತ್ತದೆ? ಅಲ್ಲಿ ಏನು ಬದಲಾಗಿದೆ?

ಕಳೆದ ಹತ್ತು ವರ್ಷಗಳಲ್ಲಿ ಭೂಬಳಕೆ ಹೇಗೆ ಬದಲಾಗಿದೆ? ಯಾವುದೇ ಒತ್ತುವರಿ ಇದೆಯೇ? ಯಾವುದೇ ರಸ್ತೆ ಅಥವಾ ನಿರ್ಮಾಣ ಛಿoಡಿಡಿiಜoಡಿ ಅನ್ನು ಕತ್ತರಿಸುತ್ತಿದೆಯೇ? ಆ ಪ್ರದೇಶದಲ್ಲಿ ಆಹಾರ-ನೀರಿನ ಲಭ್ಯತೆ ಹೇಗಿದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು.

ಕೊಡಗಿಗೆ ಬೇಕಿರುವುದು ಕೇವಲ ಆನೆ ಓಡಿಸುವ ಕಾರ್ಯಾಚರಣೆ ಅಲ್ಲ. ಕೊಡಗಿನಲ್ಲಿ ಪ್ರತಿ ಆನೆ ದಾಳಿಯ ಸ್ಥಳವನ್ನು ಉIS ನಕ್ಷೆಯಲ್ಲಿ ಗುರುತಿಸಬಹುದು. ಆನೆಗಳ movemeಟಿಣ ಜಚಿಣಚಿ ಜೊತೆ ಹೋಲಿಸಬಹುದು. ಅರಣ್ಯ ಇಲಾಖೆಯ ದಾಖಲೆಗಳನ್ನು ನೋಡಬಹುದು. ಖeveಟಿue ಡಿeಛಿoಡಿಜs ಪರಿಶೀಲಿಸಬಹುದು. Sಚಿಣeಟಟiಣe imಚಿgeಡಿಥಿ ಮೂಲಕ ಕಳೆದ ಹತ್ತು-ಇಪ್ಪತ್ತು ವರ್ಷಗಳ ಭೂಬಳಕೆಯ ಬದಲಾವಣೆ ನೋಡಬಹುದು. ಅಕ್ರಮ ಒತ್ತುವರಿ ಇರುವ ಪ್ರದೇಶಗಳನ್ನು ಗುರುತಿಸಬಹುದು. ಆನೆಗಳ ಛಿoಡಿಡಿiಜoಡಿಗಳನ್ನು ಗುರುತಿಸಬಹುದು. ಮನುಷ್ಯ-ಆನೆ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಗೆ ಪ್ರತ್ಯೇಕ ನಿರ್ವಹಣಾ ಯೋಜನೆ ರೂಪಿಸಬಹುದು. ಇದು ಸಾಧ್ಯವಿಲ್ಲದ ಕೆಲಸವಲ್ಲ. ಪ್ರಶ್ನೆ ಇರುವುದು-ಅದನ್ನು ಮಾಡುವಷ್ಟು ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ ಇದೆಯೇ? ಕೊಡಗು ಒಂದು ಎಚ್ಚರಿಕೆಯ ಗಂಟೆ ಕೊಡಗು ಕೇವಲ ಕರ್ನಾಟಕದ ಒಂದು ಜಿಲ್ಲೆ ಅಲ್ಲ. ಇದು ಪಶ್ಚಿಮ ಘಟ್ಟದ ಪ್ರಮುಖ ಪರಿಸರ ಭೂದೃಶ್ಯದ ಭಾಗ. ಇಲ್ಲಿ ನಡೆಯುತ್ತಿರುವ ಮಾನವ-ಆನೆ ಸಂಘರ್ಷವನ್ನು ಕೇವಲ “ಆನೆ ದಾಳಿ” ಎಂದು ನೋಡಿದರೆ ನಾವು ಪ್ರತಿಯೊಂದು ಘಟನೆಯನ್ನೂ ಪ್ರತ್ಯೇಕವಾಗಿ ನೋಡುತ್ತೇವೆ.

ಆದ್ದರಿಂದ ಕೊಡಗಿನ ಮಾನವ-ಆನೆ ಸಂಘರ್ಷವನ್ನು ಕೇವಲ ಆನೆಗಳ ಸಮಸ್ಯೆಯಾಗಿ ನೋಡಬಾರದು. ಇದು ಕಾಡಿನ ಸಮಸ್ಯೆ. ಇದು ಭೂಬಳಕೆಯ ಸಮಸ್ಯೆ. ಇದು ಆಡಳಿತದ ಸಮಸ್ಯೆ. ಇದು ಮನುಷ್ಯನ ಸುರಕ್ಷತೆಯ ಸಮಸ್ಯೆ. ಮತ್ತು ಮುಖ್ಯವಾಗಿ... ಇದು ಒಂದೇ ಭೂಮಿಯಲ್ಲಿ ಮನುಷ್ಯ ಮತ್ತು ಆನೆ ಇಬ್ಬರೂ ಹೇಗೆ ಬದುಕಬೇಕು ಎಂಬ ಪ್ರಶ್ನೆ. ಆನೆಗಳ ಸಂಖ್ಯೆಯನ್ನು ಎಣಿಸೋಣ. ಸಾವುಗಳ ಸಂಖ್ಯೆಯನ್ನೂ ಎಣಿಸೋಣ. ಆದರೆ ಅದಕ್ಕಿಂತ ಮುಖ್ಯವಾಗಿ ಆನೆಗಳಿಗೆ ಉಳಿದಿರುವ ಕಾಡನ್ನೂ ಎಣಿಸೋಣ. ಯಾಕೆಂದರೆ ಕಾಡು ಉಳಿದರೆ ಆನೆ ಉಳಿಯುತ್ತದೆ. ಆನೆ ಉಳಿದರೆ ಕಾಡಿನ ಒಂದು ಭಾಗ ಉಳಿಯುತ್ತದೆ. ಮತ್ತು ಕಾಡು ಉಳಿದರೆ... ಮನುಷ್ಯನ ಬದುಕೂ ಉಳಿಯುತ್ತದೆ.

- ರಂಜಿತ್ ಕವಲಪಾರ

೯೧೧೩೦೬೯೮೨೭