ನಾಪೋಕ್ಲು: ಇಲ್ಲಿನ ಅಂಕುರ್ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಲುವಾಗಿ ಸೈಕಲ್ ಜಾಥಾ ಹಾಗೂ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕೊಟ್ಟಮುಡಿ ಜಂಕ್ಷನ್‌ನಿAದ ಹಳೆ ತಾಲೂಕು ವರೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ಥಳೀಯ ಪೊಲೀಸ್ ಠಾಣೆಯ ಎ.ಎಸ್.ಐ ಪ್ರಕಾಶ್ ಉದ್ಘಾಟಿಸಿ ಶುಭ ಹಾರೈಸಿದರು.

ಸುತ್ತಮುತ್ತಲಿನ ಶಾಲೆಗಳ ೭೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅನಂತರ ಶಾಲೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ ಅವರು ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಓಟದ ಸ್ಪರ್ಧೆಯಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿಗಳಾದ ಧೀಮಂತ್ ಎಂ.ಎಸ್ ಪ್ರಥಮ ಸ್ಥಾನವನ್ನು, ಹರ್ಷಿತ್ ದ್ವಿತೀಯ ಸ್ಥಾನವನ್ನು ಹಾಗೂ ಶ್ರೀ ರಾಮ ಟ್ರಸ್ಟ್ ಶಾಲೆಯ ಲವ ಬಿ.ಜಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿನಿ ಶಿಖಾ ಮುತ್ತಮ್ಮ ಪಿ.ಎನ್ ಪ್ರಥಮ ಸ್ಥಾನವನ್ನು, ಕೆಪಿಎಸ್ ಶಾಲೆಯ ಫಾತಿಮತ್ ಫಿದಾ ದ್ವಿತೀಯ ಸ್ಥಾನವನ್ನು, ಅಂಕುರ್ ಶಾಲೆಯ ಕಾವೇರಮ್ಮ ಕೆ.ಎ ತೃತೀಯ ಬಹುಮಾನವನ್ನು ಮುಡಿಗೇರಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ, ಪ್ರಾಂಶುಪಾಲರಾದ ಮಮತಾ, ರಂಜನ್, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಈಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.